Hosakannu enage

Composer : Shri Indiresha ankita

By Smt.Shubhalakshmi Rao

ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ |
ವಸುದೇವ ಸುತನ ಕಾಂಬುದಕೆ || ಪ ||
ಘಸಣೆಯಾಗಿದೆ ಭವ ವಿಷಯ ವಾರಿಧಿಯೊಳು |
ಶಶಿಮುಖಿ ಕರುಣದಿ ಕಾಯೇ ||ಅ. ಪ.||

ಪರರ ಅನ್ನವನುಂಡು | ಪರರ ಧನವ ಕಂಡು
ಪರಿ ಪರಿ ಕ್ಲೇಶಗಳುಂಬೆ ||
ವರಲಕ್ಷ್ಮೀ ನಿನ್ನ ಚರಣವ ಮೊರೆಹೊಕ್ಕೆ
ಕರುಣದಿ ಕಣ್ಣೆತ್ತಿ ನೋಡೇ || ೧ ||

ಮಂದಹಾಸಿನಿ ಭವ | ಸಿಂಧುವಿನೊಳಗಿಟ್ಟು |
ಛಂದವೇ ಅಮ್ಮ ನೋಡುವುದು |
ಕಂದನಂದದಿ ಎನ್ನ ಕುಂದುಗಳೆಣಿಸದೆ |
ಮಂದರೋದ್ಧರನ ತೋರಮ್ಮ || ೨ ||

ಅಂದ ಚಂದಗಳೊಲ್ಲೆ | ಬಂಧು ಬಳಗವೊಲ್ಲೆ |
ಬಂಧನಕೆಲ್ಲ ಕಾರಣವು ||
ಇಂದಿರೇಶನ ಪಾದ ದ್ವಂದ್ವವ ತೋರಿ |
ಹೃನ್ಮಂದಿರದೊಳು ಬಂದು ನಿಲ್ಲೆ || ೩ ||


hosakaNNu enage haccalibEku jagadaMbA |
vasudEva sutana kAMbudake || pa ||
ghasaNeyAgide bhava viShaya vAridhiyoLu |
shashimukhi karuNadi kAyE ||a. pa.||

parara annavanuMDu | parara dhanava kaMDu
pari pari klEshagaLuMbe ||
varalakShmI ninna caraNava morehokke
karuNadi kaNNetti nODE || 1 ||

maMdahAsini bhava | siMdhuvinoLagiTTu |
ChaMdavE amma nODuvudu |
kaMdanaMdadi enna kuMdugaLeNisade |
maMdarOddharana tOramma || 2 ||

aMda chaMdagaLolle | baMdhu baLagavolle |
baMdhanakella kAraNavu ||
iMdirEshana pAda dvaMdvava tOri |
hRunmaMdiradoLu baMdu nille || 3 ||

Leave a Reply

Your email address will not be published. Required fields are marked *

You might also like

error: Content is protected !!