Kandanallave enna

Composer : Shri Purandara dasaru

Kum.Harini and Smt.Viraja

ಕಂದನಲ್ಲವೆ ಎನ್ನ ಕುಂದಣದ ಅರಗಿಣಿ
ಕಂದನ ಕಾಣಿರೇನೆ ಗೋಪಿಯ ಕಂದ ||ಪ||

ಉಂಗುರವಿಟ್ಟಿದೆ ಉಡುದಾರ ಕಟ್ಟಿದೆ
ಬಂಗಾರ ಟೋಪಿಯ ತಲೆಮೇಲೆ ಇಟ್ಟಿದೆ ||೧||

ರೊಟ್ಟಿಯ ಸುಟ್ಟಿದೆ ತುಪ್ಪವ ಕಾಸಿದೆ
ಎಷ್ಟು ಹೊತ್ತು ಹೋಯಿತು ಉಣಲಿಲ್ಲ ||೨||

ಕಾಸಿಗೆ ಹೋಗಿ ನಾ ಕೂಸಿನ ಪಡೆದೆ
ಪುರಂದರ ವಿಠಲನ
ದಾಸರಿಗೆ ತಕ್ಕ ಮಗುವೆ ನಮ್ಮಮ್ಮ
ಮಗುವೆ ನಮ್ಮಮ್ಮ ||೩||


kaMdanallave enna kuMdaNada aragiNi
kaMdana kANirEne gOpiya kaMda ||pa||

uMguraviTTide uDudAra kaTTide
baMgAra TOpiya talemEle iTTide ||1||

roTTiya suTTide tuppava kAside
eShTu hottu hOyitu uNalilla ||2||

kAsige hOgi nA kUsina paDede
puraMdara viThalana
dAsarige takka maguve nammamma
maguve nammamma ||3||

Leave a Reply

Your email address will not be published. Required fields are marked *

You might also like

error: Content is protected !!