Composer : Shri Harapanahalli bheemavva
ಕಲ್ಲು ನಾಯೇನೋ ಕೈವಲ್ಯ ದಾಯಕನೆ
ಕಲ್ಲು ಕರುಣದಿಂದ್~ ಹೆಣ್ಣಾಗಿ ಇರಲು ಉದ್ಧಾರ ಕೇಳೊ ||ಪ||
ಉಡಬಲ್ಲೆ ಉಣಬಲ್ಲೆ ಉತ್ತಮ ಸಂಗ ಬಿಡಬಲ್ಲೆ
ನಡೆಯಬಲ್ಲೆನೊ ದುರ್ಮಾರ್ಗದಿಂದ
ಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆ
ಕಡಲಶಯನನ್ನ ನಾಮ ನುಡಿಯಲೊಂದರಿಯೆನೊ ||೧||
ಕಾಮಕ್ರೋಧವ ಬಲ್ಲೆ ಮತ್ಸರ ಮದ ಲೋಭ
ಮೋಹ ಬಲ್ಲೆನೊ ಬಾಂಧವ ಭವದಿ
ಭೇದ ಬುದ್ಧಿಯ ಬಲ್ಲೆ ಆದಿಮೂರುತಿ ನಿನ್ನ
ಪದದಿ ಭಕುತಿ ಪರಮಾದರೊಂದರಿಯೆನೊ ||೨||
ನಿಷ್ಠುರಡೌತ ಜನರ ನಿಂದಿಸುವುದು ಬಲ್ಲೆ
ಕಷ್ಟ ದಾರಿದ್ರ್ಯ ಒಲ್ಲೆನ್ನ ಬಲ್ಲೆ
ದುಷ್ಟ ಆಲ್ಪರಿಗೆ ಬಾಯ್ ತೆರೆಯ ಬಲ್ಲೆ
ಭೀಮೇಶ ಕೃಷ್ಣ ನಿನ್ನ ದಯ
ಬೇಡಿ ಕೊಂಬೋದೊಂದರಿಯೆನೊ ||೩||
kallu nAyEnO kaivalya dAyakane
kallu karuNadiMd~ heNNAgi iralu uddhAra kELo ||pa||
uDaballe uNaballe uttama saMga biDaballe
naDeyaballeno durmArgadiMda
kaDukOpadiMda kaThiNa mAtanADalu balle
kaDalaSayananna nAma nuDiyaloMdariyeno ||1||
kAmakrOdhava balle matsara mada lOBa
mOha balleno bAMdhava Bavadi
BEda buddhiya balle AdimUruti ninna
padadi Bakuti paramAdaroMdariyeno ||2||
niShThuraDauta janara niMdisuvudu balle
kaShTa dAridrya ollenna balle
duShTa Alparige bAy tereya balle
BImESa kRuShNa ninna daya
bEDi koMbOdoMdariyeno ||3||
Leave a Reply