Composer : Shri Prasannavenkata dasaru
ಕೋರಿ ಕರೆವರು ಬಾ ಮನೆಗೆ |
ಸಿರಿದೇವಿ ಶ್ರೀಮಹಾಲಕುಮಿಯೆ [ಅ.ಪ]
ಸುರಪನಾಲಯ ತೊರೆದರೇನಂತೆ |
ಹರಿಗನುಗಾಲವೂ ನಿನ್ನದೇ ಚಿಂತೆ |
ಮರುಳು ಮಾಡಿ ಹರಿ ನಿನ್ಹಿಂದಿರುವಂತೆ |
ವರಿಸಿ ವೈಕುಂಠ ತೊರೆದನಂತೆ [೧]
ತರಳೆಯರೆಲ್ಲಾ ಪರಮಹರುಷದಿ |
ಹರಿವಾಣದಿ ಹವಳದಾರತಿ ಬೆಳಗಿ |
ಹರಿಯರಾಣಿ ನಿನ್ನ ಚರಣಕೆರಗಿ |
ಹರಕೆ ಸಲ್ಲಿಸುವರು ಬಾ ಶಿರಿದೇವಿ [೨]
ಕರವೀರಪುರ ಸ್ಥಿರವಾಸಳೇ
ನಾರೀ ಮಣಿಯರ ಸರ್ವಸಂಪನ್ನ ಸಾಗರ ಸುತೆ |
ಸಿರಿಪ್ರಸನ್ವೆಂಕಟ ರಾಯನ್ನ ತೋರಿ |
ಹರಸಬೇಕಮ್ಮ ಶ್ರೀಕರನ್ನರಸಿ ಮಹಾಲಕುಮಿ [೩]
kOri karevaru bA manege |
siridEvi SrImahAlakumiye [a.pa]
surapanAlaya toredarEnaMte |
hariganugAlavU ninnadE ciMte |
maruLu mADi hari ninhiMdiruvaMte |
varisi vaikuMTha toredanaMte [1]
taraLeyarellA paramaharuShadi |
harivANadi havaLadArati beLagi |
hariyarANi ninna caraNakeragi |
harake sallisuvaru bA SiridEvi [2]
karavIrapura sthiravAsaLE
nArI maNiyara sarvasaMpanna sAgara sute |
siriprasanveMkaTa rAyanna tOri |
harasabEkamma SrIkarannarasi mahAlakumi [3]
Leave a Reply