Ninna Magana Ghali

Composer : Shri Purandara dasaru

Kum.Harini and Smt.Viraja

ನಿನ್ನ ಮಗನ ಘಾಳಿ ಘನವಮ್ಮ || ಪ||
ಕರೆದು ರಂಗಗೆ ಬುದ್ಧಿ ಪೇಳೇ ಗೋಪ್ಯಮ್ಮ ||ಅ.ಪ||

ಹಾಲು ಕಾಯುವಲ್ಲಿ ಇವನ ಘಾಳಿ ಘನವಮ್ಮ,
ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ ||
ಕೋಲ ತಂದು ಕೊಲ್ಲರು ಪೋದರೆ ಅಮ್ಮ
ಲೀಲೆಯಿಂದಲಿ ಓಡಿ ಪೋದನಮ್ಮ ||೧||

ಮೊಸರು ಕಡೆವಲ್ಲಿ ಇವನ ಘಾಳಿ ಘನವಮ್ಮ,
ಶಿಶುವಿನ ಕೈಯಲ್ಲಿ ಬೆಣ್ಣೆ ಉಳಿಯಗೊಡನಮ್ಮ ||
ಮೊಸರು ಮಾರುವರು, ಮೊರೆ ಇಡುವರಮ್ಮ
ಶಶಿಮುಖಿಯರು ಹೀಗೆ ದೂರುವರಮ್ಮ ||೨||

ಊರೊಳು ಬರಲೀಸ ಕೇರಿಯೊಳು ಸುಳಿಯಲೀಸ
ಈರೇಳು ಲೋಕಕೆ ಒಡೆಯ ತಾನಂತೆ ||
ಧೀರ ಶ್ರೀ ಪುರಂದರ ವಿಠಲರಾಯನ
ಕೇರಿ ಬಸವನ ಮಾಡಿಬಿಟ್ಟೆ ಗೋಪ್ಯಮ್ಮ ||೩||


ninna magana GALi Ganavamma || pa||
karedu raMgage buddhi pELE gOpyamma ||a.pa||

hAlu kAyuvalli ivana GALi Ganavamma,
kAlu taMdu kElinoLage addi pOdanamma ||
kOla taMdu kollaru pOdare amma
lIleyiMdali ODi pOdanamma ||1||

mosaru kaDevalli ivana GALi Ganavamma,
SiSuvina kaiyalli beNNe uLiyagoDanamma ||
mosaru mAruvaru, more iDuvaramma
SaSimuKiyaru hIge dUruvaramma ||2||

UroLu baralIsa kEriyoLu suLiyalIsa
IrELu lOkake oDeya tAnaMte ||
dhIra SrI puraMdara viThalarAyana
kEri basavana mADibiTTe gOpyamma ||3||

Leave a Reply

Your email address will not be published. Required fields are marked *

You might also like

error: Content is protected !!