Composer : Shri Purandara dasaru
ಗೋವಿಂದ ಗೋವಿಂದ ನಿನ್ನಾನಂದ
ಸಾಧನ ಸಕಲವು ನಿನ್ನಾನಂದ |ಪ|
ಅಣು ರೇಣು ತೃಣ ಕಾಷ್ಟ ಪರಿ ಪೂರ್ಣ ಗೋವಿಂದ |
ನಿರ್ಮಲಾತ್ಮಕನಾಗಿ ಇರುವೋದೆ ಆನಂದ (೧)
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ
ಈ ಪರಿ ಮಹಿಮೆಯ ತಿಳಿಯೋದೆ ಆನಂದ (೨)
ಮಂಗಳ ಮಹಿಮ ಶ್ರೀ ಪುರಂದರ ವಿಠ್ಠಲ
ಹಿಂಗದೆ ದಾಸರ ಸಲಹೋದೆ ಆನಂದ (೩)
gOviMda gOviMda ninnAnaMda
saadhana sakalavu ninnAnaMda |pa|
aNu rENu tRuNa kaaShTa pari poorNa gOviMda |
nirmalAtmakanAgi iruvOde AnaMda (1)
sRuShTi sthiti laya kAraNa gOviMda
ee pari mahimeya tiLiyOde AnaMda (2)
maMgaLa mahima shrI puraMdara viThThala
hiMgade dAsara salahOde AnaMda (3)
Leave a Reply