Hodi nagari mele – Hari

Composer : Shri Purandara dasaru

Kum.Viraja Satya

ಹೊಡೀ ನಗಾರಿ ಮೇಲೆ ಕೈಯ ಘಡ ಘಡ
ಹೊಡೀ ನಗಾರಿ ಮೇಲೆ ಕೈಯ ||ಪ||

ಮೃಡ ವಂದ್ಯನ ಪಾದ ಬಿಡದೆ ಭಜಿಪರಘ
ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಅ.ಪ.||

ವೇದಗಮ್ಯ ಸಕಲಾರ್ತಿ ನಿವಾರಕ
ಮೋದವೀವ ಮಧುಸೂದನ ಪರನೆಂದು (೧)

ನಿಷ್ಟೆಯಿಂದ ಮನಮುಟ್ಟಿ ಭಜಿಪ ಜನ-ರಿಷ್ಟವ
ಕೊಡುವ ಶ್ರೀ ಕೃಷ್ಣನೆ ಪರನೆಂದು (೨)

ವಂದಿಪ ಜನರಘ ವೃಂದ ಕಳೆದು ಮುದ-ದಿಂದ
ಪೊರೆವ ಮುಕುಂದನೆ ಪರನೆಂದು (೩)

ವಾಸುದೇವ ತನ್ನ ದಾಸ ಜನರ ಹೃದ್-ವಾಸನಾಗಿ
ಇಹ ಶ್ರೀಶನೆ ಪರನೆಂದು (೪)

ಇಂದಿರೇಶ ಪರನೆಂದು ಭಜಿಸುವರ
ಬಂದು ಕಾಯ್ವ ಗೋವಿಂದನೆ ಪರನೆಂದು (೫)

ಗಾನಲೋಲ ತನ್ನ ಧ್ಯಾನಿಸುವರನೆಲ್ಲ
ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು (೬)

ಈ ಪೃಥ್ವೀಯೊಳು ವ್ಯಾಪಕನಾಗಿಹ
ಶ್ರೀಪತಿ ಪುರಂದರ ವಿಠಲನೆ ಪರನೆಂದು (೭)


hoDI nagAri mEle kaiya ghaDa ghaDa
hoDI nagAri mEle kaiya ||pa||

mRuDa vaMdyana pAda biDade bhajiparagha
biDisi poreva jagadoDeyane paraneMdu ||a.pa.||

vEdagamya sakalArti nivAraka
mOdavIva madhusUdana paraneMdu (1)

niShTeyiMda manamuTTi bhajipa jana-riShTava
koDuva shrI kRuShNane paraneMdu (2)

vaMdipa janaragha vRuMda kaLedu muda-diMda
poreva mukuMdane paraneMdu (3)

vAsudEva tanna dAsa janara hRud-vAsanAgi
iha shrIshane paraneMdu (4)

iMdirEsha paraneMdu bhajisuvara
baMdu kAyva gOviMdane paraneMdu (5)

gAnalOla tanna dhyAnisuvaranella
mAnadiMda kAyva shrInidhi paraneMdu (6)

I pRuthvIyoLu vyApakanAgiha
shrIpati puraMdara viThalane paraneMdu (7)

Leave a Reply

Your email address will not be published. Required fields are marked *

You might also like

error: Content is protected !!