Composer : Shri Gopala dasaru
Scroll down for explanation.
ರಾಗ: ಶಂಕರಾಭರಣ , ಆದಿತಾಳ
ವಗತನದಲಿ ಸುಖವಿಲ್ಲಾ ವಲ್ಲೆಂದರೆ ನೀ ಬಿಡಿಯಲ್ಲಾ |
ಹಗರಣ ಜಗದೊಳು ಮಿಗಿಲಾಯಿತು ಪನ್ನಗನಗರ ನಿವಾಸಾ || ಪ ||
ಮೂರು ಬಣ್ಣಿಗಿಯ ಮನಿಗೆ ಮೂರು ಯರಡು ಭೂತಂಗಳು |
ಮೂರು ನಾಲ್ಕು ಪ್ರಕಾರಕ್ಕೆ ಮೂರಾರು ಛಿದ್ರಗಳು |
ಮೂರು ಅವಸ್ಥೆಯು ದಿನಕೆ ಮೂರಾನೂರಾರು ಹತ್ತರಲಿ |
ಮೂರು ವಿಧದ ಅನ್ನದಿಂದಾ ಮೂರು ತಾಪಕ್ಕಾಕಿ || ೧ ||
ಐದು ಮಂದಿ ಭಾವನವರು ಐವಾರು ಮೈದನಾರಾ ಕೂಡಿ |
ಐದು ಪರಿ ತಾನಾಗಿ ಮಾವ ಐದು ಕತ್ತಲೆ ಕೋಣೆ |
ಗೈದಿಸುವಂತೆ ಮಾಡುವರು ಐದು ತಂದು ಬೆಚ್ಚಿಸುವ |
ಐದನೆ ಬೊಕ್ಕಸದ ಮನೆಯಲೈಧಾದು ನಾ ಕಾಣೆ || ೨ ||
ಆರಾರು ಯರಡು ಸಾವಿರ ದಾರಿಯಲ್ಲಿ ಹೋಗಿ ಬರುವ |
ಆರು ಮೂರು ಮೂರು ಸಾವಿರದಾರುನೂರು ನಿತ್ಯದಿ |
ಆರು ನಾಲ್ಕು ಮಂದಿ ಹಿರಿಯಾ ಪಾರಪತ್ಯಗಾರರಿದಕೆ |
ಆರು ಯರಡು ವಿಧದಿ ಯನ್ನ ಗಾರು ಮಾಡುತ್ತಿಪ್ಪರು || ೩ ||
ಆರೆ ಹತ್ತರಾ ಮೂಲಾದಿ ಆರು ಮಂದಿ ಬಿಡದೆ ಎನ್ನ |
ಘೋರೈಸುವರು ಮರಳೊಂದು ವಿಚಾರ ಮಾಡಲೀಸರೊ |
ಆರು ಮೂರು ವಿಧದ ಸೋಪಸ್ಕಾರ ವಂದಾದರು ಯಿಲ್ಲ |
ಆರೆ ಇಬ್ಬರು ಸವತೆರ (ಹೋ)ಘೋರಾಟಕೆನಂಬೆ || ೪ ||
ಒಬ್ಬ ಬೆಳಕು ಮಾಡಲು ಮತ್ತೊಬ್ಬ ಕತ್ತಲೆಗೈದಿಸುವ |
ಒಬ್ಬ ಯರಡೂ ಮಾಡಲು ಮತ್ತೊಬ್ಬ ನಿಂತುನೋಳ್ಪ |
ವಬ್ಬ ಮೂವರ ವಳವಳಗೆ ಹಬ್ಬಿಕೊಂಡಿಪ್ಪುವಾರಂತೆ |
ಒಬ್ಬನ ಕಾಣದೆ ನಾ ತಬ್ಬಿಬ್ಬಿಗೊಳಗಾದೆ || ೫ ||
ಮನೆಯೊಳು ನಾಳಿನಾಗ್ರಾಸಕ್ಕನುಮಾನಾ ಸಂದೇಹ್ಯಸಲ್ಲಾ |
ರಿಣದಿಂದಾ ಕಡೆಹಾಯೋ ಮಾರ್ಗವನು ಲೇಶ ನಾ ಕಾಣೆ |
ಗುಣಿಸಲು ಈ ಕಾಳಾ ಪುರುಷಾನ ಬಂಧನದಿಂದ ನಾನಿನ್ನು |
ದಣಿದಿನೊ ಯಿನ್ನೆನ್ನ ನಿನ್ನ ಅಣುಗಾರೊಳಾಡಿಸೊ || ೬ ||
ಹಡದತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳು |
ವಡಹುಟ್ಟಿದಾರೈವಾರೆನ್ನ ಕಡೆಗಣ್ಣಿಂದೀಕ್ಷಿಸಾರೂ |
ಬಿಡದೆ ಹತ್ತಿಲಿ ಕಾದಿಪ್ಪ ನುಡಿಸಾನು ಹಿರಿಯಣ್ಣ ಅವನಾ |
ಮಡದಿ ತ್ಯಾಗಕೇನೆಂಬೆ ತನ್ನ ವಡವಿ ಲೇಶಾವೀಯಳೋ || ೭ ||
ಅತ್ತಿಅತ್ತಿಗಿಯು ಯನ್ನ ಸುತ್ತ ಮುತ್ತ ಕಾದು ಕಟ್ಟಿ |
ಯತ್ತ ತೋರಾರು ನಿನ್ನತ್ತ ಬರಲೀಸಾರು |
ಹೊತ್ತಿಗೆ ಬಂದೊದಗಿ ನೃಪನಾ ಭೃತ್ಯರು ಯಳದು ವೈವಾಗಾ |
ಹೆತ್ತಯ್ಯಾ ನೀ ಸಲಹಾದಿರಲೂ ಮತ್ತಾರು ಗತಿಪೇಳೋ || ೮ ||
ನಿನ್ನ ಹೊಂದಿಯಿಷ್ಟು ಭವಣಿಯನ್ನು ನಾನು ಬಡಲು ಕಂಡೂ |
ನಿನ್ನ ದೂರಿ ನಗುವಾರು ನಾ ಯಿನ್ನು ತಾಳಲಾರೆ |
ಘನ್ನ ಮಹಿಮಾ ಸೌಭಾಗ್ಯಸಂಪನ್ನ ಗೋಪಾಲವಿಠ್ಠಲಾ |
ಬಿನ್ನಪವ ಚಿತ್ತೈಸಿ ಮನ್ನಿಸಯ್ಯಾ ಮಾಧವಾ || ೯ ||
rAga: SaMkarABaraNa , AditALa
vagatanadali suKavillA valleMdare nI biDiyallA |
hagaraNa jagadoLu migilAyitu pannaganagara nivAsA || pa ||
mUru baNNigiya manige mUru yaraDu BUtaMgaLu |
mUru nAlku prakArakke mUrAru CidragaLu |
mUru avastheyu dinake mUrAnUrAru hattarali |
mUru vidhada annadiMdA mUru tApakkAki || 1 ||
aidu maMdi BAvanavaru aivAru maidanArA kUDi |
aidu pari tAnAgi mAva aidu kattale kONe |
gaidisuvaMte mADuvaru aidu taMdu beccisuva |
aidane bokkasada maneyalaidhAdu nA kANe || 2 ||
ArAru yaraDu sAvira dAriyalli hOgi baruva |
Aru mUru mUru sAviradArunUru nityadi |
Aru nAlku maMdi hiriyA pArapatyagAraridake |
Aru yaraDu vidhadi yanna gAru mADuttipparu || 3 ||
Are hattarA mUlAdi Aru maMdi biDade enna |
GOraisuvaru maraLoMdu vicAra mADalIsaro |
Aru mUru vidhada sOpaskAra vaMdAdaru yilla |
Are ibbaru savatera (hO)GOrATakenaMbe || 4 ||
obba beLaku mADalu mattobba kattalegaidisuva |
obba yaraDU mADalu mattobba niMtunOLpa |
vabba mUvara vaLavaLage habbikoMDippuvAraMte |
obbana kANade nA tabbibbigoLagAde || 5 ||
maneyoLu nALinAgrAsakkanumAnA saMdEhyasallA |
riNadiMdA kaDehAyO mArgavanu lESa nA kANe |
guNisalu I kALA puruShAna baMdhanadiMda nAninnu |
daNidino yinnenna ninna aNugAroLADiso || 6 ||
haDadatAyi mAyadi hiDidu baduku mADisuvaLu |
vaDahuTTidAraivArenna kaDegaNNiMdIkShisArU |
biDade hattili kAdippa nuDisAnu hiriyaNNa avanA |
maDadi tyAgakEneMbe tanna vaDavi lESAvIyaLO || 7 ||
atti attigiyu yanna sutta mutta kAdu kaTTi |
yatta tOrAru ninnatta baralIsAru |
hottige baMdodagi nRupanA BRutyaru yaLadu vaivAgA |
hettayyA nI salahAdiralU mattAru gatipELO || 8 ||
ninna hoMdiyiShTu BavaNiyannu nAnu baDalu kaMDU |
ninna dUri naguvAru nA yinnu tALalAre |
Ganna mahimA sauBAgyasaMpanna gOpAlaviThThalA |
binnapava cittaisi mannisayyA mAdhavA || 9 ||
ವಿವರಣೆ:
ವಗತನದಲಿ ಸುಖವಿಲ್ಲಾ ವಲ್ಲೆಂದರೆ ನೀ ಬಿಡಿಯಲ್ಲಾ |
ಹಗರಣ ಜಗದೊಳು ಮಿಗಿಲಾಯಿತು ಪನ್ನಗನಗರ ನಿವಾಸಾ || ಪ ||
ವಿವರಣೆ : ಈ ಸಂಸಾರದಲ್ಲಿ ಲೇಶಮಾತ್ರವೂ ಸುಖವಿಲ್ಲ. ಇದರಲ್ಲಿದ್ದು ತೊಳಲುವುದು ನನ್ನಿಂದಾಗದು ಎಂದರೆ ಪ್ರಾರಬ್ಧಕರ್ಮವನ್ನು ಅನುಭವಿಸಿಯೇ ತೀರಬೇಕೆಂಬುದು ನಿನ್ನ ನಿಯಮವಾಗಿದೆ. ಈ ಪ್ರಪಂಚದಲ್ಲಿ ಕಷ್ಟವು ಅತಿಶಯವಾಗಿದೆ. ಶೇಷಾಚಲವಾಸಿಯಾದ ಅರ್ಥಾತ್ ವೈಕುಂಠನಿಲಯನಾದ ಶ್ರೀ ಶ್ರೀನಿವಾಸನೇ ನನ್ನನ್ನು ( ಎಂದರೆ ಜೀವವರ್ಗವನ್ನು ) ಕರುಣದಿಂದ ಕಾಪಾಡು .
ಮೂರು ಬಣ್ಣಿಗಿಯ ಮನಿಗೆ ಮೂರು ಯರಡು ಭೂತಂಗಳು |
ಮೂರು ನಾಲ್ಕು ಪ್ರಕಾರಕ್ಕೆ ಮೂರಾರು ಛಿದ್ರಗಳು |
ಮೂರು ಅವಸ್ಥೆಯು ದಿನಕೆ ಮೂರಾನೂರಾರು ಹತ್ತರಲಿ |
ಮೂರು ವಿಧದ ಅನ್ನದಿಂದಾ ಮೂರು ತಾಪಕ್ಕಾಕಿ || ೧ ||
ವಿವರಣೆ : ಸಂಸಾರ ಮಾಡಲು ಸಾಧನವಾಗಿ ಮುಖ್ಯವಾಗಿ ಶರೀರವಿರಬೇಕು.ಆ ಶರೀರವು ಹೇಗೆ ಇದೆ ಎಂದರೆ , ಮೂರು ಬಣ್ಣಿಗೆಯ ಮನೆ = ಬಿಳುಪು (ಸತ್ವ) , ಕೆಂಪು (ರಜ) , ಕಪ್ಪು (ತಮ) . ಈ ಮೂರು ಗುಣಗಳಿಂದ ಕೂಡಿ , ಮೂರು ಎರಡು ಭೂತಂಗಳು = ೩ + ೨ = ೫ , ಪೃಥ್ವಿ , ಅಪ್ಪು , ತೇಜ , ವಾಯು , ಆಕಾಶ ವೆಂಬ ಪಂಚಭೂತಗಳಿಂದ ನಿರ್ಮಿಸಲ್ಪಟ್ಟಿದೆ. ಈ ದೇಹವೆಂಬ ಪಟ್ಟಣಕ್ಕೆ , ಮೂರು ನಾಲ್ಕು ಪ್ರಾಕಾರಕ್ಕೆ = ೩ + ೪ = ೭ , ತ್ವಕ್ಕು , ಚರ್ಮ , ಮಾಂಸ , ರುಧಿರ , ಮೇದಸ್ಸು , ಮಜ್ಜ , ಅಸ್ಥಿ ಎಂಬ ಏಳು ವಿಧ ಧಾತುಗಳೆಂಬ ಪ್ರಾಕಾರಗಳಿವೆ . ಈ ಪಟ್ಟಣದಲ್ಲಿ ಬಾಗಿಲುಗಳಂತೆ , ಮೂರಾರು ಛಿದ್ರಗಳು = ೩ + ೬ = ೯ ಕಿಂಡಿಗಳಿವೆ . ಅವು ಎರಡು ಕಣ್ಣುಗಳು , ಎರಡು ಮೂಗಿನ ಹೊಳ್ಳೆಗಳು , ಒಂದು ಬಾಯಿ , ಎರಡು ಕಿವಿಗಳು , ಒಂದು ಗುದ , ಒಂದು ಉಪಸ್ಥಾ , ಹೀಗೆ ಒಂಭತ್ತು ಬಾಗಿಲುಗಳು . ಮೂರು ಅವಸ್ಥೆಯು ದಿನಕೆ = ಈ ದೇಹಕ್ಕೆ ದಿನ ಒಂದಕ್ಕೆ ಮೂರು ಅವಸ್ಥೆಗಳು , ಜಾಗ್ರತ ಸ್ವಪ್ನ ಸುಷುಪ್ತಿ ಎಂಬಿವು ನಡೆಯುತ್ತಿರುತ್ತವೆ. ಮೂರು ನೂರಾರು ಹತ್ತರಲಿ = ಹೀಗೆ ಮುನ್ನೂರು ಅರವತ್ತು ದಿವಸಗಳಲ್ಲಿ ಅರ್ಥಾತ್ ಪ್ರತಿದಿನವೂ , ಮೂರು ವಿಧದ ಅನ್ನದಿಂದಾ = ಮೂರುವಿಧ ಅನ್ನವನ್ನು ತಿನ್ನಬೇಕು ಎಂದರೆ , ಸಂಚಿತ , ಆಗಾಮಿ , ಪ್ರಾರಬ್ಧವೆಂಬ ಮೂರು ವಿಧ ಕರ್ಮಗಳ ಫಲವನ್ನು ಅನುಭವಿಸಬೇಕು. ಮೂರು ತಾಪಕ್ಕಾಕಿ = ಹೀಗೆ ಅನುಭವಿಸುವುದರಲ್ಲಿ ಮೂರು ತಾಪಗಳು ನನ್ನನ್ನು ಬಾಧಿಸುತ್ತವೆ. ಮೂರು ತಾಪಗಳು – ಆಧ್ಯಾತ್ಮಿಕ , ಆದಿದೈವಿಕ , ಆದಿಭೌತಿಕ ( ತನ್ನಿಂದ , ಪರರಿಂದ , ದೈವದಿಂದ ) .
ಈ ತಾಪಗಳನ್ನು ಸಹಿಸಲಾರೆನು . ಸ್ವಾಮಿಯೇ ಕಾಪಾಡು .
ಐದು ಮಂದಿ ಭಾವನವರು ಐವಾರು ಮೈದನಾರಾ ಕೂಡಿ |
ಐದು ಪರಿ ತಾನಾಗಿ ಮಾವ ಐದು ಕತ್ತಲೆ ಕೋಣೆ |
ಗೈದಿಸುವಂತೆ ಮಾಡುವರು ಐದು ತಂದು ಬೆಚ್ಚಿಸುವ |
ಐದನೆ ಬೊಕ್ಕಸದ ಮನೆಯಲೈಧಾದು ನಾ ಕಾಣೆ || ೨ ||
ವಿವರಣೆ : ನನ್ನ ಈ ಸಂಸಾರದಲ್ಲಿ , ಐದು ಮಂದಿ ಭಾವನವರು = ಶ್ರವಣ , ನಯನ , ಘ್ರಾಣ , ತ್ವಕ್ಕು , ರಸನ ಎಂಬ ಪಂಚಜ್ಞಾನೇಂದ್ರಿಯಗಳು ( ಜ್ಞಾನೇಂದ್ರಿಯಗಳು ಶ್ರೇಷ್ಠವಾದುವುಗಳಾದ್ದರಿಂದ ಭಾವನವರು ಎಂದರು ) , ಐವರು ಮೈದುನರಾ ಕೂಡಿ = ವಾಕು , ಪಾಣಿ , ಪಾದ , ವಾಯು , ಉಪಸ್ಥಾ ಎಂಬ ಪಂಚ ಕರ್ಮೇಂದ್ರಿಯಗಳು . ಐದು ಪರಿ ತಾನಾಗಿ ಮಾವ = ಮನಸ್ಸು , ಬುದ್ಧಿ , ಚಿತ್ತ , ಅಹಂಕಾರ , ಚೇತನವೆಂಬ ಪಂಚವೃತ್ತಿಯಿಂದ ಕೂಡಿರುವ ಮನಸ್ಸೆಂಬ ಮಾವನು , ಇವರೆಲ್ಲರೂ ಸೇರಿ ನನ್ನನ್ನು ಪರಮಪುರುಷನಾದ ನಿನ್ನ ಬಳಿ ಸೇರಿಸಲೀಸದೆ , ಐದು ಕತ್ತಲೆ ಕೋಣೆಗೆ ಐದಿಸುವಂತೆ ಮಾಡುವರು = ತಾಮಿಸ್ರ , ಅಂಧತಾಮಿಸ್ರ , ಮೋಹ , ಮಹಾ ಮೋಹ , ನಿಧನವೆಂಬ ಆವಿದ್ಯಾ ಪಂಚಕದ ಕತ್ತಲೆ ಕೋಣೆಗೆ , ಬಲವಂತದಿಂದ ಒಯ್ಯುತ್ತಾರೆ. ಹೋಗುವುದಿಲ್ಲವೆಂದು ಮುಷ್ಕರ ಮಾಡಿದರೆ , ಐದು ತಂದು ಬೆಚ್ಚಿಸುವ = ಶಬ್ದ , ಸ್ಪರ್ಷ , ರಸ , ರೂಪ , ಗಂಧವೆಂಬ (ತನ್ಮಾತ್ರೆಗಳೆಂಬ) ಉರಿಯುವ ಕೊಳ್ಳಿಯನ್ನು ತಂದು ಬೆಚ್ಚಿಸುವರು (ಎಂದರೆ ವಿಷಯಗಳಲ್ಲಿ ಮಗ್ನನನ್ನಾಗಿ ಮಾಡಿ ಮುಂದಿನ ಗತಿಯೇನೆಂಬ ದಿಗಿಲನ್ನು ಹುಟ್ಟಿಸುತ್ತಾರೆ.) ಸುಖವಾಗಿರೋಣವೆಂದರೆ ಅದಕ್ಕೆ ಸಾಧಕವಾದ , ಐದನೆ ಬೊಕ್ಕಸದ ಮನೆಯಲೈಧಾದು ನಾ ಕಾಣೆ = ಬೊಕ್ಕಸದ ಮನೆಯನ್ನು ಹೋಗಲೀಯರು . ಬೊಕ್ಕಸಗಳು ಐದು – ಅನ್ನಮಯ , ಪ್ರಾಣಮಯ , ಮನೋಮಯ , ವಿಜ್ಞಾನಮಯ , ಆನಂದಮಯವೆಂಬ ಐದು ಕೋಶಗಳು . ಅವುಗಳಲ್ಲಿ ಕಡೆಯದಾದ ಆನಂದವೆಂಬುದು ಎಲ್ಲಿದೆಯೋ ನಾನು ಕಾಣೆ. ಪರಮಾತ್ಮನೇ ಕಾಪಾಡು .
ಆರಾರು ಯರಡು ಸಾವಿರ ದಾರಿಯಲ್ಲಿ ಹೋಗಿ ಬರುವ |
ಆರು ಮೂರು ಮೂರು ಸಾವಿರದಾರುನೂರು ನಿತ್ಯದಿ |
ಆರು ನಾಲ್ಕು ಮಂದಿ ಹಿರಿಯಾ ಪಾರಪತ್ಯಗಾರರಿದಕೆ |
ಆರು ಯರಡು ವಿಧದಿ ಯನ್ನ ಗಾರು ಮಾಡುತ್ತಿಪ್ಪರು || ೩ ||
ವಿವರಣೆ : ಈ ದೇಹವೆಂಬ ಪಟ್ಟಣಕ್ಕೆ , ಆರಾರು ಎರಡು ಸಾವಿರ ದಾರಿಯಲ್ಲಿ = ೬ ೬ = ೩೬ , ೩೬ ೨ = ೭೨ , ಹೀಗೆ ೭೨ ೦೦೦ ನಾಡಿಗಳೆಂಬ ದಾರಿಯಲ್ಲಿ , ಹೋಗಿ ಬರುವ = ವಾಯುದೇವರು ಹೋಗಿಬರುತ್ತಾ ಎಂದರೆ ಉಚ್ಛ್ವಾಸ ನಿಶ್ವಾಸಗಳ ಮೂಲಕ , ನಿತ್ಯದಿ = ದಿನ ಒಂದಕ್ಕೆ , ಆರು ಮೂರು ಮೂರು ಸಾವಿರದಾರುನೂರು = ೬ ೩ = ೧೮ , ೧೮ + ೩ = ೨೧ , ಹೀಗೆ ೨೧೬೦೦ ಶ್ವಾಸಜಪಗಳನ್ನು ಮಾಡುತ್ತಿರುತ್ತಾರೆ. ಅದರಿಂದ ನನ್ನ ಮುಂದಿನ ಗತಿಗೆ ಸಾಧನವಾಗುವಂತೆ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಹಾಗಲ್ಲದೆ , ಈ ಮುಖ್ಯಪ್ರಾಣದೇವರಿಂದ ಆಜ್ಞಪ್ತರಾದ , ಆರು ನಾಲ್ಕು ಮಂದಿ = ೬ ೪ = ೨೪ ಮಂದಿ , ಹಿರಿಯ ಪಾರಪತ್ಯಗಾರರಿದಕೆ = ೫ ಭೂತಗಳು ( ಪೃಥ್ವಿ ,ಅಪ್ಪು , ತೇಜ , ವಾಯು , ಆಕಾಶ ) , ೫ ತನ್ಮಾತ್ರೆಗಳು ( ಗಂಧ , ರಸ , ರೂಪ , ಸ್ಪರ್ಶ , ಶಬ್ದ ) , ೫ ಕರ್ಮೇಂದ್ರಿಯಗಳು (ವಾಕ್ಕು , ಪಾಣಿ , ಪಾದ , ವಾಯು , ಉಪಸ್ಥಾ ) , ೫ ಜ್ಞಾನೇಂದ್ರಿಯಗಳು ( ಶ್ರವಣ , ನಯನ , ಘ್ರಾಣ , ರಸನ , ತ್ವಕ್ಕು ) , ೧ ಮನಸ್ಸು , ೧ ಬುದ್ಧಿ , ೧ ಅಹಂಕಾರ , ೧ ಚಿತ್ತ. ಹೀಗೆ ೨೪ ಮಂದಿ ( ತತ್ವಗಳು – ಜಡಗಳು , ಇವುಗಳಿಗೆ ಅಭಿಮಾನಿ ದೇವತೆಗಳು ) ಸೇರಿ , ಆರು ಎರಡು ವಿಧದಿ = ೬ + ೨ = ೮ ವಿಧವಾದ ಮದದಿಂದ , ಎಂದರೆ , ಅನ್ನಮದ , ಅರ್ಥಮದ , ಅಹಂಕಾರಮದ , ವೈಭವಮದ , ಸಾಹಸಮದ , ಧಾತ್ರಿವಶಮದ , ಪ್ರಾಯಮದ , ಮೋಹಮದ . ಇಂತು ತತ್ವಾಭಿಮಾನಿಗಳು , ಎನ್ನ ಗಾರು ಮಾಡುತ್ತಿಪ್ಪರು = ನನಗೆ ಈ ಎಂಟು ಮದಗಳನ್ನು ಹಚ್ಚಿ ಹಾಳು ಮಾಡುತ್ತಾರೆ .
ಆದುದರಿಂದ ನೀನು ಮೇಲ್ವಿಚಾರಣೆಯನ್ನು ತೆಗೆದುಕೊಂಡು , ಅದರಿಂದ ನನಗೆ ಸತ್ಸಾಧನೆಯಾಗುವಂತೆ ಮಾಡಬೇಕೆಂದು ಬೇಡುತ್ತೇನೆ.
ಆರೆ ಹತ್ತರಾ ಮೂಲಾದಿ ಆರು ಮಂದಿ ಬಿಡದೆ ಎನ್ನ |
ಘೋರೈಸುವರು ಮರಳೊಂದು ವಿಚಾರ ಮಾಡಲೀಸರೊ |
ಆರು ಮೂರು ವಿಧದ ಸೋಪಸ್ಕಾರ ವಂದಾದರು ಯಿಲ್ಲ |
ಆರೆ ಇಬ್ಬರು ಸವತೆರ (ಹೋ)ಘೋರಾಟಕೆನಂಬೆ || ೪ ||
ವಿವರಣೆ : ಆರು ಹತ್ತರ ಮೂಲಾದಿ = ೬ + ೧೦ = ೧೬ ಕಳೆಗಳುಳ್ಳ ಲಿಂಗ ಶರೀರವನ್ನೇ ಮೂಲಾಧಾರ ಮಾಡಿಕೊಂಡು , ೧೬ ಕಳೆಗಳು – ಪಂಚಭೂತಗಳು , ಪಂಚತನ್ಮಾತ್ರೆಗಳು , ಪಂಚಜ್ಞಾನೇಂದ್ರಿಯಗಳು ಮತ್ತು ಮನಸ್ಸು . ಈ ೧೬ ಕಳೆಗಳುಳ್ಳದ್ದು ಲಿಂಗ ಶರೀರವು . ಇದು ಜೀವನ ಸ್ವರೂಪ ಶರೀರಕ್ಕೆ ಹೊಟ್ಟಿನಂತೆ ಸುತ್ತಲೂ ಆವರಿಸಿಕೊಂಡಿರುತ್ತದೆ. ಆರು ಮಂದಿ ಬಿಡದೆ ಎನ್ನ = ಅರಿಷಡ್ವರ್ಗಗಳು ( ಕಾಮ , ಕ್ರೋಧ , ಲೋಭ , ಮೋಹ , ಮದ , ಮತ್ಸರ ) ಮರಳೊಂದು ವಿಚಾರ ಮಾಡಲೀಸರೊ = ಮತ್ತೊಂದು ವಿಚಾರ ಮಾಡದಂತೆ , ಘೋರೈಸುವರು = ಸದಾ ಕಾಡುತ್ತಾರೆ. ಆರು ಮೂರು ವಿಧದ ಸೋಪಸ್ಕರ ವಂದಾದರು ಯಿಲ್ಲ = ೬ + ೩ = ೯ , ಶ್ರವಣ , ಕೀರ್ತನ , ಸ್ಮರಣ , ಪಾದಸೇವನ , ಅರ್ಚನ , ವಂದನ , ದಾಸ್ಯ , ಸಖ್ಯ , ಆತ್ಮನಿವೇದನ ವೆಂಬ ನವವಿಧಭಕ್ತಿಗಳೆಂಬ ಸೋಪಸ್ಕರ ಎಂದರೆ ಮುಕ್ತಿಮಾರ್ಗದಲ್ಲಿ ಪಾಥೇಯ ಸ್ವರೂಪವಾದ ಇವುಗಳಲ್ಲಿ ಒಂದಾದರೂ ಇಲ್ಲ. ಆರೆ ಇಬ್ಬರು ಸವತೆರ ಹೋರಾಟಕ್ಕೇನೆಂಬೆ = ಹೇಗಾದರೂ ಸಾಧನ ಮಾಡಿಕೊಳ್ಳೋಣವೆಂದರೆ , ಆಶಾ – ಲಜ್ಜಾ ಎಂಬ ಇಬ್ಬರು ಸವತಿಯರು ಕಲಹವಾಡುತ್ತಾ ನನ್ನನ್ನು ಬಾಧಿಸುತ್ತಾರೆ . ಅಂದರೆ , ಆಸೆಯು ಅಪೇಕ್ಷಿಸಿ ಮುಂದಕ್ಕೆ ತಳ್ಳಿದರೆ , ಲಜ್ಜೆಯು ಹಿಂದಕ್ಕೆ ಎಳೆಯುತ್ತದೆ. ಇವರಿಬ್ಬರ ಹಿಡಿತಕ್ಕೆ ಸಿಕ್ಕಿ ಯಾವಾಗ ಯಾರ ಬಲವು ಹೆಚ್ಚಾಗುತ್ತದೆಯೋ , ಆಗ ಆ ರೀತಿ ನಡೆದು ಅದರಿಂದಾಖುವ ಕಷ್ಟಗಳಿಗೆ ನಾನು ಗುರಿಯಾಗಬೇಕಾಗಿದೆ.
ಪರಮಾತ್ಮಾ ಇದನ್ನು ನಾನು ಸಹಿಸಲಾರೆನು , ಕಾಪಾಡು.
ಒಬ್ಬ ಬೆಳಕು ಮಾಡಲು ಮತ್ತೊಬ್ಬ ಕತ್ತಲೆಗೈದಿಸುವ |
ಒಬ್ಬ ಯರಡೂ ಮಾಡಲು ಮತ್ತೊಬ್ಬ ನಿಂತುನೋಳ್ಪ |
ಒಬ್ಬ ಮೂವರ ವಳವಳಗೆ ಹಬ್ಬಿಕೊಂಡಿಪ್ಪುವಾರಂತೆ |
ಒಬ್ಬನ ಕಾಣದೆ ನಾ ತಬ್ಬಿಬ್ಬಿಗೊಳಗಾದೆ || ೫ ||
ವಿವರಣೆ : ಈ ದೇಹದಲ್ಲಿ ಜೀವರ ಸಾಧನೆಗಾಗಿ ವಿಶ್ವಾದಿ ರೂಪಗಳಿಂದ ಪರಮಾತ್ಭನು ಮಾಡುವ ವ್ಯಾಪಾರವನ್ನು ವರ್ಣಿಸುತ್ತಾರೆ. ಒಬ್ಬ ಬೆಳಕು ಮಾಡಲು = ವಿಶ್ವನಾಮಕ ಪರಮಾತ್ಮನು ದಕ್ಷಿಣಾಕ್ಷಿ ಸ್ಥಿತನಾಗಿ ಬೆಳಕೆಂಬ ಜಾಗ್ರದಾವಸ್ಥೆಗೆ ಪ್ರೇರಕನಾಗಿದ್ದಾನೆ. ಮತ್ತೊಬ್ಬ ಕತ್ತಲೆಗೈದಿಸುವ = ಪ್ರಾಜ್ಞನಾಮಕ ಪರಮಾತ್ಮನು ಹೃದಯದಲ್ಲಿದ್ದು , ಜೀವನಿಗೆ ಕತ್ತಲೆಯೆಂಬ ಗಾಢನಿದ್ರೆಗೆ ಪ್ರೇರಕನಾಗಿದ್ದಾನೆ. ಒಬ್ಬ ಯರಡೂ ಮಾಡಲು = ತೈಜಸನಾಮಕ ಪರಮಾತ್ಮನು ಕಂಠ ಪ್ರದೇಶದಲ್ಲಿದ್ದು , ಎಚ್ಚರಿಕೆಯೂ ಅಲ್ಲದ ನಿದ್ರೆಯೂ ಅಲ್ಲದ ಸ್ವಪ್ನಾವಸ್ಥೆಗೆ ಪ್ರೇರಕನಾಗಿದ್ದಾನೆ. ಮತ್ತೊಬ್ಬ ನಿಂತು ನೋಳ್ಪ = ತುರ್ಯನಾಮಕ ಪರಮಾತ್ಮನು ಶಿರಸ್ಸಿನ ಹನ್ನೆರಡು ಅಂಗುಲದ ಮೇಲೆ ಇದ್ದು ಆನಂದವನ್ನುಂಟುಮಾಡುತ್ತಾನೆ. ಆತನಿಗೆ ವಾಸುದೇವನೆಂದು ಹೆಸರು. ಆತನೇ ಶಿರಸ್ಸಿನ ಮೇಲೆ ಅಮೃತವೃಷ್ಟಿಯನ್ನು ಕರೆಯುವವನು. ಒಬ್ಬ ಮೂವರ ವಳವಳಗೆ ಹಬ್ಬಿಕೊಂಡಿಪ್ಪುವಾರಂತೆ = ಒಬ್ಬನಾದ ಪರಮಾತ್ಮನು ಮೂವರಾದ ಆತ್ಮ , ಅಂತರಾತ್ಮ , ಜ್ಞಾನಾತ್ಮ ರೂಪಗಳಲ್ಲಿ ಒಳಗೊಳಗೆ ಹಬ್ಬಿಕೊಂಡಿರುವನು ಎಂದರೆ ವ್ಯಾಪಿಸಿರುತ್ತಾನೆ. ಒಬ್ಬನ ಕಾಣದೆ = ಹೀಗೆ ವಿಶ್ವ , ತೈಜಸ , ಪ್ರಾಜ್ಞ , ತುರ್ಯ , ಆತ್ಮ , ಅಂತರಾತ್ಮ , ಜ್ಞಾನಾತ್ಮ , ಪರಮಾತ್ಮನೆಂಬ ಎಂಟು ರೂಪಗಳಿಂದ , ನೀನು ನಮ್ಮೊಳಗೆ ಮಾಡುವ ವ್ಯಾಪಾರಗಳ ಬಗೆಯರಿಯದೆ , ನಾ ತಬ್ಬಿಬ್ಬಿಗೊಳಗಾದೆ = ನಾನು ದಿಕ್ಕು ತೋರದೆ ಹೋದೆ. ಆದ್ದರಿಂದ , ದಯಾಬ್ಧಿಯೇ , ನಿನ್ನ ಶರಣರ ದ್ವಾರಾ ಶ್ರುತಿಸ್ಮೃತಿಗಳಲ್ಲಿ ಉಕ್ತವಾದ ನಿನ್ನ ಮಹಾತ್ಮೆಗಳನ್ನು ನನ್ನ ಮನಸ್ಸಿಗೆ ಹಿಡಿಯುವಂತೆ ಬೋಧಿಸಿ , ಈ ಸಂಸಾರದಿಂದ ಪಾರುಗಾಣಿಸು ಎಂದು ಬೇಡುತ್ತೇನೆ.
ಮನೆಯೊಳು ನಾಳಿನಾಗ್ರಾಸಕ್ಕನುಮಾನಾ ಸಂದೇಹ್ಯಸಲ್ಲಾ |
ರಿಣದಿಂದಾ ಕಡೆಹಾಯೋ ಮಾರ್ಗವನು ಲೇಶ ನಾ ಕಾಣೆ |
ಗುಣಿಸಲು ಈ ಕಾಳಾ ಪುರುಷಾನ ಬಂಧನದಿಂದ ನಾನಿಷ್ಟು |
ದಣಿದಿನೊ ಯಿನ್ನೆನ್ನ ನಿನ್ನ ಅಣುಗಾರೊಳಾಡಿಸೊ || ೬ ||
ವಿವರಣೆ : ಮನೆಯೊಳು ನಾಳಿನ ಗ್ರಾಸಕ್ಕೆ ಅನುಮಾನಾ ಸಂದೇಹ್ಯಸಲ್ಲಾ = ಈ ದೇಹದಿಂದ ಮುಂದಣ ಜನ್ಮಕ್ಕೆ ಗ್ರಾಸ ಎಂದರೆ ಸಾಧನೆ ಲೇಶವಾದರೂ ಇಲ್ಲ . ಇದಕ್ಕೆ ಸಂಶಯವಿಲ್ಲ. ಋಣದಿಂದ ಕಡೆಹಾಯೊ ಮಾರ್ಗವನು ಲೇಶ ನಾ ಕಾಣೆ = ಋಣ – ಸಾಲ , ಇದು ಮೂರು ಬಗೆಯಾದದ್ದು – ದೇವಋಣ , ಋಷಿಋಣ , ಪಿತೃಋಣವೆಂದು. ಯಜ್ಞಾದಿಗಳಿಂದ ದೇವಋಣವೂ , ಅಧ್ಯಯನಾದಿಗಳಿಂದ ಋಷಿಋಣವೂ , ಸತ್ಸಂತಾನಾಭಿವೃದ್ಧಿಯಿಂದ ಪಿತೃಋಣವೂ ಪರಿಹಾರವಾಗುತ್ತದೆ. ಗುಣಿಸಲು = ಇದು ಜನ್ಮಜನ್ಮಕ್ಕೂ ನಿಂತು ಅಪಾರವಾಗಿದೆ. ಈ ಋಣದಿಂದ ಪಾರಾಗುವ ಬಗೆಯು ನನಗೆ ತೋರದಾಗಿದೆ. ಕಾಳಾಪುರುಷನ ಬಂಧನದಿಂದ ನಾನಿಷ್ಟು ದಣಿದಿನೊ = ಕಲಿಪುರುಷನ ಬಂಧನದಿಂದ ನಾನಿಷ್ಟು ದಣಿದಿರುವೆನು . ಇದನ್ನು ನೀಗಿಸಬೇಕಾಗಿ , ನಿನ್ನ ಅಣುಗರೊಳು ಆಡಿಸು = ನಿನ್ನನ್ನೇ ಅನುಸರಿಸಿ ನಡೆವ ಭಕ್ತರಲ್ಲಿ , ಸಹವಾಸವನ್ನು ಕೊಟ್ಟು ಉದ್ಧಾರ ಮಾಡು.
ಹಡದತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳು |
ವಡಹುಟ್ಟಿದಾರೈವಾರೆನ್ನ ಕಡೆಗಣ್ಣಿಂದೀಕ್ಷಿಸಾರೂ |
ಬಿಡದೆ ಹತ್ತಿಲಿ ಕಾದಿಪ್ಪ ನುಡಿಸಾನು ಹಿರಿಯಣ್ಣ ಅವನಾ |
ಮಡದಿ ತ್ಯಾಗಕೇನೆಂಬೆ ತನ್ನ ವಡವಿ ಲೇಶಾವೀಯಳೋ || ೭ ||
ವಿವರಣೆ : ಹಡದತಾಯಿ = ಮೂಲ ಪ್ರಕೃತಿಯಾದ ಮಾಯಾದೇವಿಯು ಈ ಜೀವನನ್ನು ಸಂಸಾರದಲ್ಲಿ ಪ್ರವೃತ್ತನನ್ನಾಗಿ ಮಾಡುತ್ತಾಳೆ . ಹಡೆದ ತಾಯಿ ಎಂಬುವ ಮಾತು ಮುಂದಕ್ಕೆ ತನಗೆ ಅಪಕೀರ್ತಿ ತಂದೀತೆಂದು ಸಕಲ ಅನುಕೂಲ ಕೊಟ್ಟು , ಹಿಡಿದು ಬದುಕು ಮಾಡಿಸುವಳು = ಹೊಡೆದು ಬಡಿದು ಬುದ್ಧಿ ಕಲಿಸಿ ಸಾಧನೆಯೆಂಬ ಬದುಕು ಮಾಡಿಸುತ್ತಾಳೆ. ಇದು ಸತ್ಸಾಧನೆಗಾದರೆ ಬಹಳ ಸಂತೋಷ. ಹಾಗಲ್ಲದೆ , ಮುದ್ದಿನಿಂದ ಸಾಕಿ ವಿಷಯೋಪಭೋಗಗಳಲ್ಲೇ ಮಗ್ನನನ್ನಾಗಿ ಮಾಡಿದರೆ ನನ್ನ ಬದುಕು ವ್ಯರ್ಥವಾಗುತ್ತದೆ. ಒಡಹುಟ್ಟಿದರೈವರು ಎನ್ನ ಕಡೆಗಣ್ಣಿಂದೀಕ್ಷಿಸರೂ = ಪ್ರಾಣ , ಅಪಾನ , ವ್ಯಾನ , ಉದಾನ , ಸಮಾನರೆಂಬ ಪಂಚಪ್ರಾಣರು ನನ್ನ ಒಡಹುಟ್ಟಿದವರಾದರೂ ಅಂತಃಕರಣದಿಂದ ನನ್ನ ಕಡೆಗೆ ಪೂರ್ಣ ಕಟಾಕ್ಷದಿಂದ ನೋಡದೆ , ಉಪೇಕ್ಷೆಯಿಂದ , ಕಡೆಗಣ್ಣಿನಿಂದ ಎಂದರೆ ನೋಡಿ ನೋಡದೆ ಓರೆನೋಟದಿಂದ ನೋಡುತ್ತಾರೆ. ಅಂದರೆ ಯೋಗಮಾರ್ಗಕ್ಕೆ ಅನುಕೂಲವಾಗರು ಎಂದರ್ಥ. ಬಿಡದೆ ಹತ್ತಿಲಿ ಕಾದಿಪ್ಪ ಹಿರಿಯಣ್ಣನು ನುಡಿಸನು = ಸದಾ ಸಮೀಪದಲ್ಲಿಯೇ ಕಾದುಕೊಂಡಿರುವನಾದರೂ ಮುಖ್ಯಪ್ರಾಣನೆಂಬ ಹಿರಿಯಣ್ಣನು ಮಾತನಾಡಿಸುವುದೇ ಇಲ್ಲ ಎಂದರೆ ಸತ್ಸಾಧನೆಯ ಪ್ರಸ್ತಾಪವನ್ನೇ ಮಾಡುವುದಿಲ್ಲ. ನಿನ್ನ ಗತಿ ಏನೆಂದು ವಿಚಾರಿಸುವುದಿಲ್ಲ. ಅವನಾ ಮಡದಿ ತ್ಯಾಗಕ್ಕೇನೆಂಬೆ ತನ್ನ ಒಡವೆ ಲೇಶವೀಯಳೋ = ಹೀಗೆ ಒಡಹುಟ್ಟಿದ ಅಣ್ಣನೇ ಉದಾಸೀನನಾದ ಮೇಲೆ , ಅವನ ಹೆಂಡತಿಗೆ ನನ್ನ ಮೇಲೆ ಎಷ್ಟು ಪ್ರೀತಿ ಇರಬೇಕು ? ಭಕುತಿದಾಯಕಳಾದ ಭಾರತೀದೇವಿಯೆಂಬ ಈ ಅತ್ತಿಗೆಯು ತನ್ನ ಒಡವೆ ಎಂದರೆ ಸ್ವತ್ತಾದ ಜ್ಞಾನ ಭಕ್ತಿ ವೈರಾಗ್ಯಗಳೆಂಬ ಆಭರಣಗಳಲ್ಲಿ ಒಂದನ್ನೂ ದಯಮಾಡಿ ಕೊಡಳು. ಅವುಗಳಿಲ್ಲದೆ ನಾನು ಶೋಭಿಸೆನು . ಆಕೆಯ ಉದಾರ ಬುದ್ಧಿಗೆ ಏನೆಂದು ಹೇಳಲಿ ? ದೇವಾ , ನೀನಾದರೂ ನಿನ್ನ ಸೊಸೆಗೆ ಹೇಳಿ , ನನ್ನ ಸತ್ಸಾಧನೆಗೆ ಅನುಕೂಲ ಮಾಡಿಕೊಡು ಎಂದು ಪ್ರಾರ್ಥಿಸುತ್ತೇನೆ.
ಅತ್ತಿಅತ್ತಿಗಿಯು ಯನ್ನ ಸುತ್ತ ಮುತ್ತ ಕಾದು ಕಟ್ಟಿ |
ಯತ್ತ ತೋರಾರು ನಿನ್ನತ್ತ ಬರಲೀಸಾರು |
ಹೊತ್ತಿಗೆ ಬಂದೊದಗಿ ನೃಪನಾ ಭೃತ್ಯರು ಯಳದು ವೈವಾಗಾ |
ಹೆತ್ತಯ್ಯಾ ನೀ ಸಲಹಾದಿರಲೂ ಮತ್ತಾರು ಗತಿಪೇಳೋ || ೮ ||
ವಿವರಣೆ : ಅತ್ತೆ ಅತ್ತಿಗೆಯು = ಸಂಶಯ , ವಿಪರ್ಯಯವೆಂಬ ಇಬ್ಬರು ಸ್ತ್ರೀಯರು , ಜರಾಸಂಧನ ಮಕ್ಕಳು , ಕಂಸನ ಹೆಂಡಂದಿರು . ಅಸ್ತಿ ಪ್ರಾಸ್ತಿ ಎಂಬ ನಾಮವುಳ್ಳವರು ; ಲೋಕದ ಅತ್ತೆ ಅತ್ತಿಗೆಯರಂತೆ ನನ್ನನ್ನು ಕಾಡುತ್ತಾ ಸುತ್ತು ಮುತ್ತಿ ನಾನು ಯಾರು ಎಲ್ಲಿದ್ದೇನೆಂದು , ನೀನು ಯಾರು ಎಲ್ಲಿರುವೆಯೆಂದೂ ತಿಳಿಯಗೊಡದಂತೆ , ಎರಡು ತೆರೆಗಳಂತೆ ಇದ್ದು , ಎತ್ತ ತೋರಾರು = ಜೀವನ ಸ್ವರೂಪ ತೋರಗೊಡದಂತೆ ಮುಚ್ಚಿಕೊಂಡಿರುವುದು ಒಂದು . ಪರಮಾತ್ಮನನ್ನು ತೋರಗೊಡದಂತೆ ಮುಚ್ಚಿಕೊಂಡಿರುವುದು ಒಂದು. ಇದೇ ಜೀವನು ಪರಮಾತ್ಮನಿಗೆ ದೂರು ಹೇಳುವ ವಿವರ. ನನಗೆ ಮುಸುಕು ಮುಚ್ಚಿಕೊಂಡಿದೆ. ನನ್ನನ್ನು ನಿನ್ನ ಬಳಿ ಬರಗೊಡದು. ಈ ಮುಸುಕನ್ನು ತೆಗೆಸಿ ನಿನ್ನ ಪಾದ ಸಂದರ್ಶನವನ್ನು ಕರುಣಿಸಿ ಕಾಪಾಡು. ಈ ಸಂಸಾರದಲ್ಲಿ ಹೀಗೆಯೇ ಕಾಲವನ್ನು ನೂಕುತ್ತಿರುವಾಗ , ಹೊತ್ತಿಗೆ ಬಂದೊದಗಿ = ಆಯುಃ ಪ್ರಮಾಣ ಮುಗಿದ ಹೊತ್ತಿಗೆ ಸರಿಯಾಗಿ ಬಂದು , ನೃಪನ ಭೃತ್ಯರು ಎಳೆದು ವೈವಾಗ = ನಿನ್ನಿಂದ ನಿಯಮಿಸಲ್ಪಟ್ಟ ಕಾಲಾಖ್ಯ ಯಮನ ಭೃತ್ಯರು ರೋಗಾದಿ ರೂಪದಿಂದ ಮುತ್ತಿ , ಕಾಡಿ , ಮೃತ್ಯುವಿನ ವಶಮಾಡಿ ಎಳೆದುಕೊಂಡು ಹೋಗುತ್ತಿರುವಾಗ , ಹೆತ್ತಯ್ಯಾ ನೀ ಸಲಹಾದಿರಲೂ = ಸರ್ವಲೋಕಜನಕನಾದ ನೀನೇ ಬಿಡಿಸಿ ಕಾಪಾಡದಿರಲು , ಮತ್ತಾರು ಗತಿಪೇಳೋ = ಇನ್ನು ನಮಗೆ ದಿಕ್ಕು ಯಾರು ? ಪರಮಾತ್ಮ ಈ ಮೃತ್ಯುಬಾಧೆಯಿಂದ ಬಿಡಿಸಿ ನಿತ್ಯಲೋಕವಾದ ವೈಕುಂಠದಲ್ಲಿಟ್ಟು ಕಾಪಾಡು.
ನಿನ್ನ ಹೊಂದಿಯಿಷ್ಟು ಭವಣಿಯನ್ನು ನಾನು ಬಡಲು ಕಂಡೂ |
ನಿನ್ನ ದೂರಿ ನಗುವಾರು ನಾ ಯಿನ್ನು ತಾಳಲಾರೆ |
ಘನ್ನ ಮಹಿಮಾ ಸೌಭಾಗ್ಯಸಂಪನ್ನ ಗೋಪಾಲವಿಠ್ಠಲಾ |
ಬಿನ್ನಪವ ಚಿತ್ತೈಸಿ ಮನ್ನಿಸಯ್ಯಾ ಮಾಧವಾ || ೯ ||
ವಿವರಣೆ : ಏನಾದರೂ ಅನಾದ್ಯನಂತ ಕಾಲದಲ್ಲಿಯೂ ನಾನು ನಿನ್ನವನು. ನಿನ್ನನ್ನು ಬಿಟ್ಟು ಅನ್ಯ ರಕ್ಷಕರು ನನಗೆ ಇಲ್ಲ. ಮನಃಪೂರ್ವಕವಾಗಿ ನಾನು ನಿನ್ನನ್ನು ಹೊಂದಿರುತ್ತೇನೆ. ನಿನ್ನ ಹೊಂದಿ ಯಿಷ್ಟು ಭವಣಿಯನ್ನು ನಾನು ಬಡಲು = ಅಂಥಾದ್ದರಲ್ಲಿ ನಾನು ಹೀಗೆ ಕಷ್ಟಕ್ಕೆ ಸಿಕ್ಕಿ ಒದ್ದಾಡುತ್ತಿರಲು , ಕಂಡು ನಿನ್ನ ದೂರಿ ನಗುವಾರು = ಇದನ್ನು ಕಂಡು ಇತರರು ನಾನಾವಿಧವಾಗಿ ನಿನ್ನನ್ನು ದೂರುವರು. ಇದನ್ನು ನಾನು ಕೇಳಿ ಸಹಿಸಲಾರೆ. ಲೋಕದಲ್ಲಿ ಯಾವುದೋ ಒಂದು ನಿಮಿತ್ತದಿಂದ ಪ್ರಿಯರಾಗಿರುವವರನ್ನು ದೂರಿದರೆ ಸಹಿಸಲಾಗುವುದಿಲ್ಲ. ಹೀಗಿರುವಲ್ಲಿ ನೀನು ಅನಿಮಿತ್ತ ಬಾಂಧವನು . ನಮ್ಮನ್ನು ಬಿಟ್ಟಿರುವವನಲ್ಲ. ಪರಮಪ್ರಿಯನು. ನಾ ಯಿನ್ನು ತಾಳಲಾರೆ = ಇಂಥಾ ನಿನ್ನನ್ನು ದೂರಿದರೆ ನಾನು ಹೇಗೆ ತಾನೇ ಸಹಿಸೇನು ? ಘನ್ನ ಮಹಿಮಾ = ಮಹಾಕರುಣಾಳುವೇ , ಸೌಭಾಗ್ಯಸಂಪನ್ನ = ಅಷ್ಟ ಸೌಭಾಗ್ಯ ಸಂಪನ್ನನೇ , ಜ್ಞಾನಿ ಸಂರಕ್ಷಕನೇ , ಪಾಪ ಪರಿಹಾರಕನೇ , ಶರಣ ಪಾಲಕನೇ , ಬಿನ್ನಪವ ಚಿತ್ತೈಸಿ ಮನ್ನಿಸಯ್ಯ ಮಾಧವಾ = ನನ್ನ ವಿಜ್ಞಾಪನೆಯನ್ನು ಮನ್ನಿಸಿ ಕೈಕೊಂಡು ಕಾಪಾಡು. ಲಕ್ಷ್ಮೀಪತಿಯೇ ನಿನಗೆ ಅನಂತಾನಂತ ನಮಸ್ಕಾರಗಳು.
vivaraNe:
vagatanadali suKavillA valleMdare nI biDiyallA |
hagaraNa jagadoLu migilAyitu pannaganagara nivAsA || pa ||
vivaraNe : I saMsAradalli lESamAtravU suKavilla. idaralliddu toLaluvudu nanniMdAgadu eMdare prArabdhakarmavannu anuBavisiyE tIrabEkeMbudu ninna niyamavAgide. I prapaMcadalli kaShTavu atiSayavAgide. SEShAcalavAsiyAda arthAt vaikuMThanilayanAda SrI SrInivAsanE nannannu ( eMdare jIvavargavannu ) karuNadiMda kApADu .
mUru baNNigiya manige mUru yaraDu BUtaMgaLu |
mUru nAlku prakArakke mUrAru CidragaLu |
mUru avastheyu dinake mUrAnUrAru hattarali |
mUru vidhada annadiMdA mUru tApakkAki || 1 ||
vivaraNe : saMsAra mADalu sAdhanavAgi muKyavAgi SarIravirabEku.A SarIravu hEge ide eMdare , mUru baNNigeya mane = biLupu (satva) , keMpu (raja) , kappu (tama) . I mUru guNagaLiMda kUDi , mUru eraDu BUtaMgaLu = 3 + 2 = 5 , pRuthvi , appu , tEja , vAyu , AkASa veMba paMcaBUtagaLiMda nirmisalpaTTide. I dEhaveMba paTTaNakke , mUru nAlku prAkArakke = 3 + 4 = 7 , tvakku , carma , mAMsa , rudhira , mEdassu , majja , asthi eMba ELu vidha dhAtugaLeMba prAkAragaLive . I paTTaNadalli bAgilugaLaMte , mUrAru CidragaLu = 3 + 6 = 9 kiMDigaLive . avu eraDu kaNNugaLu , eraDu mUgina hoLLegaLu , oMdu bAyi , eraDu kivigaLu , oMdu guda , oMdu upasthA , hIge oMBattu bAgilugaLu . mUru avastheyu dinake = I dEhakke dina oMdakke mUru avasthegaLu , jAgrata svapna suShupti eMbivu naDeyuttiruttave. mUru nUrAru hattarali = hIge munnUru aravattu divasagaLalli arthAt pratidinavU , mUru vidhada annadiMdA = mUruvidha annavannu tinnabEku eMdare , saMcita , AgAmi , prArabdhaveMba mUru vidha karmagaLa Palavannu anuBavisabEku. mUru tApakkAki = hIge anuBavisuvudaralli mUru tApagaLu nannannu bAdhisuttave. mUru tApagaLu – AdhyAtmika , Adidaivika , AdiBautika ( tanniMda , parariMda , daivadiMda ) .
I tApagaLannu sahisalArenu . svAmiyE kApADu .
aidu maMdi BAvanavaru aivAru maidanArA kUDi |
aidu pari tAnAgi mAva aidu kattale kONe |
gaidisuvaMte mADuvaru aidu taMdu beccisuva |
aidane bokkasada maneyalaidhAdu nA kANe || 2 ||
vivaraNe : nanna I saMsAradalli , aidu maMdi BAvanavaru = SravaNa , nayana , GrANa , tvakku , rasana eMba paMcaj~jAnEMdriyagaLu ( j~jAnEMdriyagaLu SrEShThavAduvugaLAddariMda BAvanavaru eMdaru ) , aivaru maidunarA kUDi = vAku , pANi , pAda , vAyu , upasthA eMba paMca karmEMdriyagaLu . aidu pari tAnAgi mAva = manassu , buddhi , citta , ahaMkAra , cEtanaveMba paMcavRuttiyiMda kUDiruva manasseMba mAvanu , ivarellarU sEri nannannu paramapuruShanAda ninna baLi sErisalIsade , aidu kattale kONege aidisuvaMte mADuvaru = tAmisra , aMdhatAmisra , mOha , mahA mOha , nidhanaveMba AvidyA paMcakada kattale kONege , balavaMtadiMda oyyuttAre. hOguvudillaveMdu muShkara mADidare , aidu taMdu beccisuva = Sabda , sparSha , rasa , rUpa , gaMdhaveMba (tanmAtregaLeMba) uriyuva koLLiyannu taMdu beccisuvaru (eMdare viShayagaLalli magnanannAgi mADi muMdina gatiyEneMba digilannu huTTisuttAre.) suKavAgirONaveMdare adakke sAdhakavAda , aidane bokkasada maneyalaidhAdu nA kANe = bokkasada maneyannu hOgalIyaru . bokkasagaLu aidu – annamaya , prANamaya , manOmaya , vij~jAnamaya , AnaMdamayaveMba aidu kOSagaLu . avugaLalli kaDeyadAda AnaMdaveMbudu ellideyO nAnu kANe. paramAtmanE kApADu .
ArAru yaraDu sAvira dAriyalli hOgi baruva |
Aru mUru mUru sAviradArunUru nityadi |
Aru nAlku maMdi hiriyA pArapatyagAraridake |
Aru yaraDu vidhadi yanna gAru mADuttipparu || 3 ||
vivaraNe : I dEhaveMba paTTaNakke , ArAru eraDu sAvira dAriyalli = 6 × 6 = 36 , 36 × 2 = 72 , hIge 72 000 nADigaLeMba dAriyalli , hOgi baruva = vAyudEvaru hOgibaruttA eMdare ucCvAsa niSvAsagaLa mUlaka , nityadi = dina oMdakke , Aru mUru mUru sAviradArunUru = 6 × 3 = 18 , 18 + 3 = 21 , hIge 21600 SvAsajapagaLannu mADuttiruttAre. adariMda nanna muMdina gatige sAdhanavAguvaMte mADabEkeMdu prArthisuttEne. hAgallade , I muKyaprANadEvariMda Aj~japtarAda , Aru nAlku maMdi = 6 × 4 = 24 maMdi , hiriya pArapatyagAraridake = 5 BUtagaLu ( pRuthvi ,appu , tEja , vAyu , AkASa ) , 5 tanmAtregaLu ( gaMdha , rasa , rUpa , sparSa , Sabda ) , 5 karmEMdriyagaLu (vAkku , pANi , pAda , vAyu , upasthA ) , 5 j~jAnEMdriyagaLu ( SravaNa , nayana , GrANa , rasana , tvakku ) , 1 manassu , 1 buddhi , 1 ahaMkAra , 1 citta. hIge 24 maMdi ( tatvagaLu – jaDagaLu , ivugaLige aBimAni dEvategaLu ) sEri , Aru eraDu vidhadi = 6 + 2 = 8 vidhavAda madadiMda , eMdare , annamada , arthamada , ahaMkAramada , vaiBavamada , sAhasamada , dhAtrivaSamada , prAyamada , mOhamada . iMtu tatvABimAnigaLu , enna gAru mADuttipparu = nanage I eMTu madagaLannu hacci hALu mADuttAre .
AdudariMda nInu mElvicAraNeyannu tegedukoMDu , adariMda nanage satsAdhaneyAguvaMte mADabEkeMdu bEDuttEne.
Are hattarA mUlAdi Aru maMdi biDade enna |
GOraisuvaru maraLoMdu vicAra mADalIsaro |
Aru mUru vidhada sOpaskAra vaMdAdaru yilla |
Are ibbaru savatera (hO)GOrATakenaMbe || 4 ||
vivaraNe : Aru hattara mUlAdi = 6 + 10 = 16 kaLegaLuLLa liMga SarIravannE mUlAdhAra mADikoMDu , 16 kaLegaLu – paMcaBUtagaLu , paMcatanmAtregaLu , paMcaj~jAnEMdriyagaLu mattu manassu . I 16 kaLegaLuLLaddu liMga SarIravu . idu jIvana svarUpa SarIrakke hoTTinaMte suttalU AvarisikoMDiruttade. Aru maMdi biDade enna = ariShaDvargagaLu ( kAma , krOdha , lOBa , mOha , mada , matsara ) maraLoMdu vicAra mADalIsaro = mattoMdu vicAra mADadaMte , GOraisuvaru = sadA kADuttAre. Aru mUru vidhada sOpaskara vaMdAdaru yilla = 6 + 3 = 9 , SravaNa , kIrtana , smaraNa , pAdasEvana , arcana , vaMdana , dAsya , saKya , AtmanivEdana veMba navavidhaBaktigaLeMba sOpaskara eMdare muktimArgadalli pAthEya svarUpavAda ivugaLalli oMdAdarU illa. Are ibbaru savatera hOrATakkEneMbe = hEgAdarU sAdhana mADikoLLONaveMdare , ASA – lajjA eMba ibbaru savatiyaru kalahavADuttA nannannu bAdhisuttAre . aMdare , Aseyu apEkShisi muMdakke taLLidare , lajjeyu hiMdakke eLeyuttade. ivaribbara hiDitakke sikki yAvAga yAra balavu heccAguttadeyO , Aga A rIti naDedu adariMdAKuva kaShTagaLige nAnu guriyAgabEkAgide.
paramAtmA idannu nAnu sahisalArenu , kApADu.
obba beLaku mADalu mattobba kattalegaidisuva |
obba yaraDU mADalu mattobba niMtunOLpa |
obba mUvara vaLavaLage habbikoMDippuvAraMte |
obbana kANade nA tabbibbigoLagAde || 5 ||
vivaraNe : I dEhadalli jIvara sAdhanegAgi viSvAdi rUpagaLiMda paramAtBanu mADuva vyApAravannu varNisuttAre. obba beLaku mADalu = viSvanAmaka paramAtmanu dakShiNAkShi sthitanAgi beLakeMba jAgradAvasthege prErakanAgiddAne. mattobba kattalegaidisuva = prAj~janAmaka paramAtmanu hRudayadalliddu , jIvanige kattaleyeMba gADhanidrege prErakanAgiddAne. obba yaraDU mADalu = taijasanAmaka paramAtmanu kaMTha pradESadalliddu , eccarikeyU allada nidreyU allada svapnAvasthege prErakanAgiddAne. mattobba niMtu nOLpa = turyanAmaka paramAtmanu Sirassina hanneraDu aMgulada mEle iddu AnaMdavannuMTumADuttAne. Atanige vAsudEvaneMdu hesaru. AtanE Sirassina mEle amRutavRuShTiyannu kareyuvavanu. obba mUvara vaLavaLage habbikoMDippuvAraMte = obbanAda paramAtmanu mUvarAda Atma , aMtarAtma , j~jAnAtma rUpagaLalli oLagoLage habbikoMDiruvanu eMdare vyApisiruttAne. obbana kANade = hIge viSva , taijasa , prAj~ja , turya , Atma , aMtarAtma , j~jAnAtma , paramAtmaneMba eMTu rUpagaLiMda , nInu nammoLage mADuva vyApAragaLa bageyariyade , nA tabbibbigoLagAde = nAnu dikku tOrade hOde. AddariMda , dayAbdhiyE , ninna SaraNara dvArA SrutismRutigaLalli uktavAda ninna mahAtmegaLannu nanna manassige hiDiyuvaMte bOdhisi , I saMsAradiMda pArugANisu eMdu bEDuttEne.
maneyoLu nALinAgrAsakkanumAnA saMdEhyasallA |
riNadiMdA kaDehAyO mArgavanu lESa nA kANe |
guNisalu I kALA puruShAna baMdhanadiMda nAniShTu |
daNidino yinnenna ninna aNugAroLADiso || 6 ||
vivaraNe : maneyoLu nALina grAsakke anumAnA saMdEhyasallA = I dEhadiMda muMdaNa janmakke grAsa eMdare sAdhane lESavAdarU illa . idakke saMSayavilla. RuNadiMda kaDehAyo mArgavanu lESa nA kANe = RuNa – sAla , idu mUru bageyAdaddu – dEva^^RuNa , RuShi^^RuNa , pitRu^^RuNaveMdu. yaj~jAdigaLiMda dEva^^RuNavU , adhyayanAdigaLiMda RuShi^^RuNavU , satsaMtAnABivRuddhiyiMda pitRu^^RuNavU parihAravAguttade. guNisalu = idu janmajanmakkU niMtu apAravAgide. I RuNadiMda pArAguva bageyu nanage tOradAgide. kALApuruShana baMdhanadiMda nAniShTu daNidino = kalipuruShana baMdhanadiMda nAniShTu daNidiruvenu . idannu nIgisabEkAgi , ninna aNugaroLu ADisu = ninnannE anusarisi naDeva Baktaralli , sahavAsavannu koTTu uddhAra mADu.
haDadatAyi mAyadi hiDidu baduku mADisuvaLu |
vaDahuTTidAraivArenna kaDegaNNiMdIkShisArU |
biDade hattili kAdippa nuDisAnu hiriyaNNa avanA |
maDadi tyAgakEneMbe tanna vaDavi lESAvIyaLO || 7 ||
vivaraNe : haDadatAyi = mUla prakRutiyAda mAyAdEviyu I jIvanannu saMsAradalli pravRuttanannAgi mADuttALe . haDeda tAyi eMbuva mAtu muMdakke tanage apakIrti taMdIteMdu sakala anukUla koTTu , hiDidu baduku mADisuvaLu = hoDedu baDidu buddhi kalisi sAdhaneyeMba baduku mADisuttALe. idu satsAdhanegAdare bahaLa saMtOSha. hAgallade , muddiniMda sAki viShayOpaBOgagaLallE magnanannAgi mADidare nanna baduku vyarthavAguttade. oDahuTTidaraivaru enna kaDegaNNiMdIkShisarU = prANa , apAna , vyAna , udAna , samAnareMba paMcaprANaru nanna oDahuTTidavarAdarU aMtaHkaraNadiMda nanna kaDege pUrNa kaTAkShadiMda nODade , upEkSheyiMda , kaDegaNNiniMda eMdare nODi nODade OrenOTadiMda nODuttAre. aMdare yOgamArgakke anukUlavAgaru eMdartha. biDade hattili kAdippa hiriyaNNanu nuDisanu = sadA samIpadalliyE kAdukoMDiruvanAdarU muKyaprANaneMba hiriyaNNanu mAtanADisuvudE illa eMdare satsAdhaneya prastApavannE mADuvudilla. ninna gati EneMdu vicArisuvudilla. avanA maDadi tyAgakkEneMbe tanna oDave lESavIyaLO = hIge oDahuTTida aNNanE udAsInanAda mEle , avana heMDatige nanna mEle eShTu prIti irabEku ? BakutidAyakaLAda BAratIdEviyeMba I attigeyu tanna oDave eMdare svattAda j~jAna Bakti vairAgyagaLeMba ABaraNagaLalli oMdannU dayamADi koDaLu. avugaLillade nAnu SOBisenu . Akeya udAra buddhige EneMdu hELali ? dEvA , nInAdarU ninna sosege hELi , nanna satsAdhanege anukUla mADikoDu eMdu prArthisuttEne.
atti^^attigiyu yanna sutta mutta kAdu kaTTi |
yatta tOrAru ninnatta baralIsAru |
hottige baMdodagi nRupanA BRutyaru yaLadu vaivAgA |
hettayyA nI salahAdiralU mattAru gatipELO || 8 ||
vivaraNe : atte attigeyu = saMSaya , viparyayaveMba ibbaru strIyaru , jarAsaMdhana makkaLu , kaMsana heMDaMdiru . asti prAsti eMba nAmavuLLavaru ; lOkada atte attigeyaraMte nannannu kADuttA suttu mutti nAnu yAru elliddEneMdu , nInu yAru elliruveyeMdU tiLiyagoDadaMte , eraDu teregaLaMte iddu , etta tOrAru = jIvana svarUpa tOragoDadaMte muccikoMDiruvudu oMdu . paramAtmanannu tOragoDadaMte muccikoMDiruvudu oMdu. idE jIvanu paramAtmanige dUru hELuva vivara. nanage musuku muccikoMDide. nannannu ninna baLi baragoDadu. I musukannu tegesi ninna pAda saMdarSanavannu karuNisi kApADu. I saMsAradalli hIgeyE kAlavannu nUkuttiruvAga , hottige baMdodagi = AyuH pramANa mugida hottige sariyAgi baMdu , nRupana BRutyaru eLedu vaivAga = ninniMda niyamisalpaTTa kAlAKya yamana BRutyaru rOgAdi rUpadiMda mutti , kADi , mRutyuvina vaSamADi eLedukoMDu hOguttiruvAga , hettayyA nI salahAdiralU = sarvalOkajanakanAda nInE biDisi kApADadiralu , mattAru gatipELO = innu namage dikku yAru ? paramAtma I mRutyubAdheyiMda biDisi nityalOkavAda vaikuMThadalliTTu kApADu.
ninna hoMdiyiShTu BavaNiyannu nAnu baDalu kaMDU |
ninna dUri naguvAru nA yinnu tALalAre |
Ganna mahimA sauBAgyasaMpanna gOpAlaviThThalA |
binnapava cittaisi mannisayyA mAdhavA || 9 ||
vivaraNe : EnAdarU anAdyanaMta kAladalliyU nAnu ninnavanu. ninnannu biTTu anya rakShakaru nanage illa. manaHpUrvakavAgi nAnu ninnannu hoMdiruttEne. ninna hoMdi yiShTu BavaNiyannu nAnu baDalu = aMthAddaralli nAnu hIge kaShTakke sikki oddADuttiralu , kaMDu ninna dUri naguvAru = idannu kaMDu itararu nAnAvidhavAgi ninnannu dUruvaru. idannu nAnu kELi sahisalAre. lOkadalli yAvudO oMdu nimittadiMda priyarAgiruvavarannu dUridare sahisalAguvudilla. hIgiruvalli nInu animitta bAMdhavanu . nammannu biTTiruvavanalla. paramapriyanu. nA yinnu tALalAre = iMthA ninnannu dUridare nAnu hEge tAnE sahisEnu ? Ganna mahimA = mahAkaruNALuvE , sauBAgyasaMpanna = aShTa sauBAgya saMpannanE , j~jAni saMrakShakanE , pApa parihArakanE , SaraNa pAlakanE , binnapava cittaisi mannisayya mAdhavA = nanna vij~jApaneyannu mannisi kaikoMDu kApADu. lakShmIpatiyE ninage anaMtAnaMta namaskAragaLu.
Leave a Reply