Composer : Shri Pradyumna Teertharu [Sagarakatte MaTha]
ಸತ್ಯನಾರಾಯಣನ ಪಾದ ಭಕ್ತಿಯಿಂದ ಭಜಿಸು ಮನವೆ
ಅರ್ಥಿಯಿಂದ ಪೂಜಿಪರಿಗೆ ವಿತ್ತಾದಿಗಳಿತ್ತು ಕಾಯ್ವ [ಪ]
ಹಿಂದೆ ನಾರದರ್-ಇಂದಿರೇಶಗೆ
ವಂದಿಸಿ ಬೆಸಗೊಳಲ್ಲು
ಛಂದದಿಂದಲಿ ಸಿಂಧುಶಯನ
ಬಂಧ ಮೋಚಕವೆಂದು ಪೇಳಿದ [೧]
ತಿಳಿದು ನಾರದರಿಳೆಯೊಳರುಹೇ
ಕಲಿತು ಜನಗಳೆಲ್ಲಾರಂಭಾ
ಫಲ ಗೋಧುಮಚೂರ್ಣ ಶರ್ಕರ ಪಾಲು,
ಘೃತಾದಿಗಳಿಂದ ಪೂಜಿತ [೨]
ದ್ವಿಜವಣಿಕ್ ಭೂಭುಜರು
ನಿಜ ಭಕುತಿಯಿಂದ, ಯಜಿಸೆ
ಕುಜನಮರ್ಧನ ಶ್ರೀ ನರಹರಿ
ಸೋಜಿಗವನ್ನೇ ತೋರಿದುದನರಿಯೆಯ [೩]
satyanArAyaNana pAda BaktiyiMda Bajisu manave
arthiyiMda pUjiparige vittAdigaLittu kAyva [pa]
hiMde nAradar-iMdirESage
vaMdisi besagoLallu
CaMdadiMdali siMdhuSayana
baMdha mOcakaveMdu pELida [1]
tiLidu nAradariLeyoLaruhE
kalitu janagaLellAraMBA
Pala gOdhumacUrNa Sarkara pAlu,
GRutAdigaLiMda pUjita [2]
dvijavaNik BUBujaru
nija BakutiyiMda, yajise
kujanamardhana SrI narahari
sOjigavannE tOridudanariyeya [3]
Leave a Reply