Composer : Shri Pranesha dasaru
ಪಾರ್ವತಿ ದಕ್ಷಕುಮಾರಿ ನಿನ್ನ |
ಸಾರ್ವೆ ಸಂತತ ಕುಜನಾರೀ ||ಆಹಾ||
ದೂರ್ವಾಸನರ್ಧಾಂಗಿ ಸರ್ವಜ್ಞೆ ಯನ್ನಯ ||
ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ||ಪ||
ದುರ್ಗೆ ಭವಾನಿ ರುದ್ರಾಣಿ, ಗೌರಿ |
ಸ್ವರ್ಗ ಜನಾರಾಧ್ಯ-ಮಾನಿ ||
ಸೇರೆ ದುರ್ಗುಣದವರ ಸುಜ್ಞಾನಿ |
ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||
ನಿರ್ಗುಣರಾದ್ ಉತ್ತಮರ್ಗೆ ವೊಲಿವ ಅಪ |
ವರ್ಗದ ನಾಳೆ ನರರ್ಗೆ ಮಣಿಸದಿರೆ ||೧||
ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು |
ಮಂಡೆಯವನಸೊಸೆ | ಯಮ್ಮಾ |
ನಾಡೆ ಕಂಡು ಭಜಿಪೆ ನಿತ್ಯ ನಿಮ್ಮ |
ಪಾದ ಪುಂಡರೀಕ ದ್ವಯವಮ್ಮಾ ||ಆಹಾ||
ಉಂಡು ವಿಷವ ನಿನ್ನ ಗಂಡ ಬಳಲಿ ಕೈ |
ಕೊಂಡೌಷಧ ತಂಡ ತಂಡದಲೆನಗೀಯೆ ||೨||
ಪಾವಕನೊಳು ಪೊಕ್ಕ ಪತಿವ್ರತೆ |
ಯಾವಾಗ ಮಾನಿ ಸತ್ಕಥೆ |
ಯಲ್ಲಿ ಭಾವನೆ ಕೊಡೆ ಪ್ರತಿ ಪ್ರತಿ |
ಜಾವ ಜಾವಕೆ ಷಣ್ಮುಖ ಮಾತೆ ||ಆಹಾ||
ಕೋವಿದರೊಡತಿ ಕೇಳಾವಾಗ ವೈರಾಗ್ಯ |
ವೀವದು ದುರಾಪೇಕ್ಷೆ ನಾ ವೊಲ್ಲೆನೆಂದೆಂದೂ ||೩||
ಬೇಡಿದಭೀಷ್ಟವ ಕೊಡುವೆ |
ದಯ ಮಾಡಿ ಭಕ್ತರ ಕರ ಪಿಡಿವೆ |
ದೋಷ ಕಾಡುಳಿಯದಂತೆ ಸುಡುವೆ |
ನಿನ | ಗೀಡೆ ಮಹದ್ ಭಯ ಕಡಿವೆ ||ಆಹಾ||
ರೂಢೀಶ ಶಿವನೆಂದು ಆಡಿಸದಿರು ಬುದ್ಧಿ |
ಗೇಡಿ ದಾನವರಂತೆ ನೀಡು ಶ್ರೀಹರಿ ಸೇವೆ ||೪||
ಮೇಶ ಪ್ರಾಣೇಶ ವಿಠ್ಠಲನೆ |
ಜಗದೀಶನೆಂಬುವ ದಿವ್ಯ-ಜ್ಞಾನೆ | ಕೊಟ್ಟು |
ಪೋಷಿಪುದೆನ್ನ ಸುಜಾಣೆ |
ನೀನುದಾಸಿಸೆ ನಾನಾರ ಕಾಣೆ ||ಆಹಾ||
ಈಶೆ ಪಂಚ ಮಹಾ ದೋಷಿ ಬಿಡದೆ ನಿತ್ಯಾ |
ಈ ಶರೀರದೊಳಿಹ್ಯ ಘಾಸಿ ಮಾಡುವನನ್ನು ||೫||
pArvati dakShakumAri ninna |
sArve saMtata kujanArI ||AhA||
dUrvAsanardhAMgi sarvaj~je yannaya ||
cArvAka mati kILi tOrvadu supathava ||pa||
durge BavAni rudrANi, gauri |
svarga janArAdhya-mAni ||
sEre durguNadavara suj~jAni |
Baktavarga pOShaka Suka-vANI ||AhA||
nirguNarAd uttamarge voliva apa |
vargada nALe nararge maNisadire ||1||
caMDi kAtyAyini ummA nAlku |
maMDeyavanasose | yammA |
nADe kaMDu Bajipe nitya nimma |
pAda puMDarIka dvayavammA ||AhA||
uMDu viShava ninna gaMDa baLali kai |
koMDauShadha taMDa taMDadalenagIye ||2||
pAvakanoLu pokka pativrate |
yAvAga mAni satkathe |
yalli BAvane koDe prati prati |
jAva jAvake ShaNmuKa mAte ||AhA||
kOvidaroDati kELAvAga vairAgya |
vIvadu durApEkShe nA volleneMdeMdU ||3||
bEDidaBIShTava koDuve |
daya mADi Baktara kara piDive |
dOSha kADuLiyadaMte suDuve |
nina | gIDe mahad Baya kaDive ||AhA||
rUDhISa SivaneMdu ADisadiru buddhi |
gEDi dAnavaraMte nIDu SrIhari sEve ||4||
mESa prANESa viThThalane |
jagadISaneMbuva divya-j~jAne | koTTu |
pOShipudenna sujANe |
nInudAsise nAnAra kANe ||AhA||
ISe paMca mahA dOShi biDade nityA |
I SarIradoLihya GAsi mADuvanannu ||5||
Leave a Reply