Tag: Bandhanava Parihariso

  • Bandhanava Parihariso

    Composer : Shri Jagannatha dasaru ಬಂಧನವ ಪರಿಹರಿಸೊ ಭವವಿದೂರಕಂದರ್ಪಜನಕ ಕಾರುಣ್ಯದಲಿ ಭಕ್ತರ ||ಪ|| ದುಷ್ಟಜನಗಳು ಬಲು ಕಷ್ಟವನೆ ಪಡಿಸುವುದುನಿನಗೆಷ್ಟು ಹೇಳಲಿ ಕೇಳು ಜಿಷ್ಣುಸಖನೇವೃಷ್ಣೀಶ ನೀ ದಯಾದೃಷ್ಟಿಯಿಂದಲಿ ನೋಡಿಹೃಷ್ಟನ್ನ ಮಾಡು ಸಂತುಷ್ಟಿಯಿಂದಲಿ ಬೇಗ ||೧|| ಹಯಮುಖನೆ ನಿನ್ನವರ ದಯದಿಂದ ಸಲಹುವುದುವಯನಗಮ್ಯನೆ ಲೋಕ ತ್ರಯವ ನಿರುತಪ್ರಿಯನೆಂದು ನಿನಗೆ ನಾ ದೈನ್ಯದಲಿ ಮೊರೆ ಇಡುವೆದಯ ಮಾಡುವುದು ಬೇಗ ಜಯಪ್ರದಾಯಕನಾಗಿ ||೨|| ವೀತಶೋಕನೆ ಎನ್ನ ಮಾತ ಲಾಲಿಸು ನಿನ್ನದೂತರನ ಸಲಹುವುದು ಪ್ರೀತಿಯಿಂದದಾತ ಶ್ರೀಜಗನ್ನಾಥವಿಠಲ ನಿನ್ನ ನಾತುತಿಸಬಲ್ಲೆನೆ ವಿಧಾತೃ ಮುಖವಂದಿತನೆ ||೩|| baMdhanava…

error: Content is protected !!