Composer : Shri Amba bai
ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ ||ಪ||
ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯವೆ ||ಅ.ಪ||
ಧ್ಯಾನ ಆವಾಹನೆಯಿಂದ ಶ್ರೀ ವರನ ಸಹ
ನಾನಾ ಮಂಗಳ ದ್ರವ್ಯದಿ ನಾನು ಪೂಜಿಪೆ ||೧||
ವೃಂದಾವನದಿ ಮೆರೆಯುವವಳೆ ಸುಂದರಾಂಗಿಯೆ
ನಂದ ಕಂದಗೆ ಮಾಲೆಯವಳೆ ಇಂದು ಕರುಣಿಸೆ ||೨||
ಗೋಪಾಲಕೃಷ್ಣ ವಿಠ್ಠಲನ ರೂಪ ತೋರೆ ನೀ
ಶ್ರೀಪತಿಯ ಪಾದ ತೋರಿ ಕಾಪಾಡೆ ದೇವಿ ||೩||
pUjisuvene tuLasi ninna bEga salahe nI ||pa||
jAji mallige kusumadiMda pUjegaiyyuve ||a.pa||
dhyAna AvAhaneyiMda SrI varana saha
nAnA maMgaLa dravyadi nAnu pUjipe ||1||
vRuMdAvanadi mereyuvavaLe suMdarAMgiye
naMda kaMdage mAleyavaLe iMdu karuNise ||2||
gOpAlakRuShNa viThThalana rUpa tOre nI
SrIpatiya pAda tOri kApADe dEvi ||3||
Leave a Reply