Composer : Shri Vijaya dasaru
ಶ್ರೀವೇಂಕಟೇಶ ಸುಪ್ರಭಾತ
ರಾಗ: ಭೌಳಿ, ವಾರ್ಧಿಕ ಷಟ್ಟದಿ
ಭಕ್ತಜನ ಸಂರಕ್ಷಣಾ || ಪ ||
ಭಕ್ತಜನ ಸಂರಕ್ಷ ಭವದುರಿತ ಸಂಹಾರಿ
ಭಕ್ತರಾ ಸುರಧೇನು ತರುವೆ ಚಿಂತಾಮಣಿಯೆ
ಭಕ್ತರಾಧೀನವೆಂಬೊ ಬಿರದು ಅನುಗಾಲ
ಪೊತ್ತು ಮೆರೆವ ತಿರುಪತಿ ತಿಮ್ಮ ಯೇಳೋ || ಅ.ಪ ||
ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು
ಇಂಬಿನಲಿ ತಲೆದೋರಿ ಕಿರಣಗಳ ಹರಹಿದನು
ಅಂಬುಜ ವಿರೋಧಿಗಳೆಗುಂದಿದನು ತಾರ ನಿಕ –
ರಂಬುಗಳರುಹ ಮಾಸೆ ||
ಕುಂಭಿಣಿಯ ಮುಸುಕಿದ ಕತ್ತಲೆ ಪರಿದು ಪೋಗಿ
ಅಂಬುಜದಳಕೆ ಮರಿದುಂಬಿಗಳು ಎರಗಿದವು
ತಾಂಬ್ರಚೂಡವು ಧ್ವನಿಮಾಡಿ ಕೂಗಿತು ಸರಸಿ –
ಜಾಂಬಕನೆ ಮಂಚದಿಂದೇಳೊ || ೧ ||
ಉದಯ ಪರ್ವತಕೆ ರಥ ನೂಕಿದನು ಮಾರ್ತಾಂಡ
ಉದಧಿ ಅಲೆ ತಗ್ಗಿದುವು ಉರಗ ಪೆಡೆಯೆತ್ತಿದನು
ಗದಗದನೆ ನಡುಗಿ ಭಯದಲ್ಲಿ ದಾನವರು ಅಡ –
ಗಿದರು ದಶದಿಕ್ಕಿನೊಳಗೆ ||
ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ
ದದ್ಧಳ ಸರಿಗಮಪದನಿಸೆಂದೆನುತಲೀ
ವದರುತ್ತ ಕುಸುಮವರುಷ ವುದರಿಸಿ ತುತಿಸಿದರು
ಸದಮಲಾನಂದ ತಿಮ್ಮಾ || ೨ ||
ನಾರಿಯರು ಬಂದು ಅಂಗಳ ಬಳಿದು ಗಂಧದಾ
ಸಾರಣಿಯು ದಳಿದು ಮುತ್ತಿನ ರಂಗವಲ್ಲಿ ವಿ –
ಸ್ತಾರದಲಿ ಪಂಚವಣ್ಣಿಗೆಯಿಟ್ಟು ನಲಿದು ಹೊಸ
ದೋರಣ ಮಕರ ಕನ್ನಡಿ ||
ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲರು
ಪರಿ ಕಟ್ಟಿಗೆಕಾರರೆಲ್ಲ ವೊಪ್ಪುತಿರೆ ದಾರಕರು
ಸಾರಿದರು ಭಟ್ಟರು ಹೊಗಳಿದರು ಕಂ –
ಸಾರಿ ಕೋನೇರಿವಾಸ || ೩ ||
ನೃತ್ಯದವರು ಬಂದು ತತ್ಥಿಗಿಣಿ ತತ್ಥೈಯಾ
ತಿತ್ತಿರಿ ಮೃದಂಗ ಜತೆ ತಪ್ಪದಂತೆ ತಾಳ
ಬತ್ತೀಸರಾಗದಲಿ ಎತ್ತಿ ಧ್ವನಿ ತೋರುತ್ತ
ನರ್ತನದಿಂದಲಿ ಕುಣಿಯಲೂ ||
ಮಿತ್ರೆಯರು ಕೆಲಬರು ಮುತ್ತಿನಾರುತಿ ಪಿಡಿದು
ಮಿತ್ರಭಾವದಲಿ ನಿಮ್ಮಡಿಗಳಿಗೆ ಹರಿವಣಾ
ಎತ್ತುವೆವು ಎನುತತಿ ಹಾರೈಸಿ ನಿಂದು ನೋ –
ಡುತ್ತಾರೆ ಸರ್ವೇಶನೇ || ೪ ||
ದಂಡಿಗೆ ತಾಳ ಶಂಖ ತಂಬೂರಿ ಜಾಕಟೆ
ಕೊಂಡು ನಿನ್ನ ಪರಮ ಪ್ರೀತಿಸ್ಥ ದಾಸರು
ಹಿಂಡು ಹಿಂಡಾಗಿ ಸಮ್ಮುಖದಲ್ಲಿ ನಿಂದು ಬೊ –
ಮ್ಮಾಂಡ ಕಟಹ ಬಿಚ್ಚುವಂತೆ ||
ತಂಡ ತಂಡದ ಗೆಜ್ಜೆಕಟ್ಟಿ ಅಭಿನವ ತಿರುಹಿ
ಕೊಂಡಾಡಿದರು ಶಬ್ದ ಪ್ರತಿಶಬ್ದವಾಗುತಿರೆ ಭೂ –
ಮಂಡಲದೊಳಗೆ ಈ ಸೊಬಗು ಬಲ್ಲವರಾರು
ಕುಂಡಲೀ ಗಿರಿ ತಿರ್ಮಲಾ || ೫ ||
ಕಾದೋದಕ ವಿಮಲ ಕಸ್ತೂರಿ ಕಮ್ಮೆಣ್ಣೆ
ಸಾದು ಜವ್ವಾದಿ ಚಂದನ ಗಂಧ ದ್ರವ್ಯದಿ
ಆದರಿಸಿ ಪಿಡಿದ ದರ್ಪಣ ಹೇಮ ಗದ್ದುಗೆ
ಪಾದುಗೆ ಪಟ್ಟಿ ವಸನಾ ||
ಈ ಧರೆಯೊಳಗೆ ಯಿದ್ದ ಉಡಿಗೆ ತೊಡಿಗೆ ಕರ್ಪೂ –
ರಾದಿ ತಾಂಬೂಲ ನಿರ್ಮಳ ದಾದಿಯರು ಹಿಡಿದು
ಕಾದು ನಿಂದೈಧಾರೆ ಹೊನ್ನ ಬಾಗಿಲ ಮುಂದೆ
ಆದಿಹರಿ ಪರಮಪುರುಷಾ || ೬ ||
ಗೋತ್ರಾರಿ ಹವಿಧರ್ಮ ಪುಣ್ಯಜನ ವರುಣ ವೀತಿ –
ಹೋತ್ರ ಸಖ ಋಷೇಶ ಕೈಲಾಸಪತಿ ಸೂರ್ಯ
ಮಿತ್ರ ನಂದ ಸಹಿತರಾಗಿ ವಾಹನ ವೈದಿ
ಚಿತ್ರದಲಿ ಮುಖ್ಯರಾದ ||
ಮೈತ್ರಾವರುಣ ಜಾಮದಗ್ನಿ ಕಶ್ಯಪ ವಿಶ್ವಾ –
ಮಿತ್ರ ಭಾರದ್ವಾಜ ಸನಕಾದಿಗಳು ನಾರದ ಮೊದಲಾಗಿ
ಸ್ತೋತ್ರವನು ಮಾಡುತ್ತ ಸ್ವಾಮಿ ಗತಿಯೆಂದರು
ಧಾತ್ರೀಕಳತ್ರ ದೇವಾ || ೭ ||
ನಿಚ್ಚ ಏಳುವ ಸಮಯ ಮೀರಿತು ಇಂದೀಗ
ಎಚ್ಚರಿಕಿ ಪುಟ್ಟದೊ ಎಲೋ ದೇವಾ ಶ್ರೀದೇವಿ
ಮೆಚ್ಚುಗೊಳಿಸಿ ಬಿಗಿದು ರತಿಕೇಳಿ ಕ್ರೀಡಿಯಲಿ
ಮೆಚ್ಚಿಸಿದ ಮಹ ಸರಸವೊ ||
ನಿಚ್ಚಟ ಯಿದನು ನಿದ್ರೆ ತಿಳಿಯಲೊಲ್ಲದು
ಕುತ್ಸಿತನ ಸೊಲ್ಲು ಕರ್ನಕೆ ಬೀಳದಾಯಿತೊ
ಹೆಚ್ಚಿನಾ ಪದವಿ ಮತ್ತೇನು ಬಂದದು ಕಾಣೆ
ಸಚ್ಚಿದಾನಂದಾತ್ಮಕಾ || ೮ ||
ನಿದ್ರೆಗೆವೆ ಹಾಕದಿರು ನೀರೊಳಗೆ ನೀ ನಿರು –
ಪದ್ರ ಭೂಮಿಗೆ ಕಳಿ ಕಶ್ಯಪನ ಸುತನಳಿ ಸ –
ಮುದ್ರ ರಾಣಿಯ ಪಡಿ ರಾಯರಾಯರ ಕಡಿ
ಮುದ್ರೆ ಭೂಮಿಜೆಗೆ ಕಳಹೊ ||
ಅದ್ರಿಯನುದ್ಧರಿಸು ಮುಪ್ಪುರವ ಸಂಹರಿಸು ಕಲಿ –
ಛಿದ್ರವನು ಬಿಡಿಸು ಶ್ರುತಿ ಪೇಳುತಿದೆ
ಭದ್ರಮೂರುತಿ ವೆಂಕಟ ವಿಜಯವಿಟ್ಠಲ
ಕದ್ರುವೇಯನ ಹಾಸಿಕಿಂದೇಳೊ || ೯ ||
SrIvEMkaTESa supraBAta
rAga: BauLi, vArdhika ShaTTadi
Baktajana saMrakShaNA || pa ||
Baktajana saMrakSha Bavadurita saMhAri
BaktarA suradhEnu taruve ciMtAmaNiye
BaktarAdhInaveMbo biradu anugAla
pottu mereva tirupati timma yELO || a.pa ||
aMbaravu tAMbramayavAge garuDAgrajanu
iMbinali taledOri kiraNagaLa harahidanu
aMbuja virOdhigaLeguMdidanu tAra nika –
raMbugaLaruha mAse ||
kuMBiNiya musukida kattale paridu pOgi
aMbujadaLake mariduMbigaLu eragidavu
tAMbracUDavu dhvanimADi kUgitu sarasi –
jAMbakane maMcadiMdELo || 1 ||
udaya parvatake ratha nUkidanu mArtAMDa
udadhi ale taggiduvu uraga peDeyettidanu
gadagadane naDugi Bayadalli dAnavaru aDa –
gidaru daSadikkinoLage ||
tridaSarabbarisi Anaka duMduBI SaMKa
daddhaLa sarigamapadaniseMdenutalI
vadarutta kusumavaruSha vudarisi tutisidaru
sadamalAnaMda timmA || 2 ||
nAriyaru baMdu aMgaLa baLidu gaMdhadA
sAraNiyu daLidu muttina raMgavalli vi –
stAradali paMcavaNNigeyiTTu nalidu hosa
dOraNa makara kannaDi ||
dvAradali bigidarthiyali gollaru
pari kaTTigekArarella vopputire dArakaru
sAridaru BaTTaru hogaLidaru kaM –
sAri kOnErivAsa || 3 ||
nRutyadavaru baMdu tatthigiNi tatthaiyA
tittiri mRudaMga jate tappadaMte tALa
battIsarAgadali etti dhvani tOrutta
nartanadiMdali kuNiyalU ||
mitreyaru kelabaru muttinAruti piDidu
mitraBAvadali nimmaDigaLige harivaNA
ettuvevu enutati hAraisi niMdu nO –
DuttAre sarvESanE || 4 ||
daMDige tALa SaMKa taMbUri jAkaTe
koMDu ninna parama prItistha dAsaru
hiMDu hiMDAgi sammuKadalli niMdu bo –
mmAMDa kaTaha biccuvaMte ||
taMDa taMDada gejjekaTTi aBinava tiruhi
koMDADidaru Sabda pratiSabdavAgutire BU –
maMDaladoLage I sobagu ballavarAru
kuMDalI giri tirmalA || 5 ||
kAdOdaka vimala kastUri kammeNNe
sAdu javvAdi caMdana gaMdha dravyadi
Adarisi piDida darpaNa hEma gadduge
pAduge paTTi vasanA ||
I dhareyoLage yidda uDige toDige karpU –
rAdi tAMbUla nirmaLa dAdiyaru hiDidu
kAdu niMdaidhAre honna bAgila muMde
Adihari paramapuruShA || 6 ||
gOtrAri havidharma puNyajana varuNa vIti –
hOtra saKa RuShESa kailAsapati sUrya
mitra naMda sahitarAgi vAhana vaidi
citradali muKyarAda ||
maitrAvaruNa jAmadagni kaSyapa viSvA –
mitra BAradvAja sanakAdigaLu nArada modalAgi
stOtravanu mADutta svAmi gatiyeMdaru
dhAtrIkaLatra dEvA || 7 ||
nicca ELuva samaya mIritu iMdIga
eccariki puTTado elO dEvA SrIdEvi
meccugoLisi bigidu ratikELi krIDiyali
meccisida maha sarasavo ||
niccaTa yidanu nidre tiLiyalolladu
kutsitana sollu karnake bILadAyito
heccinA padavi mattEnu baMdadu kANe
saccidAnaMdAtmakA || 8 ||
nidregeve hAkadiru nIroLage nI niru –
padra BUmige kaLi kaSyapana sutanaLi sa –
mudra rANiya paDi rAyarAyara kaDi
mudre BUmijege kaLaho ||
adriyanuddharisu muppurava saMharisu kali –
Cidravanu biDisu Sruti pELutide
BadramUruti veMkaTa vijayaviTThala
kadruvEyana hAsikiMdELo || 9 ||
Leave a Reply