Composer : Shri Prasannavenkata dasaru
ದುಮ್ಮಿ ಸಾಲೆನ್ನಿರಣ್ಣ ದುಮ್ಮಿ ಸಾಲೆನ್ನಿರೋ |
ದುಮ್ಮಿಸಾಲೆನ್ನಿ ಪರಬೊಮ್ಮನಾಳು ಮೂರು ರೂಪ
ಕಮ್ಮಗೋಲನಳಿದ ನೊಡೆಯ ನಮ್ಮ ಗುರು ಬಳಗವೆಂದು [ಪ]
ಮುಟ್ಟಿಸೆ ಸುದ್ದಿಯ ರಾಮನಟ್ಟಿದರೆ ರಕ್ಕಸರ
ಕಟ್ಟಿ ಕುಟ್ಟಿ ಕುಣಪ ಮೆದೆಗಳೊಟ್ಟಿಲೊಟ್ಟಿದ
ದಿಟ್ಟತನದಲ್ಲಿ ಲಂಕಾಪಟ್ಟಣ ಮಂದಿರ ಹೋಳಿ
ಸುಟ್ಟು ಬೊಬ್ಬೆಯಿಟ್ಟ ಜಗಜಟ್ಟಿ ಹನುಮಪ್ಪನ [೧]
ಕುರುಕಂಟಕ ಠಕ್ಕಿಸಿ ಕೊಟ್ಟರಗಿನ ಮನೆಯಲಿ ಕಾಯ
ಲೊರಗಿದರನುರುಹಿ ನಿಜರ ಹೊರಗೆ ಮಾಡಿದ
ಕುರುಗಣವನಕ್ಕೆ ರಣದಿ ಎರಗಿ ಅಗ್ನಿಯಂತೆ
ಹುರಿದಾ ವರಗದಾಧರ ಭೀಮ ಸಾರ್ವಭೌಮನ [೨]
ಧರೆ ಸಮಗ್ರ ರಾಜಕೆಂದು ಅರಸು ಪದವಿಗಳು ಸೊಕ್ಕಿ
ಸರಸವಾಡಿ ಸರಿಯನುಡಿಯೆ ಹರುಷತೀರ್ಥರು
ವಿರಸ ಪೋಕರಳಿದು ಸರ್ವಹರಿ ಸಮರ್ಪಣೇಕಚಿತ್ತ
ವಿರಸಾ ಶ್ರೀ ಪ್ರಸನ್ನವೆಂಕಟರಸ ಸಮತೆನಾಡಿದ [೩]
dummi sAlenniraNNa dummi sAlennirO |
dummisAlenni parabommanALu mUru rUpa
kammagOlanaLida noDeya namma guru baLagaveMdu [pa]
muTTise suddiya rAmanaTTidare rakkasara
kaTTi kuTTi kuNapa medegaLoTTiloTTida
diTTatanadalli laMkApaTTaNa maMdira hOLi
suTTu bobbeyiTTa jagajaTTi hanumappana [1]
kurukaMTaka Thakkisi koTTaragina maneyali kAya
loragidaranuruhi nijara horage mADida
kurugaNavanakke raNadi eragi agniyaMte huridA
varagadAdhara BIma sArvaBaumana [2]
dhare samagra rAjakeMdu arasu padavigaLu sokki
sarasavADi sariyanuDiye haruShatIrtharu
virasa pOkaraLidu sarvahari samarpaNEkacitta
virasA SrI prasannaveMkaTarasa samatenADida [3]
Leave a Reply