Composer : Shri Purandara dasaru
ನಿನ್ನ ನಂಬಿದೆ ಕೃಷ್ಣಾ ಅನ್ಯರೊಬ್ಬರ ಕಾಣೆ
ಪನ್ನಗ ರಕ್ಷಕನೆ ಬಾರೊ
ಇರುಳು ಹಗಲು ನಿನ್ನ ಚರಣಕ್ಕೆ ಮೊರೆಹೊಕ್ಕೆ
ಸರಿಯಾರು ಈರೇಳು ಜಗದೊಳು ಹಯವದನ ||
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ
ಊರ್ವಿಯೊಳು ಜನಿಸಿದೆನು ಕೃಷ್ಣಾ
ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ
ಹರಿ ವಾರಿಜ ನಾಭ ಶ್ರೀ ಕೃಷ್ಣಾ [ಪ]
ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ
ಕಷ್ಟ ವಾಗುತಿಹುದು ಕೃಷ್ಣಾ
ದಟ್ಟ ದಾರಿದ್ರ್ಯವನು ಪರಿಹರಿಸದಿರೆ
ದೂರು ತಟ್ಟುವುದು ನಿನಗಯ್ಯ ಕೃಷ್ಣ
ಕಾಸಿನ ಆಸೆಯನು ಮಾಡಿ ಬಹುದಿನದಿಂದ
ಆಯಾಸದೊಳಗಿರುತಿಹೆನೊ ಕೃಷ್ಣ
ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸೊ
ಸಾಸಿರ ನಾಮದ ಶ್ರೀ ಕೃಷ್ಣಾ [೧]
ಮುಟ್ಟಲಂಜುವರು ಬಂಧುಗಳು ಕಂಡರೆ
ಎನ್ನ ಅಟ್ಟಿ ಕೊಲ್ಲುತಿಹರಯ್ಯ ಕೃಷ್ಣ
ತೊಟ್ಟಿಲ ಶಿಶು ಬಾಯ ಬಿಡುವತೆರೆದೈ
ಕಂಗೆಟ್ಟು ಶೋಕಿಸುವೆನೊ ಕೃಷ್ಣಾ
ಈ ಪರಿಯಿಂದ ನಾನಾಪತ್ತು ಪೇಳಿದರೆ
ನನ್ನ ಕಾಯದಿರುವೇಕೊ ಕೃಷ್ಣಾ
ಶಪಿಸುವೆನೆಂದರೆ ಸಾವು ಹುಟ್ಟು ನಿನಗಿಲ್ಲ
ಏನು ದೊರೆತನವಯ್ಯ ಕೃಷ್ಣ [೨]
ತಂದೆ ತಾಯಿಯು ಇಲ್ಲ ಬಂಧು ಬಳಗವೂ ಇಲ್ಲ
ಇದೆನು ತೆರೆ ಹೆಳೊ ಶ್ರೀ ಕೃಷ್ಣ
ಮಂದರಧರ ಶ್ರೀ ಪುರಂದರ ವಿಠ್ಠಲನೆ
ಬಂದು ನೆಲೆಯಾಗಯ್ಯ ಕೃಷ್ಣ [೩]
ninna naMbide kRuShNA anyarobbara kANe
pannaga rakShakane bAro
iruLu hagalu ninna caraNakke morehokke
sariyAru IrELu jagadoLu hayavadana ||
pUrva janmadali nA mADida pApadiM
UrviyoLu janisidenu kRuShNA
kAruNya nidhi enna kAyabEkayya
hari vArija nABa SrI kRuShNA [pa]
huTTidaMdiMdigu suKaveMbudanu ariye
kaShTa vAgutihudu kRuShNA
daTTa dAridryavanu pariharisadire
dUru taTTuvudu ninagayya kRuShNa
kAsina Aseyanu mADi bahudinadiMda
AyAsadoLagirutiheno kRuShNa
Aseyanu biDisemage dOShavanu parihariso
sAsira nAmada SrI kRuShNA [1]
muTTalaMjuvaru baMdhugaLu kaMDare
enna aTTi kollutiharayya kRuShNa
toTTila SiSu bAya biDuvateredai
kaMgeTTu SOkisuveno kRuShNA
I pariyiMda nAnApattu pELidare
nanna kAyadiruvEko kRuShNA
shapisuveneMdare sAvu huTTu ninagilla
Enu doretanavayya kRuShNa [2]
taMde tAyiyu illa baMdhu baLagavU illa
idenu tere heLo shrI kRuShNa
maMdaradhara SrI puraMdara viThThalane
baMdu neleyAgayya kRuShNa [3]
Leave a Reply