Turchigiriyallondu roopadi

Composer : Shri Prasannavenkata dasaru [on Tulasigeri Bheema]

By Smt.Shubhalakshmi Rao

ತುರ್ಚಿಗಿರಿಯಲ್ಲೊಂದು ರೂಪದಿ ನಿಂದಾ |
ಅಚ್ಯುತನ್ನ ಪರಮಾಪ್ತಾ ಹನುಮಂತಾ [ಪ]

ಸ್ವೋಚಿತ ಕರ್ಮಗಳಾಚರಿಪಜ್ಞಗೆ |
ಯೋಚಿತ ಫಲವನು ಬಾಚಿ ಕೊಡುತಲಿ [ಅ.ಪ]

ದ್ವಂದ್ವಾತೀತಾನಂದಿತ ಸುಂದರ |
ಸಿಂಧು ಬಂಧನನ ಬಂಧುರ ಭಕುತಾ |
ಚೆಂದದಿ ಸುಂದರಿಗಾನಂದನ ಮನ |
ಸಂದೇಶವನೆ ನೀಡಿ ಬಂದ ಧರನ [೧]

ದ್ಯುಮಣಿತೇಜ ಭೂಮಂಡಲಕಸಮ |
ಭೀಮನಾಗಿ ದಮನಿತರನು ಮಣಿಸಿದ
ಕಾಮಿಸಿ ಭಾಮೆಯನಾಮಂತ್ರಿಸಿದಾ |
ಕುಮತಿ ಕೀಚಕನ ಅಸುವ ದಮಿಸಿ ಈ [೨]

ಕಲಿಬಲದಿಂ ಕಂಗಾಲಾಗುತ ನೆಲೆ |
ಯಿಲ್ಲದಲೆಯುತಿಹ ವಲ್ಲರಿ ವರ್ಗವ |
ಲಲಿತ ಗ್ರಂಥದಿ ಸುಲಭಸಲುಹಿದಾ |
ಬಲಪ್ರಸನ್ವೆಂಕಟನೊಲುಮೆಯದಾಸಾ [೩]


turcigiriyalloMdu rUpadi niMdA |
acyutanna paramAptA hanumaMtA [pa]

svOcita karmagaLAcaripaj~jage |
yOcita Palavanu bAci koDutali [a.pa]

dvaMdvAtItAnaMdita suMdara |
siMdhu baMdhanana baMdhura BakutA |
ceMdadi suMdarigAnaMdana mana |
saMdESavane nIDi baMda dharana [1]

dyumaNitEja BUmaMDalakasama |
BImanAgi damanitaranu maNisida
kAmisi BAmeyanAmaMtrisidA |
kumati kIcakana asuva damisi I [2]

kalibaladiM kaMgAlAguta nele |
yilladaleyutiha vallari vargava |
lalita graMthadi sulaBasaluhidA |
balaprasanveMkaTanolumeyadAsA [3]

Leave a Reply

Your email address will not be published. Required fields are marked *

You might also like

error: Content is protected !!