Composer : Shri Purandara dasaru
ರಾಗ: ಮೋಹನ , ರೂಪಕತಾಳ
ಗೋಪಿ ನಿನ್ನ ಮಗಗಂಜುವೆವಮ್ಮ ॥ ಪ ॥
ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೇ ॥ ಅ ಪ ॥
ಕಡೆವುತ್ತ ಪಾಡಲು ಅತಿಶಯ ಹರುಷದಿ ।
ಕಡಗ ಪೆಂಡೆಯ ಕಾಲ್ ಝಣರೆನ್ನುತ್ತ ॥
ಕಡೆಯದೆ ಕೈಯ್ಯಾಡದೆ ಸುಮ್ಮನಿರಲು ।
ತುಡುಕಿ ಬೆಣ್ಣೆಯ ಮೆದ್ದು ಓಡಿಹೋದ ॥ 1 ॥
ಮುಂಗಾಲ ಮಕ್ಕಳ ತೊಟ್ಟಿಲೊಳಗೆ ಹಾಕಿ ।
ತಿಂಗಳ ಶಿಶುವ ನೆಲಕೆಡಹಾಕುವ ॥
ಅಂಗಳದೊಳಗೆಲ್ಲ ಚಾಲಿವಾರಿ ವ್ಯಾಪಾರ ।
ಹೆಂಗಳೊಡನೆ ಮಾತನೊಲಿದಾಡುವ ॥ 2 ॥
ಅರೆವ ಗುಂಡ ದೇವರ ಜಗಲಿಯೊಳಿಟ್ಟ ।
ಹರಿಗಳ ತಂದು ರಾಯ ಕಲ್ಲ ಮೇಲಿಟ್ಟ ॥
ಮರೆದೊರಗಿದ್ದ ಮಕ್ಕಳ ಬಡಿದೆಬ್ಬಿಸಿ ।
ಅರಿಯದಂತೆ ಬೊಬ್ಬಿಡುವ ॥ 3 ॥
ದೈವದೆಡೆಯಲ್ಲಿದ್ದ ಮೀಸಲನೆಲ್ಲವ ।
ನೈವೇದ್ಯ ಸಲದೆಂದು ನಗುತಲುಂಡ ॥
ದೈವವು ತನಗಿಂತ ಮಿಗಿಲೆ ಮರುಳುಗಳಿರಾ !
ದೈವವೆಲ್ಲವೂ ತಾನೆಯೆಂದಾ ॥ 4 ॥
ಕಾದಾರಿದ ಹಾಲ ಕಲಕಿ ಕೆನೆಯ ಮೆದ್ದು ।
ಕಾದಿಹನಂತೆ ಬೆಕ್ಕ ಬೆದರಿಸುವ ॥
ಮಾಧವನ ಮಹಿಮೆ ಅಳವಲ್ಲವಾರಿಗೂ ।
ಶ್ರೀದ ಪುರಂದರವಿಠಲ ನಮ್ಮ ಬಿಡನಲ್ಲ ॥ 5 ॥
gOpi ninna magagaMjuvevamma || pa ||
paramAtmanu beNNeya bEDuttalihanE || a.pa ||
kaDevutta pADalu atiSaya haruShadi |
kaDaga peMDeya kAl JaNarennutta ||
kaDeyade kaiyyADade summaniralu |
tuDuki beNNeya meddu ODihOda || 1 ||
muMgAla makkaLa toTTiloLage hAki |
tiMgaLa SiSuva nelakeDahAkuva ||
aMgaLadoLagella cAlivAri vyApAra |
heMgaLoDane mAtanolidADuva || 2 ||
areva guMDa dEvara jagaliyoLiTTa |
harigaLa taMdu rAya kalla mEliTTa ||
maredoragidda makkaLa baDidebbisi |
ariyadaMte bobbiDuva || 3 ||
daivadeDeyallidda mIsalanellava |
naivEdya saladeMdu nagutaluMDa ||
daivavu tanagiMta migile maruLugaLirA !
daivavellavU tAneyeMdA || 4 ||
kAdArida hAla kalaki keneya meddu |
kAdihanaMte bekka bedarisuva ||
mAdhavana mahime aLavallavArigU |
SrIda puraMdaraviThala namma biDanalla || 5 ||
Leave a Reply