Composer : Shri Krishna vittala
ಬಾರೊ ಕೃಷ್ಣ ಬಾರೊ ಕೃಷ್ಣ
ಬಾರೊ ಕೃಷ್ಣ ಮನದಸದನಕೆ (ಪ)
ತೋರೊ ಕೃಷ್ಣ ತೋರೊ ಕೃಷ್ಣ
ತೋರೊ ಕೃಷ್ಣ ಚರಣ ಬಡವಗೆ (ಅ)
ಶಿರವ ನಿಡುವೆ ಚರಣದಲ್ಲಿ
ದುರಿತಹರಣ ಕರುಣಭರಿತನೆ
ಸಿರಿಯ ರಮಣ ನೀರಜ ಸುಗುಣ
ಸುರರ ಪೊರೆವ ಧರಣಿ ಧರಿಪನೆ (೧)
ಸಿರಿಯಮದದಿ ಮರೆತೆ ನಿನ್ನ
ಕರೆದು ಪೊರೆಯೊ ಶರಣ ರಕ್ಷಕಾ
ಅರಿಯೆ ಮಹಿಮೆ ತರಳನಾನು
ತೊರೆಯೆ ಅಳಿವೆ ಕ್ಷೇಮ ಧಾಮನೆ (೨)
ವೇದವಿನುತ ಮೋದಭರಿತ
ಸಾಧುಚರಿತ ಆದಿ ಕಾರಣಾ
ಮಂದಮತಿಯು ಕುಂದನಳಿದು
ತಂದೆ ಕಾಯೊ ಬಂಧನೀಡ್ವನೇ (೩)
ನೀರಜಾಕ್ಷ ವಾರಿನಿಲಯ
ಸೂರಿಗಮ್ಯ ಪೂರ್ಣಧಾಮನೆ
ಸರ್ವನಾಮ ಸರ್ವಕರ್ಮ
ಸರ್ವ ಶ್ರೇಷ್ಟ ಸರ್ವ ಪ್ರೇರಕಾ (೪)
ಇಂದಿರೇಶ ನಂದಪೂರ್ಣ
ಸುಂದರಾಂಗ ಬಂಧಮೋಚಕ
ಕುಂದುರಹಿತ ವಂದನಾರ್ಹ
ಬಿಂದು ಬಿಂಬ ಕಂಧರಾಶ್ರಯ (೫)
ಭುವನ ವಿತತ ಭುವನಮೂಲ
ಭುವನ ಪಾಲ ಭುವನ ನಾಶಕ
ಭುವನ ಭಿನ್ನ ಸ್ತವನ ಪ್ರೀಯ
ಕವನವರಿಯೊ ಕವಿಬಿರೀಡಿತ (೬)
ಮುಕುತರೊಡೆಯ ಮುಕುತಿದಾತ
ಭಕುತ ಪ್ರೀಯ ಭಕುತಿದಾಯಕ
ಶಕುತ “ಶ್ರೀಕೃಷ್ಣವಿಠಲ”
ಯುಕುತಿ ಗೊಲಿಯ ಲಕುಮಿನಾಯಕ (೭)
bAro kRuShNa bAro kRuShNa
bAro kRuShNa manadasadanake (pa)
tOro kRuShNa tOro kRuShNa
tOro kRuShNa caraNa baDavage (a)
Sirava niDuve caraNadalli
duritaharaNa karuNaBaritane
siriya ramaNa nIraja suguNa
surara poreva dharaNi dharipane (1)
siriyamadadi marete ninna
karedu poreyo SaraNa rakShakA
ariye mahime taraLanAnu
toreye aLive kShEma dhAmane (2)
vEdavinuta mOdaBarita
sAdhucarita Adi kAraNA
maMdamatiyu kuMdanaLidu
taMde kAyo baMdhanIDvanE (3)
nIrajAkSha vArinilaya
sUrigamya pUrNadhAmane
sarvanAma sarvakarma
sarva SrEShTa sarva prErakA (4)
iMdirESa naMdapUrNa
suMdarAMga baMdhamOcaka
kuMdurahita vaMdanArha
biMdu biMba kaMdharASraya (5)
Buvana vitata BuvanamUla
Buvana pAla Buvana nASaka
Buvana Binna stavana prIya
kavanavariyo kavibirIDita (6)
mukutaroDeya mukutidAta
Bakuta prIya BakutidAyaka
Sakuta “SrIkRuShNaviThala”
yukuti goliya lakuminAyaka (7)
Leave a Reply