Tulasigeri Bala bheema

Composer : Shri Prasannavenkata dasaru

By Smt.Shubhalakshmi Rao

ತುಳಸಿಗೇರಿ ಬಲಭೀಮ ನಿನ್ನ |
ಕಾಲಿಗೆರಗುವೆ ಸಲಹೋ ಎನ್ನ [ಪ]

ನಳಿನನಾಭನ ಒಲವ ಕೊಡಿಸಿ
ಪಾಲಿಸೋ ಪಾವನ್ನಮೂರುತಿ [ಅ.ಪ]

ಅಜಸುತನ ಶಾಪದಲಿ ಅಜಗರನಾಗಿ |
ವೃಜದಲಿ ಮನುಜ ಬಳಲಿರೆ |
ಸೃಜಿಸಿ ಸಾಯುಜ್ಯ ಪದವಿ ನೀಡಿದ |
ರುಜುಗಣದ ಜಗಗುರುವೆ ಭಜಿಪೆ [೧]

ಭೇದಮತವ ಭವಾಬ್ದಿ ಸುರರಿಗೆ
ಬೋಧಿಸಿದ ಸಕಲಾರ್ಥ ಸಾಧನ |
ಬುದ್ಧಿ ಬಲ ಯಶ ಧೈರ್ಯ ತುಂಬಿದ
ಬುಧ ಜನಗೇಯ ಮರುತನೆ [೨]

ಶ್ವಾಸ ಪ್ರತಿರೋಧಿಸುವ ಪವನಜ
ಶೇಷಜೀವ ಅಸಮಾನ ಬಲನೆ |
ಶ್ರೀಶ ಶ್ರೀ ಪ್ರಸನ್ವೆಂಕಟನ ಗುಣ
ತಾಸುಬಾರಿಸಿವ ಘೋಷಿಸುವ ಘನ [೩]


tuLasigEri balaBIma ninna |
kAligeraguve salahO enna [pa]

naLinanABana olava koDisi
pAlisO pAvannamUruti [a.pa]

ajasutana SApadali ajagaranAgi |
vRujadali manuja baLalire |
sRujisi sAyujya padavi nIDida |
rujugaNada jagaguruve Bajipe [1]

BEdamatava BavAbdi surarige
bOdhisida sakalArtha sAdhana |
buddhi bala yaSa dhairya tuMbida
budha janagEya marutane [2]

SvAsa pratirOdhisuva pavanaja
SEShajIva asamAna balane |
SrISa SrI prasanveMkaTana guNa
tAsubArisiva GOShisuva Gana [3]

Leave a Reply

Your email address will not be published. Required fields are marked *

You might also like

error: Content is protected !!