Tag: Kori karevaru baa manege

  • Kori karevaru baa manege

    Composer : Shri Prasannavenkata dasaru ಕೋರಿ ಕರೆವರು ಬಾ ಮನೆಗೆ |ಸಿರಿದೇವಿ ಶ್ರೀಮಹಾಲಕುಮಿಯೆ [ಅ.ಪ] ಸುರಪನಾಲಯ ತೊರೆದರೇನಂತೆ |ಹರಿಗನುಗಾಲವೂ ನಿನ್ನದೇ ಚಿಂತೆ |ಮರುಳು ಮಾಡಿ ಹರಿ ನಿನ್ಹಿಂದಿರುವಂತೆ |ವರಿಸಿ ವೈಕುಂಠ ತೊರೆದನಂತೆ [೧] ತರಳೆಯರೆಲ್ಲಾ ಪರಮಹರುಷದಿ |ಹರಿವಾಣದಿ ಹವಳದಾರತಿ ಬೆಳಗಿ |ಹರಿಯರಾಣಿ ನಿನ್ನ ಚರಣಕೆರಗಿ |ಹರಕೆ ಸಲ್ಲಿಸುವರು ಬಾ ಶಿರಿದೇವಿ [೨] ಕರವೀರಪುರ ಸ್ಥಿರವಾಸಳೇನಾರೀ ಮಣಿಯರ ಸರ್ವಸಂಪನ್ನ ಸಾಗರ ಸುತೆ |ಸಿರಿಪ್ರಸನ್ವೆಂಕಟ ರಾಯನ್ನ ತೋರಿ |ಹರಸಬೇಕಮ್ಮ ಶ್ರೀಕರನ್ನರಸಿ ಮಹಾಲಕುಮಿ [೩] kOri karevaru bA manege…

error: Content is protected !!