Composer : Shri Vadirajaru
ಜಯಪ್ರದನು ಜಗಕೆ ಶ್ರೀಹಯವದನ ಮೂರ್ತಿರೆ
ಭಯವ್ಯಾತಕೆ ಭಕ್ತ ಜನಕೆ ||ಪ||
ನಯದಿಂ ಗೆಲಿಸುವನು ನಾಲ್ದಿಕ್ಕಿನೊಳಗಿದ್ದ
ಮಾಯವಾದಿಗಳನ್ನು ||ಅ.ಪ.||
ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ
ನಾದಮಯನಾದ ದೇವ
ಭೇದವಿಲ್ಲದೆ ಎಲ್ಲ ಅಭೇದವೆಂಬುವರನ್ನು
ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ ||೧||
ಉದಯದಲಿ ಎದ್ದು ನರ ಸದಮಲಾತ್ಮಕನಾಗಿ
ಹೃದಯದೊಳಗೆ ಹರಿಯ ತಂದು ಮುಂದು
ಸದಯನು ಸದ್ವೃತ್ತಿ ಉದಯನು ನೀನೆನುತ
ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ ||೨||
ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ-
ಜಟ್ಟಿ ಮಧ್ವರಾಯರ ಭಜಿಸುತ ನಿತ್ಯ
ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ
ಉತ್ಕೃಷ್ಟ ಹಯವದನ ದೊರೆಯು ||೩||
jayapradanu jagake SrIhayavadana mUrtire
bhayavyAtake bhakta janake ||pa||
nayadiM gelisuvanu nAldikkinoLagidda
mAyavAdigaLannu ||a.pa.||
Adiyalli brahmanige bhItiyanu biDisida
nAdamayanAda dEva
bhEdavillade ella abhEdaveMbuvarannu
kAda bANalege taTTi mOdisi koluva ||1||
udayadali eddu nara sadamalAtmakanAgi
hRudayadoLage hariya taMdu muMdu
sadayanu sadvRutti udayanu nInenuta
dadhicOra kRuShNanna mudadi bhajiparige ||2||
duShTamallara ede meTTi mereva jaga-
jaTTi madhvarAyara bhajisuta nitya
iShTavanu bEDidare kaShTagaLanu kaLeva
utkRuShTa hayavadana doreyu ||3||
Leave a Reply