Panduranganalli prarthana suladi – Vijayadasaru

Smt.Nandini Sripad , Blore

ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಪಾಂಡುರಂಗನಲ್ಲಿ ಆತ್ಮೋದ್ಧಾರ ಪ್ರಾರ್ಥನೆ ಸುಳಾದಿ
ರಾಗ: ವಲಚಿ
ಧ್ರುವತಾಳ
ವ್ಯಕ್ತನಾಗಿ ಶಕ್ತನಾಗಿ ವ್ಯಾಪಕ ಪಾಂಡುರಂಗ
ಭಕ್ತರಿಗಾಗಿ ಭಾಗ್ಯನಾಗಿ ಬಂದಾ ಬಂದಾ
ಪಂಢರಿರಾಯಾ
ಉಕ್ತಿಗಳೊಂದೊಂದು ಲಾಲಿಸಿದರೆ
ಮುಕ್ತಾರು ಬೆರಗಾಗುತಿಪ್ಪಾರು
ಮುಕ್ತಿ ಕ್ರೀಡೆ ಇಲ್ಲೆ ತೋರಿದಾ ತವಕಾದಿಂದಲಿ ಕುಣಿವುತ್ತ
ಮೌಕ್ತಿಕಹಾರಾ ನಾನಾಭರಣಾ ಧರಿಸೀ
ಗೋವಳ ಒಡಗೂಡಿ
ತ್ಯಕ್ತಾ ವೈದಿಕ ಮಿಕ್ಕಾದವರು ನೆರೆದು
ಜಯಜಯಾವೆನುತಿರೆ
ಯುಕ್ತಿವಂತರು ಯುಗಯುಗದಲಿ ಇದೆ ಪರಿ ನೋಳ್ಪರು
ಭಕ್ತಿಗೊಲಿಪಾದು ಈ ಪರಿ ಭಕ್ತಿ ಪಾಡಿದಾ
ಜನಕೆ ಮನಸಿನಲ್ಲಿ ಕನಸಿನಲ್ಲಿ
ಭುಕ್ತಿ ಮೊದಲಾದಾ ಸಂಪತ್ತುನೀವ
ಸುರಧೇನು ಇದ್ದಂತೇವೆ
ಭಕ್ತಿಗೊಲಿದು ಈ ಪರಿ
ರಿಕ್ತಾರಿಗತಿ ಪ್ರೀಯಾ ಪ್ರತೀಕಾದೊಳಗೆ ಇದ್ದಾ
ವ್ಯಕ್ತನಾದಾ ಯೋಗೀಶ್ವರಾ
ಶಕ್ತಿಪ್ರದಾ ಚಂದ್ರಭಾಗ ನಿವಾಸಾ
ವಿಜಯವಿಟ್ಠಲ ಸಕಲ ಭಕ್ತಿಗೊಲಿವುದು ಈ ಪರಿ || ೧ ||

ಮಟ್ಟತಾಳ

ಎಣೆಗಾಣೆನು ರಂಗನ ಕರುಣಾಕಟಾಕ್ಷಕ್ಕೆ
ಮನದಲ್ಲಿ ನೆನಿಸಿದ್ದು ಸಲಿಸುವ ಸಂಭ್ರಮದಿ
ಕುಣಿಕುಣಿದಾಡುವನು ಪದಗತಿಯನು ಬಿಡದೆ
ಮಣಿಭೂಷಣದಿಂದ ಗೋಪಿಯರೆಡಬಲದಿ
ಮಿನಗುತಿರೆ ಗೋಗಳು ಸುತ್ತಲು ಒಪ್ಪೆ
ಮುನಿ ಪುಂಡರೀಕನಿಗೆ ಅಂದೊಲಿದು ಬಂದಾತನೆ
ಈತನೆ ಕಾಣೊ
ಅನುಮಾನಗೊಳದೀರಿ ಆರ್ತಿಯು ಪೋಗೋದು
ಘನಮಹಿಮಾ ನಮ್ಮ ವಿಜಯವಿಟ್ಠಲಾ
ಮನುಜರೊಳಗೆ ಮನುಜರೂಪ ಧರಿಸಿ ಮೆರೆವ || ೨ ||

ತ್ರಿವಿಡಿತಾಳ

ಎಲ್ಲಿದ್ದರೇನಯ್ಯಾ ಭಕ್ತರಿಗೆ ಒಲಿವ ಶ್ರೀ –
ವಲ್ಲಭನ ಪ್ರೀತಿ ಅತಿ ಮಿಗಿಲು
ಕಲ್ಲು ಎನಿಸಲ್ಲಾ ಇದರಲ್ಲಿ ಪ್ರಲ್ಹಾದನ್ನಾ
ಸೊಲ್ಲಿಗೆ ಬಂದಂತೆ ಬಂದ ಕಾಣೋ
ವಲ್ಲಾವ ಜಾತಿಗಳು ಸುತ್ತಾ ಚಪ್ಪಳೆನಿಕ್ಕಿ
ನಿಲ್ಲದೆ ಕುಣಿವರು ದೇವನೊಡನೆ
ಬಲ್ಲಿದಾ ಹರಿಕಾಣೊ ಎಲ್ಲಿ ನೋಡಿದರೀತಗೆ
ಇಲ್ಲವೋ ಸಾಮ್ಯವಾಧಿಕ್ಯ ಇಹಪರದಲ್ಲಿ
ಎಲ್ಲಾ ಕ್ಷೇತ್ರದಕ್ಕಿಂತ ಇದೆ ಉತ್ತಮಾವೆನ್ನಿ
ಬಲ್ಲಾರು ಬೊಮ್ಮಾದಿ ಭಕ್ತರೆಲ್ಲಾ
ಗಲ್ಲಾ ಎರಡರ ಬೆಳಕು ಸೂರ್ಯಚಂದ್ರಮರಂತೆ
ಅಲ್ಲೆಲ್ಲ ತುಂಬಿದೆ ವೈಚಿತ್ರಿಕ
ಮಲ್ಲಮರ್ದನ ನಮ್ಮ ವಿಜಯವಿಟ್ಠಲಾ
ಎಲ್ಲೆ ಮಾಯದ ಬೊಂಬಿಯೊ ವರ್ನಿಸಲಾರಿನೊ || ೩ ||

ಅಟ್ಟತಾಳ

ನಿತ್ಯ ಸತ್ಯಕಾಮಾ ಪರಿಪರಿ ರೂಪದಲಿ
ಭೃತ್ಯರ ಸತ್ಯಕಾಮರ ಮಾಡಿ ಮನ್ನಿಸಿ
ಅತ್ಯಂತವಾಗಿ ಆಶಿಯ ಬಿಡಿಸಿ ಕೂಡ
ಹತ್ತೊಂದು ಇಂದ್ರಿಯಾ ಸುಖ ಬಡಿಸುವ ಜಾಣಾ
ತೊತ್ತಿನ ತೊತ್ತಿನ ಮಗನ ಮೊಮ್ಮಗ ನಾನು
ಎತ್ತಿ ಭವದಿಂದ ಕಡೆಗೆ ಹಾಕುವದಯ್ಯಾ
ಮೃತ್ಯು ನಿವಾರಣಾ ವಿಜಯವಿಟ್ಠಲಾ
ಸತ್ಯಸಂಕಲ್ಪಾ ನೀನಹುದೊ ಮತ್ತಹುದೊ || ೪ ||

ಆದಿತಾಳ

ಪಾವನ್ನ ನಾನಾದೆ ಪಾವನ್ನ ನಾನಾದೆ
ಪಾವನ್ನ ಮೂರುತಿಯಾ ಪಾದದರುಶನದಿಂದ
ಭಾವದಲಿ ಇಂದು ನೆನಸಿದ ಯಾತ್ರಿಫಲ
ಪೂವಿನೊಳಗೆ ಇಟ್ಟು ಕೊಟ್ಟಂತಾಯಿತೊ ಎನಗೆ
ದೇವನ್ನ ನಿಜರೂಪಾ ಸ್ವಪ್ನದಲ್ಲಿ ಕಂಡೆ
ಆವಜನ್ಮದ ಪುಣ್ಯ ಬಂದೊದಗಿತೊ ಸಿದ್ಧ
ಜೀವನ್ನಾ ಮುಕ್ತರಿಲ್ಲಿ ನಲಿದಾಡುವರು ಬಂದು
ಕೈವಲ್ಲ್ಯಾಗುವದಕ್ಕೆ ಸಂಶಯ ಇನ್ನುಂಟೆ
ಗೋವೆ ಗೋವಳರಾಯಾ ವಿಜಯವಿಟ್ಠಲಾ
ಕಾವ ಕಲ್ಮಷ ಕಳೆದು ಕಳೇವರದೊಳಗಿದ್ದೂ || ೫ ||

ಜತೆ

ಕಂಡು ಧನ್ಯ ನಾನಾದೆ ಕುಲಕೋಟಿಗಳ ಸಹಿತ
ಪುಂಡರೀಕವರದಾ ವಿಜಯವಿಟ್ಠಲಾ ವಿಟ್ಠಲನಾ ||


SrIvijayadAsArya viracita
SrIpAMDuraMganalli AtmOddhAra prArthane suLAdi
rAga: valaci
dhruvatALa
vyaktanAgi SaktanAgi vyApaka pAMDuraMga
BaktarigAgi BAgyanAgi baMdA baMdA
paMDharirAyA
uktigaLoMdoMdu lAlisidare
muktAru beragAgutippAru
mukti krIDe ille tOridA tavakAdiMdali kuNivutta
mauktikahArA nAnABaraNA dharisI
gOvaLa oDagUDi
tyaktA vaidika mikkAdavaru neredu
jayajayAvenutire
yuktivaMtaru yugayugadali ide pari nOLparu
BaktigolipAdu I pari Bakti pADidA
janake manasinalli kanasinalli
Bukti modalAdA saMpattunIva
suradhEnu iddaMtEve
Baktigolidu I pari
riktArigati prIyA pratIkAdoLage iddA
vyaktanAdA yOgISvarA
SaktipradA caMdraBAga nivAsA
vijayaviTThala sakala Baktigolivudu I pari || 1 ||

maTTatALa

eNegANenu raMgana karuNAkaTAkShakke
manadalli nenisiddu salisuva saMBramadi
kuNikuNidADuvanu padagatiyanu biDade
maNiBUShaNadiMda gOpiyareDabaladi
minagutire gOgaLu suttalu oppe
muni puMDarIkanige aMdolidu baMdAtane
Itane kANo
anumAnagoLadIri Artiyu pOgOdu
GanamahimA namma vijayaviTThalA
manujaroLage manujarUpa dharisi mereva || 2 ||

triviDitALa

elliddarEnayyA Baktarige oliva SrI –
vallaBana prIti ati migilu
kallu enisallA idaralli pralhAdannA
sollige baMdaMte baMda kANO
vallAva jAtigaLu suttA cappaLenikki
nillade kuNivaru dEvanoDane
ballidA harikANo elli nODidarItage
illavO sAmyavAdhikya ihaparadalli
ellA kShEtradakkiMta ide uttamAvenni
ballAru bommAdi BaktarellA
gallA eraDara beLaku sUryacaMdramaraMte
allella tuMbide vaicitrika
mallamardana namma vijayaviTThalA
elle mAyada boMbiyo varnisalArino || 3 ||

aTTatALa

nitya satyakAmA paripari rUpadali
BRutyara satyakAmara mADi mannisi
atyaMtavAgi ASiya biDisi kUDa
hattoMdu iMdriyA suKa baDisuva jANA
tottina tottina magana mommaga nAnu
etti BavadiMda kaDege hAkuvadayyA
mRutyu nivAraNA vijayaviTThalA
satyasaMkalpA nInahudo mattahudo || 4 ||

AditALa

pAvanna nAnAde pAvanna nAnAde
pAvanna mUrutiyA pAdadaruSanadiMda
BAvadali iMdu nenasida yAtriPala
pUvinoLage iTTu koTTaMtAyito enage
dEvanna nijarUpA svapnadalli kaMDe
Avajanmada puNya baMdodagito siddha
jIvannA muktarilli nalidADuvaru baMdu
kaivallyAguvadakke saMSaya innuMTe
gOve gOvaLarAyA vijayaviTThalA
kAva kalmaSha kaLedu kaLEvaradoLagiddU || 5 ||

jate

kaMDu dhanya nAnAde kulakOTigaLa sahita
puMDarIkavaradA vijayaviTThalA viTThalanA ||


Leave a Reply

Your email address will not be published. Required fields are marked *

You might also like

error: Content is protected !!