Lokabharitano

Composer : Shri Vadirajaru

By Smt.Shubhalakshmi Rao

ಮೂಲರೂಪದಿ ಸುರರು ದ್ವಾರಕಾ ಯಾತ್ರೆಯಲಿ
ಪಾಲಸಾಗರ ಯಾತ್ರೆ , ಗರ್ಭ ಯಾತ್ರೆ ಕೇಳಯ್ಯ |
ಶೂಲಧರ ಖಳಗಂಜಿ ಭುವನೆಲ್ಲವ ಸುತ್ತಿ
ಶ್ರೀಲೋಲನಿಹ ವೈಕುಂಠ ಯಾತ್ರೆಯಿಂದ ಬದುಕನೆ |
ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ
ಕೈಲಾಸ ಯಾತ್ರೆ ಕೈವಲ್ಯ ಪತಿಗೆ ಲೀಲೆ ||

ಲೋಕಭರಿತನೋ ರಂಗ ಅನೇಕ ಚರಿತನೋ ||ಪ||
ಕಾಕುಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||

ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-
ರಾಜಸುತನು ಈತನೇ ಸಭ ಪೂಜೆಗರ್ಹನೆನಿಸಿದಾತ ||೧||

ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆ ಹಾಕಿದಳಾಗ ||೨||

ಉತ್ತರೆಯ ಗರ್ಭದಲ್ಲಿ ಸುತ್ತಿ ಮುತ್ತಿದಸ್ಟ್ರವನ್ನು
ಒತ್ತಿ ಚಕ್ರದಿಂದ ನಿಜ ಭಕ್ತ ಪರೀಕ್ಷಿತನ ಕಾಯ್ದ ||೩||

ಜ್ಞಾನಶೂನ್ಯನಾಗಿ ಸೊಕ್ಕಿ ನಾನೆ ವಾಸುದೇವನೆಂದು
ಹೀನ ಪೌಂಡ್ರಕ ಶಿರವ ಜಾಣರಾಯ ಖಂಡಿಸಿ ಮೆರೆದ ||೪||

ತನ್ನ ಸೇವಕ ಜನರ ಪೊರೆದು ಉನ್ನಂತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನ ಕೃಷ್ಣ ||೫||


moolaroopadi suraru dvArakA yAtreyali
pAlasAgara yAtre , garbha yAtre kELayya |
shooladhara khaLagaMji bhuvanellava sutti
shrIlOlaniha vaikuMTha yAtreyiMda badukane |
bhUlOkadali puTTi hayavadana kRuShNa mADida
kailAsa yAtre kaivalya patige leele ||

lOkaBaritanO raMga anEka caritanO ||pa||
kAkujanara taridu tannEkAMta Baktara poreva kRuShNa ||a.pa||

rAjasUya yAgadalli rAjarAjariralu dharma-
rAjasutanu ItanE sabha pUjegarhanenisidAta ||1||

mikka nRupara jaridu amita vikrama yaduvarane tanage
takka ramaNaneMdu rukmiNi ukki mAle hAkidaLAga ||2||

uttareya garBadalli sutti muttidasTravannu
otti cakradiMda nija Bakta parIkShitana kAyda ||3||

j~jAnaSUnyanAgi sokki nAne vAsudEvaneMdu
hIna pauMDraka Sirava jANarAya khaMDisi mereda ||4||

tanna sEvaka janara poredu unnaMta uDupiyalli niMtu
Ganna mahimeyiMda mereva prasanna hayavadana kRuShNa ||5||

Leave a Reply

Your email address will not be published. Required fields are marked *

You might also like

error: Content is protected !!