Neneyiro neneyiro hoonoora

Composer : Shri Prasannavenkata dasaru [on Hunoora Hanuma]

By Smt.Shubhalakshmi Rao

ನೆನೆಯಿರೊ ನೆನಯಿರೊ ಹೂನೂರ ಹನುಮನ್ನ |
ಅನುವಾಗಿ ವಲಿವಾ ಶ್ರೀ ರಾಮದೂತನ್ನ [ಪ]

ವನದಿಯ ಲಂಘಿಸಿ ವನವನವ ಶೋಧಿಸಿ |
ವನಜಾಕ್ಷಿ ಪದಕೆರಗಿ ವನಜನಾಭನಂಕಿತದಿ |
ದನುಜನಾ ಸಭೆಯೊಳಗೆ ದಲ್ಲಣ ಮೂಡಿಸಿದಾ |
ಘನ ಭಕುತಿ ವೈರಾಗ್ಯ ನಿಧಿಯೆನಿಸಿ ಮೆರೆವಾ [೧]

ಕುಂತಿಯ ಗರ್ಭದಿ ಅಂತುಜನಿಸಿ ರಕ್ಕಸರ |
ಅಂತ್ಯಗೈದು ಶ್ರೀಕಾಂತಗೆ ಪರಮಾಪ್ತನೆನಿಸಿದ ||
ಪಂಥವಾಡಿ ದಾಯಾದಿ ಹಂತಕ ಬಲವಂತಾ |
ಕಂತುಪಿತನ ಸೇವೆಗೆ ನಿಂತ ಹೂನೂರ ಕಾಂತಾ [೨]

ಪಂಚಭೇದ ಪ್ರಪಂಚ ಸತ್ಯವೆಂದೆನ್ನುತಾ |
ಮುಂಚಿನ ಪರಮೇಷ್ಠಿ ತಾನೆನಿಸಿ ಮೆರೆವಾತಾ ||
ವಾಂಛಿತ ಫಲವೀವ ಸ್ವತಂತ್ರ ತತ್ವಾಂತರ್ಗತ |
ಪಂಚಬಾಣನಯ್ಯ ಪ್ರಸನ್ವೆಂಕಟನ ದೂತನೀತಾ [೩]


neneyiro nenayiro hUnUra hanumanna |
anuvAgi valivA SrI rAmadUtanna [pa]

vanadiya laMGisi vanavanava SOdhisi |
vanajAkShi padakeragi vanajanABanaMkitadi |
danujanA saBeyoLage dallaNa mUDisidA |
Gana Bakuti vairAgya nidhiyenisi merevA [1]

kuMtiya garBadi aMtujanisi rakkasara |
aMtyagaidu SrIkAMtage paramAptanenisida ||
paMthavADi dAyAdi haMtaka balavaMtA |
kaMtupitana sEvege niMta hUnUra kAMtA [2]

paMcaBEda prapaMca satyaveMdennutA |
muMcina paramEShThi tAnenisi merevAtA ||
vAMCita PalavIva svataMtra tatvAMtargata |
paMcabANanayya prasanveMkaTana dUtanItA [3]

Leave a Reply

Your email address will not be published. Required fields are marked *

You might also like

error: Content is protected !!