Composer : Shri Mohana dasaru
ಕರುಣಿಸಯ್ಯಾ ಕಂಜಜನಯ್ಯಾ |
ಕರ್ಣರಹಿತ ಶಯ್ಯಾ, ಕನಕಾದ್ರಿರಾಯಾ [ಪ]
ಕರಿವರದನೆ ನಿನ್ನ ಚರಣ ನಂಬಿದೆ
ಎನ್ನ ಪರಿಪಾಲಿಸುವದು ಪರಮ ಕೃಪಾಳೊ [ಅ.ಪ.]
ಕೋಟಲೆ ಸಂಸಾರವೆಂಬೊ | ನೀಟು ಶರಧಿಯನ್ನು
ದಾಟಲಾರೆನೊ ನಾನೂ | ಇದೇನೊ |
ನಾಟಕಾಧಾರ ನಿನ್ನ | ನಂಬಿದಾ ಮೇಲೆ ಎನ್ನ
ಬೂಟಕನೆನಸುವರೇ | ಮುರಾರೇ ||
ಹಾಟಕಾಂಬರ ಧರ ಹರಿಯೇ ಕೇಳ್ವುದಿನ್ನು |
ಕೋಟಿ ವ್ಯಾಳೆಗೆ ಭಕ್ತ ಕೋಟಿಯೊಳಗಿಟ್ಟು ಎನ್ನ |
ನೀಟು ಮಾರ್ಗವ ತೋರಿ ಪಾಟು ಪಡಿಪ
ಯಮ ಕಾಟ ಕಳೆದು ದಿವ್ಯ ನೋಟದಿ ನೋಡು [೧]
ಆರರ್ಧ ಗುಣದಿಂದ | ಆರು ಅರಿಗಳಿಂದ
ಆರೆರಡು ಮದದಿಂದಾ | ಆನಂದಾ |
ಆರು ಮೂರು ಕಾಣದೆ | ಆರು ನಾಲ್ಕು ತಿಳಿಯದೆ
ಆರೈದು ನಿಲ್ಲಿಸದೆ | ಹೀಗಾದೇ ||
ಆರರ ಸೇವಿಸಲಾರದೆ ನಿನ್ನ ಪದಾರವಿಂದವ
ಸರ್ವದ ಸೇರದೇ ಆರೆಂದು ಎನ್ನ ನೀ ದೂರ ನೋಡದೆ
ಬಲು ಸಾರೆಗರಿಯೋ ಕಂಸಾರಿ ಮುರಾರಿ [೨]
ತಂದೆ ಯೆನಗೆ ನೀನೇ | ಇಂದಿರೆ ಜನನಿ ಗೋ-ವಿಂದ
ಇನ್ನೊಬ್ಬರಿಲ್ಲ | ನೀ ಬಲ್ಲೆಲ್ಲಾ |
ಸುಂದರ ವಿಗ್ರಹನೆ | ಸುಗುಣ ಸಾಕಾರ
ಶುಭಸಾಂದ್ರಾ ಭಕುತ ವತ್ಸಲ | ಗೋಪಾಲಾ ||
ಎಂದೆಂದಿಗೆ ಎನ್ನಿಂದ ಅಗಲದೆ ಮುಕುಂದ ಮುನಿ
ವೃಂದವಂದಿತ ಚರಣನೇ |
ಸಿಂಧುಶಯನ ಶಿರಿ ಮೋಹನ ವಿಠಲ
ಬಾಲೇಂದು ವದನ ಸುಗುಣ ಸಾಂದ್ರಾ ಉಪೇಂದ್ರಾ [೩]
karuNisayyA kaMjajanayyA |
karNarahita SayyA, kanakAdrirAyA [pa]
karivaradane ninna caraNa naMbide
enna paripAlisuvadu parama kRupALo [a.pa.]
kOTale saMsAraveMbo | nITu Saradhiyannu
dATalAreno nAnU | idEno |
nATakAdhAra ninna | naMbidA mEle enna
bUTakanenasuvarE | murArE ||
hATakAMbara dhara hariyE kELvudinnu |
kOTi vyALege Bakta kOTiyoLagiTTu enna |
nITu mArgava tOri pATu paDipa
yama kATa kaLedu divya nOTadi nODu [1]
Arardha guNadiMda | Aru arigaLiMda
AreraDu madadiMdA | AnaMdA |
Aru mUru kANade | Aru nAlku tiLiyade
Araidu nillisade | hIgAdE ||
Arara sEvisalArade ninna padAraviMdava
sarvada sEradE AreMdu enna nI dUra nODade
balu sAregariyO kaMsAri murAri [2]
taMde yenage nInE | iMdire janani gO-viMda
innobbarilla | nI ballellA |
suMdara vigrahane | suguNa sAkAra
SuBasAMdrA Bakuta vatsala | gOpAlA ||
eMdeMdige enniMda agalade mukuMda muni
vRuMdavaMdita caraNanE |
siMdhuSayana Siri mOhana viThala
bAlEMdu vadana suguNa sAMdrA upEMdrA [3]
Leave a Reply