Varamahalakumi vandisuve

Composer : Shri Prasannavenkata dasaru

By Smt.Shubhalakshmi Rao

ವರಮಹಾಲಕುಮಿ ವಂದಿಸುವೆ ನಿನ್ನಡಿಗೆ |
ಕರುಣಾಯತಾಕ್ಷಿ ಕರ ಪಿಡಿದು ಪೊರೆಯೆ [ಪ]

ಸಿರಿತನದ ಸೌಭಾಗ್ಯ ಹಿರಿಹಿರಿದು ಸುರಿಸಿ |
ಹರಸಬೇಕಮ್ಮಾ ಶ್ರೀರಂಗನರಸಿ [ಅ.ಪ]

ಆರು ಮೂರೆರಡೊಂದು ಸಾವಿರನ ಸುರ ಸತಿಯೆ |
ಆರು ನಾಲಕು ತತ್ವಕಭಿಮಾನಿ ದೇವತೆಯೆ |
ಆರೈದು ಶತಕೃತು ಸ್ಮರಜಾತ ಮಾತೆಯೆ |
ಆರು ಮೊಗನಯ್ಯನನು ಪೊರೆದನ್ನದಾತೆಯೆ [೧]

ಪಂಚಭೇದ ಜ್ಞಾನ ಬೋಧಿಸಿದ ಬುಧಗೊಲಿದ |
ಪಂಚಬಾಣನ ಪಿತನ ವಲಿಸಿ ನಲಿದಾ ದೇವಿ ||
ಪಂಚೆರಡು ರಾತ್ರಿಲಿ ಮಿಂಚಿ ಪೂಜಿಪ ಲಕುಮಿ |
ಪಾಂಚಜನ್ಯವ ಪಿಡಿದ ಕಂಚೀಶನರಸಿ [೨]

ವಾಗ್ವೈಖರಿ ವಾಣಿ ವೈಷ್ಣವೀಶ್ವರೀ ಸಖ್ಯೆ |
ವಾಗ್ವಂಶನುತ ಚರಣೆ ಸಾಗರನ ಸುತಯೆ
ವಾಗ್ವಿಲಾಸದಿ ಮೆರೆವಖಗರಾಜಗಮನ |
ದಿಗ್ವಿಜಯ ಪ್ರಸನ್ವೆಂಕಟನ ತೋರೆ ಭಾರ್ಗವಿಯೆ [೩]


varamahAlakumi vaMdisuve ninnaDige |
karuNAyatAkShi kara piDidu poreye [pa]

siritanada sauBAgya hirihiridu surisi |
harasabEkammA SrIraMganarasi [a.pa]

Aru mUreraDoMdu sAvirana sura satiye |
Aru nAlaku tatvakaBimAni dEvateye |
Araidu SatakRutu smarajAta mAteye |
Aru moganayyananu poredannadAteye [1]

paMcaBEda j~jAna bOdhisida budhagolida |
paMcabANana pitana valisi nalidA dEvi ||
paMceraDu rAtrili miMci pUjipa lakumi |
pAMcajanyava piDida kaMcISanarasi [2]

vAgvaiKari vANi vaiShNavISvarI saKye |
vAgvaMSanuta caraNe sAgarana sutaye
vAgvilAsadi merevaKagarAjagamana |
digvijaya prasanveMkaTana tOre BArgaviye [3]

Leave a Reply

Your email address will not be published. Required fields are marked *

You might also like

error: Content is protected !!