Avareetiyinda nee enna

Composer : Shri Vadirajaru

ಆವ ರೀತಿಯಿಂದ ನೀಯೆನ್ನ ಸಲಹುವಿ |
ಶ್ರೀವಿಭು ಹಯವದನ ||ಪ||

ಈ ವಿಧ ಭವದೊಳು ಇಷ್ಟು ಬವಣೆ ಪಟ್ಟೆ
ತಾವರೆದಳನಯನ ಹಯವದನ ||ಅ||

ಅಂಗನೆಯರಲ್ಲಿ ಅಧಿಕ ಮೋಹದಿಂದ
ಅಂಗಶೃಂಗಾರ ಮಾಡಿ |
ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ |
ಭಂಗಕ್ಕೆ ಗುರಿಯಾದೆನೊ, ಹಯವದನ ||೧||

ಕಾಮನ ಬಾಧೆಯ ತಾಳಲಾರದೆ ಕಂಡ |
ಕಾಮಿನಿಯರನು ಕೂಡಿ |
ನೇಮ ನಿಷ್ಠೆಯ ಬಿಟ್ಟು, ನಿನ್ನನೆ ಭಜಿಸದೆ |
ಪಾಮರನಾದೆನೊ, ಹಯವದನ ||೨||

ಹೀನಗುಣಗಳೆಲ್ಲ ಹಯಮುಖ ದೇವನೆ |
ನೀನೆಣಿಸದಲೆ ಕಾಯೊ |
ಜ್ಞಾನಿಗಳರಸನೆ ದಯವಿಟ್ಟು ನಿನ್ನನ್ನೇ |
ಧ್ಯಾನಿಸುವಂತೆ ಮಾಡೋ, ಹಯವದನ ||೩||


Ava rItiyiMda nIyenna salahuvi |
SrIviBu hayavadana ||pa||

I vidha BavadoLu iShTu bavaNe paTTe
tAvaredaLanayana hayavadana ||a||

aMganeyaralli adhika mOhadiMda
aMgaSRuMgAra mADi |
maMgaLAMgane ninna mahimeya pogaLade |
BaMgakke guriyAdeno, hayavadana ||1||

kAmana bAdheya tALalArade kaMDa |
kAminiyaranu kUDi |
nEma niShTheya biTTu, ninnane Bajisade |
pAmaranAdeno, hayavadana ||2||

hInaguNagaLella hayamuKa dEvane |
neeneNisadale kAyo |
j~jAnigaLarasane dayaviTTu ninnannE |
dhyAnisuvaMte mADO, hayavadana ||3||

Leave a Reply

Your email address will not be published. Required fields are marked *

You might also like

error: Content is protected !!