Composer : Shri Kakhandaki Krishna dasaru [on Yalagur Hanuma]
ಬಣ್ಣಿಸಲಳವಲ್ಲ ನಿಮ್ಮ ಪ್ರ
ಸನ್ನ ಮೂರುತಿ ಯಲಗೂರ ವಾಸ ಹನುಮಾ [ಪ]
ಅಂಜನಿಯುದರದಲಿ ಜನಿಸೀ ತೇಜ
ಪುಂಜ ರಾಮನ ಸೇವೆಯಲಿ ಮನ ನಿಲಿಸಿ
ಕಂಜ ಛವನ ಪಟ್ಟ ಧರಿಸಿ ಬಲು
ರಂಜಿಸಿ ಮೆರೆದೆ ಭಕ್ತಾಗ್ರಣಿಯೆನಿಸಿ [೧]
ಜ್ಞಾನ ಭಕುತಿ ವೈರಾಗ್ಯದಲಿ ಸರಿ
ಗಾಣೆನೋ ಸುರನರ ಉರಗ ಲೋಕದಲಿ
ಮಾನನಿಧಿಯೇ ವಿಕ್ರಮದಲಿ ಶರ
ಣಾಗತ ರಕ್ಷಕ ನೇಮ ಬಿರುದಲಿ [೨]
ಮೂರವ ತಾರದಿ ಬಂದು ದೀನೋ
ದ್ಧಾರಣ ಮಾಡಿದೆ ಸದ್ಬೋಧ ಗರದು
ಕಾರುಣಿ ಗುರುವಾಗೆಂದೆಂದು ಸಹ
ಕಾರದಿ ಮಹಿಪತಿ ಸುತಗೊಲಿದಿಂದು [೩]
baNNisalaLavalla nimma pra
sanna mUruti yalagUra vAsa hanumA [pa]
aMjaniyudaradali janisI tEja
puMja rAmana sEveyali mana nilisi
kaMja Cavana paTTa dharisi balu
raMjisi merede BaktAgraNiyenisi [1]
j~jAna Bakuti vairAgyadali sari
gANenO suranara uraga lOkadali
mAnanidhiyE vikramadali shara
NAgata rakShaka nEma birudali [2]
mUrava tAradi baMdu dInO
ddhAraNa mADide sadbOdha garadu
kAruNi guruvAgeMdeMdu saha
kAradi mahipati sutagolidiMdu [3]
Leave a Reply