Hoova taruvara manege

Composer : Shri Purandara dasaru

By Smt.Shubhalakshmi Rao

ಹೂವ ತರುವರ ಮನೆಗೆ ಹುಲ್ಲ ತರುವ
ಅವ್ವ ಲಕುಮಿ ರಮಣ ಇವಗಿಲ್ಲ ಗರುವ |ಪ|

ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ
ಇಂದಿರಾರಮಣಗೆ ಅರ್ಪಿತವೆನ್ನಲು
ಒಂದೆ ಮನದಲಿ ಸಿಂಧುಶಯನ ಮುಕುಂದ ಎನೆ
ಎಂದೆಂದು ವಾಸಿಪನಾ ಮಂದಿರದ ಒಳಗೆ |೧|

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ
ಪರಮ ಆಸಕ್ತಿಯಲಿ ಸೇವೆಯನು ಮಾಡಿದರೆ
ಸರಿಭಾಗ ಕೊಡುವ ತನ್ನರಮನೆಯ ಒಳಗೆ |೨|

ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲ ತಿನಿಸಿದ
ಅಂಡಜವಾಹನ ಶ್ರೀಪುರಂದರವಿಠ್ಠಲನು
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು |೩|


hUva taruvara manege hulla taruva
avva lakumi ramaNa ivagilla garuva |pa|

oMdu daLa SrItuLasi biMdu gaMgOdakava
iMdirAramaNage arpitavennalu
oMde manadali siMdhuSayana mukuMda ene
eMdeMdu vAsipanA maMdirada oLage |1|

paripariya puShpagaLa paramAtmagarpisi
paripUrNaneMdu pUjeyanu mADe
parama Asaktiyali sEveyanu mADidare
sariBAga koDuva tannaramaneya oLage |2|

pAMDavara maneyoLage kuduregaLa tA toLedu
puMDarIkAkSha tA hulla tinisida
aMDajavAhana SrIpuraMdaraviThThalanu
toMDarige toMDanAgi saMcarisutihanu |3|

Leave a Reply

Your email address will not be published. Required fields are marked *

You might also like

error: Content is protected !!