Composer : Shri Gurugopala vittala
ದುರ್ಗೇ ಪಾಲಿಸೆ ಮಾತೆ ನಮ್ಬಿದೆ ,
ಬ್ರಹ್ಮ ಭರ್ಗಾದಿ ಸುರ ವಿನುತೆ |
ದುರ್ಗಮ ಭವದಿಂದ ನಿರ್ಗಮ ಗೈಸು ಹೇ
ಭಾರ್ಗವಿ ಸ್ವರ್ಗಪವರ್ಗ ಪ್ರದಾತೆ ||ಅ.ಪ.||
ಅಂಬರ ಭೂಮಿ ವಿಹಾರಿ ಅಷ್ಟಾಯುಧ
ದಿವ್ಯಾಮ್ಬರಧಾರಿ ಅಸುರಾರಿ
ನಂಬಿದೆ ನಿನ್ನ ಪದಾಂಬುಜ ಎನ್ನ
ಹೃದಂಬರದಲ್ಲಿಹ ಬಿಮ್ಬನ ತೋರಿಸು,
ಎಂಬೆ, ಜಗದಂಬೆ, ಸುನಿತಾಂಬೆ,
ಶುಭ ಗುಣ ನಿಕುರಂಬೆ ||೧||
ನಂದಗೋಪನ ಕುಮಾರಿ ನರಸಿಂಹಾಂಕ
ಮಂದಿರೆ ಸಜ್ಜನೋದ್ಧಾರಿ,
ಇಂದಿರೆ ಎನ್ನಯ ಇಂದ್ರಿಯ ಮನಸು,
ಮುಕುಂದನ ಪದದಲಿ ತಂದು ನಿಲ್ಲಿಸು,
ಎಂದೆ, ಎನ್ನ ಇಂದೆ , ಇನ್ನು ಮುಂದೆ ,
ಗತಿ ನೀನೆ ಎಂದೆ ||೨||
ಸಿರಿ ನಾರಸಿಂಹನ ರಾಣಿ ವರನೀಲವೇಣಿ |
ಪರಮ ಕಲ್ಯಾಣಿ ಗುಣ ಶ್ರೇಣಿ |
ಪರತರ ಗುರು ಗೋಪಾಲವಿಠಲನ
ಚರಣ ಕಮಲದಲಿ ಸ್ಥಿರವಾದ ಭಕುತಿಯ,
ನೀಡೆ , ನಿನಗೀಡೆ , ನಲಿದಾಡೆ,
ದಯಮಾಡಿ ನೋಡೆ ||೩||
durgE pAlise maate nambide ,
brahma bhargAdi sura vinute |
durgama bhavadiMda nirgama gaisu hE
bhArgavi svargapavarga pradAte ||a.pa.||
aMbara bhUmi vihAri aShTAyudha
divyAmbaradhAri asurAri
naMbide ninna padAMbuja enna
hRudaMbaradalliha bimbana tOrisu,
eMbe, jagadaMbe, sunitAMbe,
shubha guNa nikuraMbe ||1||
naMdagOpana kumAri narasiMhAMka
maMdire sajjanOddhAri,
iMdire ennaya iMdriya manasu,
mukuMdana padadali taMdu nillisu,
eMde, enna iMde , innu muMde ,
gati neene eMde ||2||
siri nArasiMhana rANi varaneelavENi |
parama kalyANi guNa shrENi |
paratara guru gOpAlaviThalana
charaNa kamaladali sthiravAda bhakutiya,
neeDe , ninagIDe , nalidADe,
dayamADi nODe ||3||
Leave a Reply