Composer : Shri Kakhandaki Krishna dasaru
ರಘುಪತಿಯಾ ತೋರಮ್ಮಾ |
ರಾಜೀವಾಂಬರೆ ಬಾರಮ್ಮಾ [ಪ]
ಭಕುತರಾ-ಭೀಷ್ಟೇಯನು | ಪೂರಿಸುವನಾ
ಅನುದಿನ ಕಾವನಾ | ನಿನ್ನಯ ಜೀವನಾ [ಅ.ಪ]
ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ |
ದುರಿತ ಭಂಜನಗೈವಾ | ಪುಣ್ಯನಾಮನಾ
ಸದ್ಗುಣ ಧಾಮನಾ | ದಶರಥ ರಾಮನಾ [೧]
ವಸುಧಾಕಾಯ ಸಂಭೂತೆ | ವರದೇವೇದ ವಿಖ್ಯಾತೆ |
ಅಸಮಧನು ವನೆತ್ತ್ಯಭಯವಿತ್ತನಾ |
ನಿನಗೊಲಿದಾತನಾ | ರಘುಕುಲ ಜಾತನಾ [೨]
ಶರಣೆಂಬೆ ಮಹಾಮಾಯೆ | ಸಲಹಬೇಕೆನ್ನ ತಾಯೆ |
ಗುರುಮಹಿಪತಿ ಸ್ವಾಮಿ | ಜಗದಯ್ಯನಾ
ಪವನಜ ಪ್ರಿಯನಾ ಸುರಮುನಿ ಧೇಯನಾ [೩]
raGupatiyA tOrammA |
rAjIvAMbare bArammA [pa]
BakutarA-BIShTEyanu | pUrisuvanA
anudina kAvanA | ninnaya jIvanA [a.pa]
sarasA kOkilAlApe | sakalA maMgaLa rUpe |
durita BaMjanagaivA | puNyanAmanA
sadguNa dhAmanA | daSaratha rAmanA [1]
vasudhAkAya saMBUte | varadEvEda viKyAte |
asamadhanu vanettyaBayavittanA |
ninagolidAtanA | raGukula jAtanA [2]
SaraNeMbe mahAmAye | salahabEkenna tAye |
gurumahipati svAmi | jagadayyanA
pavanaja priyanA suramuni dhEyanA [3]
Leave a Reply