Composer : Shri Jagannatha dasaru
ಬಂಧನವ ಪರಿಹರಿಸೊ ಭವವಿದೂರ
ಕಂದರ್ಪಜನಕ ಕಾರುಣ್ಯದಲಿ ಭಕ್ತರ ||ಪ||
ದುಷ್ಟಜನಗಳು ಬಲು ಕಷ್ಟವನೆ ಪಡಿಸುವುದು
ನಿನಗೆಷ್ಟು ಹೇಳಲಿ ಕೇಳು ಜಿಷ್ಣುಸಖನೇ
ವೃಷ್ಣೀಶ ನೀ ದಯಾದೃಷ್ಟಿಯಿಂದಲಿ ನೋಡಿ
ಹೃಷ್ಟನ್ನ ಮಾಡು ಸಂತುಷ್ಟಿಯಿಂದಲಿ ಬೇಗ ||೧||
ಹಯಮುಖನೆ ನಿನ್ನವರ ದಯದಿಂದ ಸಲಹುವುದು
ವಯನಗಮ್ಯನೆ ಲೋಕ ತ್ರಯವ ನಿರುತ
ಪ್ರಿಯನೆಂದು ನಿನಗೆ ನಾ ದೈನ್ಯದಲಿ ಮೊರೆ ಇಡುವೆ
ದಯ ಮಾಡುವುದು ಬೇಗ ಜಯಪ್ರದಾಯಕನಾಗಿ ||೨||
ವೀತಶೋಕನೆ ಎನ್ನ ಮಾತ ಲಾಲಿಸು ನಿನ್ನ
ದೂತರನ ಸಲಹುವುದು ಪ್ರೀತಿಯಿಂದ
ದಾತ ಶ್ರೀಜಗನ್ನಾಥವಿಠಲ ನಿನ್ನ ನಾ
ತುತಿಸಬಲ್ಲೆನೆ ವಿಧಾತೃ ಮುಖವಂದಿತನೆ ||೩||
baMdhanava parihariso BavavidUra
kaMdarpajanaka kAruNyadali Baktara ||pa||
duShTajanagaLu balu kaShTavane paDisuvudu
ninageShTu hELali kELu jiShNusaKanE
vRuShNISa nI dayAdRuShTiyiMdali nODi
hRuShTanna mADu saMtuShTiyiMdali bEga ||1||
hayamuKane ninnavara dayadiMda salahuvudu
vayanagamyane lOka trayava niruta
priyaneMdu ninage nA dainyadali more iDuve
daya mADuvudu bEga jayapradAyakanAgi ||2||
vItaSOkane enna mAta lAlisu ninna
dUtarana salahuvudu prItiyiMda
dAta SrIjagannAthaviThala ninna nA
tutisaballene vidhAtRu muKavaMditane ||3||
Leave a Reply