Composer : Shri Khadri Narasimha
ಬಾಲ ಲೀಲೆಯನಾಡುತಿದ್ದನೊ ಗೊಪಾಲ ಬಾಲನು |
ಬಾಲ ಲೀಲೆಯನಾಡುತಿದ್ದನು ಪಾಲಗಲ್ಲದೆ
ಶ್ರೀ ಲಲಾಮನು |ಅ.ಪ|
ಅಂಗ ತನದಿಂದಿದ್ದ ಕೃಷ್ಣನು
ಮಗ್ಗುಲಾಗುತ ಅಂಗವನ್ನೆ ತಿರುಹ ಕಲಿತನು
ಇಂಗಿತೆಂದಾನೆದೆಯನೂರಿ ರಂಗನೀಜುತ
ಮಂಡಲಾಕೃತಿ
ಗಂಗೆಯಂದದಿ ಜೊಲ್ಲು ಬಾಯಲಿ
ಉಂಗು ಉಂಗು ಎನುತ ಮುದದಲಿ |೧|
ದೂರಿ ದೂರಿ ಆಡುತಿದ್ದನು ಯಶೋದೆ
ತೊಡೆಯ ಯೇರಿ ನಲಿದು ಕುಣಿಯುತಿದ್ದನು
ತೋರ ಮುತ್ತಿನ ಹಾರ ಪದಕವು ಚಾರು
ಕರ್ಣದ ನೀಲ ಬಾವುಲಿ
ತೋರೆ ಗೊಂಡೆಯ ಮೊಲಕು ಅರಳೆಲೆ
ಚಾರುತಿಹ ಮಾಗಾಯಿ ಪೊಗಳಲು |೨|
ಅಂಬೆ ಗಾಲಿಕ್ಕುತಲಿ ಬರುವನೋ
ಜಗ್ಗುತ್ತ ಮೊಗ್ಗುತ
ದುಂಬಿಗಳ ತಾ ಕರೆದು ಕರೆಯುವನು
ಹಂಬಲಿಸಿ ತಾ ತಾಯ ಮೊಲೆಯನು
ಉಂಬೆನೆನ್ನುತ ಸೆರಗ ಪಿಡಿದು
ಕಂಬು ಕಂಠದ ಇಂಬು ಹೋಲುತ
ಬೆಂಬಿಡದೆ ಬಲು ದೊಂಬಿಗಾರನು |೩|
ಹೊತ್ತಿಲನ್ನೆ ಧಾಟುದಿದ್ದನು
ಗೋಪಮ್ಮಗೊಂದು
ಹಸ್ತದಿಂದ- ಲೆತ್ತಳಳುವನು ಕುಸ್ತರಿಸಿ
ಹಾಸಿ ಮಲಗಿಸಿ ಕಸ್ತೂರಿ ಗಂಧಿಯು ಪೋಗೆ
ಹಸ್ತಿ ವರದನು ನೆಲೆದೊಲಿಟ್ಟಾ
ವಸ್ತುವನೆ ಗೋಡ್ಯಾಡಿ ಕೆಡವುತ |೪|
ಆನೆ ಆಟವ ಆಡುತಿದ್ದನು ಕಂಬವನು
ಪಿಡಿದು ತಾನೆ ನಿಂತು ಬೀಳಳಳುವನು
ಮಾನಿನಿಯರು ಬೆರಳ ಪಿಡಿದು ಆನೆ
ಕಲಿಸಲು ಮೆಲ್ಲ ಮೆಲ್ಲಗೆ
ಜಾಣೆಯರಸನು ನಡೆಯುತಲೆ ಸುಮ್ಮಾನದಲಿ
ತಾ ಮುದ್ದು ತೋರುತ |೫|
ತಪ್ಪು ಹೆಜ್ಜೆಯನಿಟ್ಟು ನಡೆಯುವನು
ಯೇಳುತ್ತ ಬೀಳುತ ಇಪ್ಪ ಕಂದನು
ತಾಯ ಮುಖವನ್ನು
ತಪ್ಪದೀಕ್ಶಿಸಿ ಕೈಯ್ಯ ನೆಗಹಿ ಎನ್ನಪ್ಪ
ಬಾರೆಂದೆನುತ ಎತ್ತಿ ಕೊಳಲಲು ಅಪ್ಪ ಹಸಿವೆಂದು
ತುಟಿಗಳ ಚಪ್ಪರಿಸಿ ತಿಟ್ಟುತ |೬|
ತೋರುವನು ಪರಿ ಪರಿಯ ಲೀಲೆಯನು
ತಾಯ್ತಂದೆಯರ ಸಮ್ಸಾರ
ಹಂಬಲ ಮರೆಸಿ ನಡೆಸುವನು
ವಾರಿಜಾಸನ ರೌದ್ರ ಮುಖ್ಯರು ನಾರಿಯರು
ಸಹ ಗಗನ ಮಾರ್ಗದಿ
ಸಾರಿ ನೋಡುತ್ತಿರಲು ಖಾದ್ರಿ ನಾರಸಿಂಹನು
ನರರ ಪರಿಯಲಿ |೭|
bAla lIleyanADutiddano gopAla bAlanu |
bAla lIleyanADutiddanu pAlagallade
SrI lalAmanu |a.pa|
aMga tanadiMdidda kRuShNanu
maggulAguta aMgavanne tiruha kalitanu
iMgiteMdAnedeyanUri raMganIjuta
maMDalAkRuti
gaMgeyaMdadi jollu bAyali
uMgu uMgu enuta mudadali |1|
dUri dUri ADutiddanu yaSOde
toDeya yEri nalidu kuNiyutiddanu
tOra muttina hAra padakavu cAru
karNada nIla bAvuli
tOre goMDeya molaku araLele
cArutiha mAgAyi pogaLalu |2|
aMbe gAlikkutali baruvanO
jaggutta mogguta
duMbigaLa tA karedu kareyuvanu
haMbalisi tA tAya moleyanu
uMbenennuta seraga piDidu
kaMbu kaMThada iMbu hOluta
beMbiDade balu doMbigAranu |3|
hottilanne dhATudiddanu
gOpammagoMdu
hastadiMda- lettaLaLuvanu kustarisi
hAsi malagisi kastUri gaMdhiyu pOge
hasti varadanu neledoliTTA
vastuvane gODyADi keDavuta |4|
Ane ATava ADutiddanu kaMbavanu
piDidu tAne niMtu bILaLaLuvanu
mAniniyaru beraLa piDidu Ane
kalisalu mella mellage
jANeyarasanu naDeyutale summAnadali
tA muddu tOruta |5|
tappu hejjeyaniTTu naDeyuvanu
yELutta bILuta ippa kaMdanu
tAya muKavannu
tappadIkSisi kaiyya negahi ennappa
bAreMdenuta etti koLalalu appa hasiveMdu
tuTigaLa capparisi tiTTuta |6|
tOruvanu pari pariya lIleyanu
tAytaMdeyara samsAra
haMbala maresi naDesuvanu
vArijAsana raudra muKyaru nAriyaru
saha gagana mArgadi
sAri nODuttiralu KAdri nArasiMhanu
narara pariyali |7|
Leave a Reply