Dasadeekshe Suladi – Shripadarajaru

By Smt.Nandini Sripad,Blore

ಶ್ರೀ ಶ್ರೀಪಾದರಾಜ ವಿರಚಿತ ದಾಸದೀಕ್ಷೆ ಸುಳಾದಿ
ರಾಗ: ಸಾರಂಗ
ಧ್ರುವತಾಳ
ನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲ
ನಿನ್ನಾಧೀನ ಬಂಧ ಮೋಕ್ಷ ನಿರಯಗಳು
ನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲ
ನಿನ್ನಾಧೀನ ಸುಕೃತ ದುಷ್ಕೃತ ಫಲವೋ
ನಿನ್ನಾಧೀನ ವಿಷಯಾತ್ಮಕ ಬುದ್ಧಿಗಳೆಲ್ಲ
ನಿನ್ನಾಧೀನ ಚರಾಚರವೆಂದು ಶೃತಿ ಸಾರುತಿದೆ
ಎಂತು ಪುಣ್ಯಪಾಪಂಗಳು ನಿನ್ನ ಲೇಪಿಸವೊ ದೇವ
ಇಂತು ಜೀವರನ ನೋಡಿ ಪಾಪಂಗಳುಣಿಸುವೆ
ಅಂತರಾತ್ಮನೆ ನಿನ್ನ ಮಹಿಮೆಗೆ ನಮೊ ನಮೋ
ಎಂತು ಚಿತ್ತವೊ ನೀನೆಂತು ಪಾಲಿಸುವಿಯೋ ರಂಗವಿಟ್ಠಲ || ೧ ||

ಮಠ್ಯತಾಳ
ಮುನ್ನ ನಿನ್ನ ಚರಣ ಕಮಲವ
ನೆನಿಯದೆ ಭವಗಳಲ್ಲಿ ಬಂದೆನೊ
ಪನ್ನಗಶಯನ ಶ್ರೀಹರೆ
ಎನ್ನ ಗುಣ ದೋಷವರಸದೇ
ಇನ್ನು ಕಾಯೋ ರಂಗವಿಟ್ಠಲ || ೨ ||

ತ್ರಿಪುಟತಾಳ

ಕರಣಗಳು ಬಿಡದೇ ತಮ್ಮ ತಮ್ಮ
ವಿಷಯಂಗಳಿಗೆ ಎಳವುತಲಿವೆ ಎನ್ನನು
ಹರಣ ನಿನ್ನದೊ ಕರುಣಾಕರನೆ
ಕರುಣಿ ನಿನ್ನ ಭಕತರಿಗೆ ಶರಣನೆಂದೆ ಎನ್ನನು
ಪೊರೆವದು ಬಿರಿದುಚಿತ
ಕರುಣಾಕರನೆ ರಂಗವಿಟ್ಠಲರೇಯಾ
ಪೊರೆವದು ಬಿರಿದುಚಿತ || ೩ ||

ಅಟ್ಟತಾಳ
ಬಂದು ಬಂದು ನಾನಾ ಭವದಲ್ಲಿ ನೊಂದೆನು
ನಂದನಕಂದ ಇಂದಿರಾನಂದ
ಕುಂದ ಶುದ್ಧ ಧವಳದಂತೆ ಮಂದಹಾಸ
ನಂದನಕಂದ ಇಂದಿರಾನಂದ
ಇಂದೆನ್ನ ಸಲಹಯ್ಯಾ ರಂಗವಿಟ್ಠಲ || ೪ ||

ಏಕತಾಳ

ಹರಿಯೆ ನಿನ್ನ ನೆನೆದವ ನರಕವ ಹೊಗನಂತೆ
ನಾ ನಿನ್ನೊಮ್ಮೆ ಇಮ್ಮನೆ ನೆನೆವೆ
ಕರುಣಿಸಿ ಕಾಯೋ ರಂಗವಿಟ್ಠಲ || ೫ ||

ಜತೆ
ಮಂಗಳಮಹಿಮ ಭುಜಂಗಶಯನ ನಮೋ
ಜಂಗುಳಿ ದೈವದಗಂಡ ರಂಗವಿಟ್ಠಲ ||


SrI SrIpAdarAja viracita dAsadIkShe suLAdi
rAga: sAraMga
dhruvatALa
ninnAdhIna SarIra karaNa cEShTegaLella
ninnAdhIna baMdha mOkSha nirayagaLu
ninnAdhIna yOgyate sAdhana sAdhyagaLella
ninnAdhIna sukRuta duShkRuta PalavO
ninnAdhIna viShayAtmaka buddhigaLella
ninnAdhIna carAcaraveMdu SRuti sArutide
eMtu puNyapApaMgaLu ninna lEpisavo dEva
iMtu jIvarana nODi pApaMgaLuNisuve
aMtarAtmane ninna mahimege namo namO
eMtu cittavo nIneMtu pAlisuviyO raMgaviTThala || 1 ||

maThyatALa
munna ninna caraNa kamalava
neniyade BavagaLalli baMdeno
pannagaSayana SrIhare
enna guNa dOShavarasadE
innu kAyO raMgaviTThala || 2 ||

tripuTatALa

karaNagaLu biDadE tamma tamma
viShayaMgaLige eLavutalive ennanu
haraNa ninnado karuNAkarane
karuNi ninna Bakatarige SaraNaneMde ennanu
porevadu biriducita
karuNAkarane raMgaviTThalarEyA
porevadu biriducita || 3 ||

aTTatALa
baMdu baMdu nAnA Bavadalli noMdenu
naMdanakaMda iMdirAnaMda
kuMda Suddha dhavaLadaMte maMdahAsa
naMdanakaMda iMdirAnaMda
iMdenna salahayyA raMgaviTThala || 4 ||

EkatALa

hariye ninna nenedava narakava hoganaMte
nA ninnomme immane neneve
karuNisi kAyO raMgaviTThala || 5 ||

jate
maMgaLamahima BujaMgaSayana namO
jaMguLi daivadagaMDa raMgaviTThala ||

Leave a Reply

Your email address will not be published. Required fields are marked *

You might also like

error: Content is protected !!