Composer : Shri Purandara dasaru
ಬಂದದ್ದೆಲ್ಲ ಬರಲಿ ಗೋವಿಂದನ ದಯ ಒಂದಿರಲಿ ||ಪ||
ಇಂದಿರೆ ರಮಣನ ಧ್ಯಾನವ ಮಾಡಲು
ಬಂದ ದುರಿತ ಭಯ ಹಾದು ಬಿಡಲಿ ||ಅ.ಪ||
ಅರಗಿನ ಮನೆಯೊಳಗಂದು
ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ
ಹರುಷದಲಿರುತಿರಲಂದು ||
ಹರಿಕೃಪೆ ಅವರಲ್ಲಿದ್ದ ಕಾರಣ
ಘೋರ ದುರಿತ ಭಯ ಹಾದುದಲ್ಲವೆ [೧]
ಆರು ಒಲಿಯದಿರಲೆನ್ನ
ಮುರಾರಿ ಎನಗೆ ಪ್ರಸನ್ನ
ಓರುವ ದುರಿತವೆಲ್ಲ ನಿವಾರಿಪ
ಕರುಣ ಸಂಪನ್ನ ||
ಶ್ರೀರಮಣನ ಸಿರಿ ಚರಣ ಶರಣರಿಗೆ
ಕ್ರೂರ ಯಮನು ಶರಣಾಗತನಲ್ಲವೆ [೨]
ಸಿಂಗನ ಪೆಗಲೇರಿದವಗೆ –
ಕರಿಭಂಗವೇಕೆ ಮತ್ತವಗೆ |
ರಂಗನ ಕೃಪೆಯುಳ್ಳವಗೆ –
ಭವ ಭಂಗಳೇತ್ತಕವಗೆ ||
ಮಂಗಳ ಮಹಿಮ ಪುರಂದರ ವಿಠಲ
ಶುಭಾಗನ ದಯವೊಂದಿದ್ದರೆ ಸಾಲದೆ [೩]
baMdaddella barali gOviMdana daya oMdirali ||pa||
iMdire ramaNana dhyAnava mADalu
baMda durita bhaya hAdu biDali ||a.pa||
aragina maneyoLagaMdu
pAMDavaranu kolabEkeMdu
duruLa kaurava baMdu ati
haruShadalirutiralaMdu ||
harikRupe avarallidda kAraNa
ghOra durita bhaya hAdudallave [1]
Aru oliyadiralenna
murAri enage prasanna
Oruva duritavella nivAripa
karuNa saMpanna ||
SrIramaNana siri caraNa sharaNarige
krUra yamanu SaraNAgatanallave [2]
siMgana pegalEridavage –
kariBaMgavEke mattavage |
raMgana kRupeyuLLavage –
Bava BaMgaLEttakavage ||
maMgaLa mahima puraMdara viThala
shubhAgana dayavoMdiddare sAlade [3]
Leave a Reply