Kamale ninnaya pada

Composer : Shri Vijayadasaru

By Smt.Shubhalakshmi Rao

ಕಮಲೆ ನಿನ್ನಯ ಪಾದ ಕಮಲದಲ್ಲೆನಗೆ
ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ [ಪ]

ಗಜರಾಜ ಗಮನೆಯೆ ತ್ರಿಜಗದ್ವಂದ್ಯಳೆಂದು
ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೇ (೧)

ಅಷ್ಟ ಸೌಭಾಗ್ಯ ವಿಶಿಷ್ಟವ ಕೊಟ್ಟು
ಕಷ್ಟವ ತಿಳಿದು ಸಂತುಷ್ಟನ ಮಾಡಮ್ಮ (೨)

ಶ್ರೇಷ್ಠನ್ನ ಮಾಡು ಉತ್ಕೃಷ್ಟ ಜ್ಞಾನವನಿತ್ತು
ಶಿಷ್ಟನೆಂದೆನಿಸಿ ಶ್ರೀಕೃಷ್ಣನ್ನ ರಾಣಿ (೩)

ಅಜಭವ ಮೊದಲಾದ ದ್ವಿಜರಿಂದ ವಂದಿತಳೆ
ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೆ (೪)

ದ್ವಿಜ ರಾಜ ಗಮನಳೆ ಭುಜಗ ಶಯನನಾದ
ವಿಜಯವಿಠ್ಠಲನಂಘ್ರಿ ರಜವ ಧರಿಸುವಳೆ (೫)


kamale ninnaya pAda kamaladallenage
vimala matiyanittu amalanna mADisE [pa]

gajarAja gamaneye trijagadvaMdyaLeMdu
Bajisi ninnaya pAdAMbujava ASraisidE (1)

aShTa sauBAgya viSiShTava koTTu
kaShTava tiLidu saMtuShTana mADamma (2)

SrEShThanna mADu utkRuShTa j~jAnavanittu
SiShTaneMdenisi SrIkRuShNanna rANi (3)

ajaBava modalAda dvijariMda vaMditaLe
Bajisi ninnaya pAdAMbujava ASraiside (4)

dvija rAja gamanaLe Bujaga SayananAda
vijayaviThThalanaMGri rajava dharisuvaLe (5)

Leave a Reply

Your email address will not be published. Required fields are marked *

You might also like

error: Content is protected !!