Composer : Shri Prasannavenkata dasaru [on Brahmanyapura Prana devaru]
ಮೂಲರೂಪತಳೆದಾ ಲೋಕಗುರು ನಿನ್ನಯ |
ಕಾಲಿಗೆರಗುವೆ ಶ್ರೀಲೋಲನ್ನ ತೋರೆನ್ನೊಳು |ಪ|
ತಲೆಯಮೇಲ್ಹೊತ್ತು ರಾಮಲಕ್ಷ್ಮಣರನು |
ಈ ಲೋಕದೋಳತಿ ಬಲನೆಂದೆನಿಸಿದ |
ಬಲ ಎಡದಲಿ ಹರಿ ಮುದ್ರೆಗಳಿಟ್ಟಹ |
ವಾಲಯತಾಲಯದೋಳಾಗತಮಯ [೧]
ಸಲಿರುಹ ಸುಲಲಿತ ಪಂಚಾಪದದಳ |
ನೀಲಗ್ರೀವಾಜಲರುಧಿ ತಪ ಫಲ |
ಕಾಲನೇಮನಾಕಾಲವಾಲಯವ
ಕಲಿ ಭಂಜನ ಸತ್ಕುಲ ಸುಮಲಾನನ [೨]
ಅಲವ ಮತದ ತತ್ವಾಖಿಲ ತಿರುಳನು |
ಇಳೆಯೋಳ್ಬೀರಿದ ಛಲದತ್ರಿಮುನಿಕರ
ಸುಲಭದಿ ಪೂಜೆಯಗೊಳ್ಳುತ ನಿಂದಿಹ |
ಬಲ ಪ್ರಸನ್ವೆಂಕಟ ದೂತ ಹನುಮಂತ [೩]
mUlarUpataLedA lOkaguru ninnaya |
kAligeraguve SrIlOlanna tOrennoLu |pa|
taleyamElhottu rAmalakShmaNaranu |
I lOkadOLati balaneMdenisida |
bala eDadali hari mudregaLiTTaha |
vAlayatAlayadOLAgatamaya [1]
saliruha sulalita paMcApadadaLa |
nIlagrIvAjalarudhi tapa Pala |
kAlanEmanAkAlavAlayava
kali BaMjana satkula sumalAnana [2]
alava matada tatvAKila tiruLanu |
iLeyOLbIrida Caladatrimunikara
sulaBadi pUjeyagoLLuta niMdiha |
bala prasanveMkaTa dUta hanumaMta [3]
Leave a Reply