Raghavendra Rayara Adige

Composer : Shri Kamalanabha vittala

By Smt.Shubhalakshmi Rao

ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ
ನೀಗಿ ಭವದ ಬಂಧದಿಂದ ಮುಕ್ತರಾಗಿರೊ [ಪ]

ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ
ಕಂತುಪಿತನ ಭಕ್ತರಿಗೆ ಸಂತಸ ನೀಡುವರ
ಪಂಕಜನಾಭನ ಕಿಂಕರರ ಚಿಂತೆಯ ನೀಗುವರ
ಶಂಖು ಕರ್ನರಿವರೆನ್ನುತ ಕಂಕಣ ಕಟ್ಟಿಹರ [೧]

ಕಂಗೊಳಿಪ ಕೋರೆಯಿಂದ ಬಂದ ಭದ್ರೆಯ ತೀರದಿ
ಚಂದದಿಂದ ಮೆರೆವ ರಾಘ-ವೇಂದ್ರ ರಾಯ
ಕೊಂಡಾಡಿದರೆ ಮನಕೆ ಸಂಭ್ರಮ ನೀಡುವರು
ಪೊಂದಿದ ಪಾಪಗಳ ಕೆಳೆದು ಚಂದದಿ ಸಲಹುವರು [೨]

ಕರುಣದಿಂದ ಭಕ್ತರನೆಲ್ಲ ಸಲಹುತಿರ್ಪರ
ಕಮಲನಾಭ ವಿಠಲನಂಘ್ರಿ ಭಜನೆ ಮಾಳ್ಪರ
ಕನಕಮಯ ಮಂಟಪದಲ್ಲಿ ಮರೆಯುತಿರ್ಪರ
ಕರೆದು ಪ್ರಾರ್ಥಿಸುವವರ ಮನಕೆ ಹರುಷ ತೋರ್ಪರ [೩]


rAGavEMdra rAyaraDige bAgi namisiro
nIgi Bavada baMdhadiMda muktarAgiro [pa]

SaMkeyillade varagaLa koTTu ciMte harisuvara
kaMtupitana Baktarige saMtasa nIDuvara
paMkajanABana kiMkarara ciMteya nIguvara
SaMKu karnarivarennuta kaMkaNa kaTTihara [1]

kaMgoLipa kOreyiMda baMda Badreya tIradi
caMdadiMda mereva rAGa-vEMdra rAya
koMDADidare manake saMBrama nIDuvaru
poMdida pApagaLa keLedu caMdadi salahuvaru [2]

karuNadiMda Baktaranella salahutirpara
kamalanABa viThalanaMGri Bajane mALpara
kanakamaya maMTapadalli mareyutirpara
karedu prArthisuvavara manake haruSha tOrpara [3]

Leave a Reply

Your email address will not be published. Required fields are marked *

You might also like

error: Content is protected !!