Composer : Shri Guruabhinava janardana vittala
ತುಂಗಾತೀರದಿ ರಾಜಿಪ ಯತಿಯ
ನೀರೆ ನೋಡೋಣ ಬಾ [ಪ]
ವೃಂದಾವನದೊಳಗಿರುವ
ವೃಂದಾರಕರನು ಪೊರೆವ
ವೃಂದಗುಣಗಳಿಂ ಮೆರೆವ
ವೃಂದಾರಕ ತರು ಎನಿಸಿದ ಸುಜನಕೆ [೧]
ಮರುತ ಮತಾಂಬುಧಿ ಚಂದ್ರ ದಿನ-
ಕರ ಅಘತಮಕೆ ರವೀಂದ್ರ
ದುರುಳ ಮತಾಹಿ ಖಗೇಂದ್ರ
ಗುರು ಕರುಣಾಕರ ಶ್ರೀರಾಘವೇಂದ್ರರ [೨]
ರವಿ ಶಶಿ ಕುಜ ಬುಧ ಗುರುವೆ
ಕವಿ ರಾಹು ಧ್ವಜ ಗುರು ಬಲವೆ
ಇವರ ದರುಶನದ ಫಲವೆ ಗುರು
ಅಭಿನವ ಜನಾರ್ದನವಿಠಲನ ದಯವೆ [೩]
tuMgAtIradi rAjipa yatiya
nIre nODONa bA [pa]
vRuMdAvanadoLagiruva
vRuMdArakaranu poreva
vRuMdaguNagaLiM mereva
vRuMdAraka taru enisida sujanake [1]
maruta matAMbudhi caMdra dina-
kara aGatamake ravIMdra
duruLa matAhi KagEMdra
guru karuNAkara SrIrAGavEMdrara [2]
ravi SaSi kuja budha guruve
kavi rAhu dhvaja guru balave
ivara daruSanada Palave guru
aBinava janArdanaviThalana dayave [3]
Leave a Reply