Gummana Kareyadire

Composer : Shri Purandara dasaru

By Smt.Viraja

ಗುಮ್ಮನ ಕರೆಯದಿರೆ , ಅಮ್ಮ ನೀನು
ಗುಮ್ಮನ ಕರೆಯದಿರೆ ||ಪ||
ಸುಮ್ಮನೆ ಇದ್ದೇನು, ಅಮ್ಮಿಯ ಬೇಡೆನು
ಮಮ್ಮು ಉಣುತೇನೆ , ಅಮ್ಮ ಅಳುವುದಿಲ್ಲ || ಅ ||

ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ
ಕಣ್ಣು ಮುಚ್ಚುವುದಿಲ್ಲವೆ
ಚಿಣ್ಣರ ಬಡಿಯೆನು , ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು , ಮಣ್ಣು ತಿನ್ನುವುದಿಲ್ಲ |೧|

ಬಾವಿಗೆ ಹೋಗೆ ಕಾಣೆ , ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ , ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಗೆ ಕೂಡುವೆ |೨|

ಮಗನ ಮಾತನು ಕೇಳುತ , ಗೋಪೀದೇವಿ
ಮುಗುಳುನಗೆಯ ನಗುತ ಅಮ್ಮ
ಜಗದೊಡೆಯ ಶ್ರೀ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ |೩|


gummana kareyadire , amma nInu
gummana kareyadire ||pa||
summane iddEnu, ammiya bEDenu
mammu uNutEne , amma aLuvudilla || a ||

heNNugaLiruvallige hOgi avara
kaNNu muccuvudillave
ciNNara baDiyenu , aNNana baiyenu
beNNeya bEDenu , maNNu tinnuvudilla |1|

bAvige hOge kANe , amma nAnu
hAvinoLADe kANe
Avina moleyUDe , karugaLa biDe nODe
dEvaraMte oMdu ThAvige kUDuve |2|

magana mAtanu kELuta , gOpIdEvi
muguLunageya naguta amma
jagadoDeya SrI puraMdaraviThalana
bigidappikoMDaLu mOhadiMdalAga |3|

Leave a Reply

Your email address will not be published. Required fields are marked *

You might also like

error: Content is protected !!