Innu daya barade

Composer : Shri Purandara dasaru

By Shri Krishnan

ಇನ್ನೂ ದಯಬಾರದೆ ದಾಸನ ಮೇಲೆ
ಪನ್ನಗ ಶಯನ ಶ್ರೀ ಪರಮಪುರುಷ ಹರಿಯೇ [ಪ]

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನಾ ಯೋನಿಗಳಲ್ಲಿ ನಲಿದು ಪುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೇ ಗತಿಯೆಂದು ನಂಬಿದ ದಾಸನ ಮೇಲೆ || ೧ ||

ಕಾಮಾದಿ ಷಡ್ವರ್ಗ ಗಾಢಾಂಧಕಾರದಿ
ಪಾಮರನಾಗಿದ್ದ ಪಾತಕನು
ಶ್ರೀ ಮನೋಹರನೆ ಚಿತ್ತಜ ಜನಕನೆ
ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ || ೨ ||

ಮನೋವಾ ಕಾಯದಿಂದ ಮಾಡುವ ಕರ್ಮವು
ದಾನವಾಂತಕ ನಿನ್ನ ಅಧೀನವಲ್ಲವೆ
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ
ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ || ೩ ||


innU dayabArade dAsana mEle
pannaga Sayana SrI paramapuruSha hariyE [pa]

nAnA dESagaLalli nAnA kAlagaLalli
nAnA yOnigaLalli nalidu puTTi
nAnu nannadu eMba narakadoLage biddu
nInE gatiyeMdu naMbida dAsana mEle || 1 ||

kAmAdi ShaDvarga gADhAMdhakAradi
pAmaranAgidda pAtakanu
SrI manOharane cittaja janakane
nAmave gatiyeMdu naMbida dAsana mEle || 2 ||

manOvA kAyadiMda mADuva karmavu
dAnavAMtaka ninna adhInavallave
Enu mADidarEnu prANa ninnadu svAmi
SrInAtha puraMdara viThalana dAsana mEle || 3 ||

Leave a Reply

Your email address will not be published. Required fields are marked *

You might also like

error: Content is protected !!