Composer : Shri Prasannavenkata dasaru
ಭಾರತಿ ಕಾಂತಾ ಜಯಭೀಮ ಬಲವಂತಾ
ಅರಿಷಿಣಗುಡಿಯರಸ ಆನಂದತೀರ್ಥಾ [ಅ.ಪ]
ಹರುಷದಲಿ ನಿನ್ನಾ ಹೃದಯ |
ತೆರೆದು ತೋರಿಸಿದ್ಯೋ ರಾಮನ್ನ ||
ಅರೆಕ್ಷಣದಿ ಅವುಷದಿಯ ಮರತಂದು |
ಅರಜೀವಗಳ ಪೊರೆದ್ಯೋ ಹನುಮಾ [೧]
ಮುಡಿಸಿದ್ಯೋ ಮಡದಿಗೆ ಹೂವಾ ಇರಿಸಿದೆ |
ಕಡಲಶಯನನಲಿ ನಿಜ ಭಾವಾ |
ತುಡುಕಿ ಕೌರವರ್ಹೆಡೆಮುರಿಕಟ್ಟಿ ತ್ವರದಿ |
ಉಡುಪಿಕೃಷ್ಣನ ಪ್ರೀತಿ ಪಡೆದ ಭೀಮಾ [೨]
ಧರೆಸಿ ಮೂರಾವತಾರ ಧರೆಯೊಳಗೆ |
ಮೆರೆದ್ಯೋ ಹರಿದಾಸ ಧೀರಾ |
ಸಿರಿಪ್ರಸನ್ವೆಂಕಟರಾಯನ್ನ ನಿಜರೂಪ |
ಅರಿತ ಆನಂದ ಮುನಿ ರನ್ನ ಘನ್ನ [೩]
BArati kAMtA jayaBIma balavaMtA
ariShiNaguDiyarasa AnaMdatIrthA [a.pa]
haruShadali ninnA hRudaya |
teredu tOrisidyO rAmanna ||
arekShaNadi avuShadiya marataMdu |
arajIvagaLa poredyO hanumA [1]
muDisidyO maDadige hUvA iriside |
kaDalaSayananali nija BAvA |
tuDuki kauravarheDemurikaTTi tvaradi |
uDupikRuShNana prIti paDeda BImA [2]
dharesi mUrAvatAra dhareyoLage |
meredyO haridAsa dhIrA |
siriprasanveMkaTarAyanna nijarUpa |
arita AnaMda muni ranna Ganna [3]
Leave a Reply