Tag: Kamale ninnaya pada

  • Kamale ninnaya pada

    Composer : Shri Vijayadasaru ಕಮಲೆ ನಿನ್ನಯ ಪಾದ ಕಮಲದಲ್ಲೆನಗೆವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ [ಪ] ಗಜರಾಜ ಗಮನೆಯೆ ತ್ರಿಜಗದ್ವಂದ್ಯಳೆಂದುಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೇ (೧) ಅಷ್ಟ ಸೌಭಾಗ್ಯ ವಿಶಿಷ್ಟವ ಕೊಟ್ಟುಕಷ್ಟವ ತಿಳಿದು ಸಂತುಷ್ಟನ ಮಾಡಮ್ಮ (೨) ಶ್ರೇಷ್ಠನ್ನ ಮಾಡು ಉತ್ಕೃಷ್ಟ ಜ್ಞಾನವನಿತ್ತುಶಿಷ್ಟನೆಂದೆನಿಸಿ ಶ್ರೀಕೃಷ್ಣನ್ನ ರಾಣಿ (೩) ಅಜಭವ ಮೊದಲಾದ ದ್ವಿಜರಿಂದ ವಂದಿತಳೆಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೆ (೪) ದ್ವಿಜ ರಾಜ ಗಮನಳೆ ಭುಜಗ ಶಯನನಾದವಿಜಯವಿಠ್ಠಲನಂಘ್ರಿ ರಜವ ಧರಿಸುವಳೆ (೫) kamale ninnaya pAda kamaladallenagevimala matiyanittu…

error: Content is protected !!