Pogi Baruve Gopa

Composer : Shri Ramasundara vittala

Smt.Nandini Sripad

ಶ್ರೀರಾಮಸುಂದರವಿಠಲ ದಾಸರ ರಚನೆ ,
ರಾಗ: ಮೋಹನ , ಖಂಡಛಾಪುತಾಳ
(ರಾಮಸುಂದರವಿಟ್ಠಲ ದಾಸರ ಕಾಲ ಕ್ರಿ.ಶ ೧೯ – ೨೦ ನೆಯ ಶತಮಾನ.
ಶ್ರೀಜಗನ್ನಾಥದಾಸರಿಂದ ಪ್ರಭಾವಿತರಾದವರು. ಸ್ಥಳ ಆದವಾನಿ)

ಪೋಗಿ ಬರುವೆ ಗೋಪ ನಾಗವೇಣಿಯರೆ ಚ – |
ನ್ನಾಗಿ ಮಮತೆ ಪೂರ್ಣವಾಗಿರಲಿ || ಪ ||

ಜಾಗು ಮಾಡದೆ ಮುಂದೆ ವೇಗದಿಂದಲಿ ಎನ್ನ |
ಸಾಗೀಸೀ , ಪತಿಗಳ ಕೂಡೆ |
ಭೋಗೀಸೀ , ತತ್ಸೇವೆ ಮಾಡಲು ||
ಪೋಗುವುದು ಪಾಪೌಘವೆಲ್ಲವು ನೀಗುವುದು ಹೃದ್ರೋಗ ಮಂಗಳ |
ವಾಗುವುದು ಲೇಸಾಗಿ ಹರುಷಿತರಾಗಿ ಕಳುಹಿರಿ ಈಗ ಮಧುರೆಗೆ || ಅ ಪ ||

ಬಾಲಕತನದಿ ನಿಮ್ಮಾಲಯವನೆ ಪೊಕ್ಕು |
ಪಾಲು ಮೊಸರು ಬೆಣ್ಣೆ ಕದ್ದು ಮೆದ್ದು ||
ಜಾಲದಿಂದಲಿ ನಿಮ್ಮ ಬಾಲರು ತಿಂದರೆಂ |
ದ್ಹೇಳೀದೇ , ಮೃಷವಾಡಿ ನಾನು|
ಬಾಳೀದೇ , ಮೇಲಿಟ್ಟ ಭಾಂಡವ |
ಸೀಳೀದೇ , ಮಥಿಸುವ ಸುಪಾತ್ರೆಯ |
ಕಾಲಿಲೊದ್ದು ಬೀಳ ಕೆಡಹಿದೆನೇ , ನವನೀತವನು ಮಾ |
ರ್ಜಾಲ ಮರ್ಕಟ ಪಾಲ ಮಾಡಿದೆನೇ , ನೀವಿಟ್ಟ ಮೀಸಲ |
ಶೀಲದಧಿ ಕೆನೆಪಾಲ ಕೆಡಿಸಿದೆನೇ , ಹೀಗುಚಿತವಲ್ಲೆಂ ||
ದ್ಹೇಳಿದರೆ ಕೇಳದಲೆ ನಾನತಿ ಹೇಳನೆಯ ಬಲು ಧಾಳಿ ಮಾಡಲು |
ತಾಳಿ ಎನ್ನನು ಪಾಲಿಸಿದಿರಿ ಕೃಪಾಳುಗಳ ಗುಣ ಪೇಳಲೊಶವೆ || ೧ ||

ಫುಲ್ಲಲೋಚನೆರ ನಿಮ್ಮೆಲ್ಲರ ಮನಸು ಎ |
ನ್ನಲ್ಲಿ ಇಟ್ಟಿರುವದ ಬಲ್ಲೆ ಕೇಳಿ ||
ಇಲ್ಲೇ ನಿಮ್ಮನು ಬಿಟ್ಟು ಎಲ್ಲೋ ಪೋಗುವೆನೆನ್ನ |
ಸಲ್ಲಾದೇ , ಕಾರ್ಯವೆ ಮುಖ್ಯ |
ವಲ್ಲಾದೇ , ಬರುವೆನೆ ಅಲ್ಲಿ |
ನಿಲ್ಲಾದೇ , ಬ್ರಹ್ಮಾಂಡದೊಳಗಾ |
ವಲ್ಲಿ ನೆನೆಸಿದರಲ್ಲಿ ನಾನಿರುವೇ , ನಾನಿಲ್ಲದಾ ಸ್ಥಳ |
ವಿಲ್ಲ ಜಗದೊಳಗೆಲ್ಲ ತುಂಬಿರುವೇ , ಆದರಿಸಿ ಕರೆದವ |
ರಲ್ಲಿ ಅತಿ ತ್ವರದಲ್ಲಿ ಬರುತಿರುವೇ , ಈ ವಿಧದಿ ಪೇಳ್ವದು ||
ಸುಳ್ಳು ಮಾತುಗಳಲ್ಲಿ ಆಗಮದಲ್ಲಿ ಪೇಳಿದ ಸೊಲ್ಲು ಎಂಬುದ |
ರಲ್ಲಿ ಸಂಶಯವಿಲ್ಲದಲೆ ನೀವೆಲ್ಲಿ ಸ್ಮರಿಸಿದರಲ್ಲಿಗೊದಗುವೆ || ೨ ||

ಹಿಂದಕ್ಕೆ ಒಂದಿನ ನಿಂದು ಕೊಳಲೂದೆ ಸ್ತ್ರೀ |
ವೃಂದ ಕೇಳುತಲಿ ಆನಂದದಿಂದಾ ||
ಅಂದು ಬರುತಿರೆ ನಿಮ್ಮ ಬಂಧುಗಳೆಲ್ಲ ನಿ |
ರ್ಬಂಧೀಸೀ , ಬೇಡೆನ್ನಲವರ |
ನಿಂದೀಸೀ , ಎನ್ನೊಳು ಮನಸು |
ಪೊಂದೀಸೀ , ಬೆಳದಿಂಗಳೊಳು ತ್ವರ |
ದಿಂದ ಎನ್ನನು ಬಂದು ಕೂಡಿದಿರೇ , ರಾಸೋತ್ಸವದಿ |
ಧಿಂ ಧಿಂ ಧಿಮೀಧಿಮಿಕೆಂದು ಆಡಿದಿರೇ , ಕೀರ್ತಿಯನು ಪದಗತಿ |
ಯಿಂದ ಸುಖಕರದಿಂದ ಪಾಡಿದಿರೇ , ಬಲ್ಪರಿಯಲಿ ಎ ||
ನ್ನಿಂದ ಬಂದ ನಿಂದೆ ಕುಂದುಗಳೊಂದು ಎಣಿಸದೆ ಪೊಂದಿದಿರಿ ಎಂ |
ತೆಂದು ಶ್ರೀರಾಮಸುಂದರವಿಟ್ಠಲಿಂದು ಮುಖಿಯರಿಗಿಂದು ಮೋದದಿ || ೩ ||


SrIrAmasuMdaraviThala dAsara racane ,
rAga: mOhana , KaMDaCAputALa
(rAmasuMdaraviTThala dAsara kAla kri.Sa 19 – 20 neya SatamAna.
SrIjagannAthadAsariMda praBAvitarAdavaru. sthaLa AdavAni)

pOgi baruve gOpa nAgavENiyare ca – |
nnAgi mamate pUrNavAgirali || pa ||

jAgu mADade muMde vEgadiMdali enna |
sAgIsI , patigaLa kUDe |
BOgIsI , tatsEve mADalu ||
pOguvudu pApauGavellavu nIguvudu hRudrOga maMgaLa |
vAguvudu lEsAgi haruShitarAgi kaLuhiri Iga madhurege || a pa ||

bAlakatanadi nimmAlayavane pokku |
pAlu mosaru beNNe kaddu meddu ||
jAladiMdali nimma bAlaru tiMdareM |
d~hELIdE , mRuShavADi nAnu|
bALIdE , mEliTTa BAMDava |
sILIdE , mathisuva supAtreya |
kAliloddu bILa keDahidenE , navanItavanu mA |
rjAla markaTa pAla mADidenE , nIviTTa mIsala |
SIladadhi kenepAla keDisidenE , hIgucitavalleM ||
d~hELidare kELadale nAnati hELaneya balu dhALi mADalu |
tALi ennanu pAlisidiri kRupALugaLa guNa pELaloSave || 1 ||

PullalOcanera nimmellara manasu e |
nnalli iTTiruvada balle kELi ||
illE nimmanu biTTu ellO pOguvenenna |
sallAdE , kAryave muKya |
vallAdE , baruvene alli |
nillAdE , brahmAMDadoLagA |
valli nenesidaralli nAniruvE , nAnilladA sthaLa |
villa jagadoLagella tuMbiruvE , Adarisi karedava |
ralli ati tvaradalli barutiruvE , I vidhadi pELvadu ||
suLLu mAtugaLalli Agamadalli pELida sollu eMbuda |
ralli saMSayavilladale nIvelli smarisidaralligodaguve || 2 ||

hiMdakke oMdina niMdu koLalUde strI |
vRuMda kELutali AnaMdadiMdA ||
aMdu barutire nimma baMdhugaLella ni |
rbaMdhIsI , bEDennalavara |
niMdIsI , ennoLu manasu |
poMdIsI , beLadiMgaLoLu tvara |
diMda ennanu baMdu kUDidirE , rAsOtsavadi |
dhiM dhiM dhimIdhimikeMdu ADidirE , kIrtiyanu padagati |
yiMda suKakaradiMda pADidirE , balpariyali e ||
nniMda baMda niMde kuMdugaLoMdu eNisade poMdidiri eM |
teMdu SrIrAmasuMdaraviTThaliMdu muKiyarigiMdu mOdadi || 3 ||

Leave a Reply

Your email address will not be published. Required fields are marked *

You might also like

error: Content is protected !!