Palisennanu Deva

Composer : Shri Gurugopala dasaru

Smt.Nandini Sripad , Blore..

ರಾಗ: ಮಧ್ಯಮಾವತಿ , ಖಂಡಛಾಪುತಾಳ

ಪಾಲಿಸೆನ್ನನು ದೇವಾ | ಭುವನತ್ರಯಂಗಳ |
ಲೀಲೆಯಿಂದಲಿ ಕಾವಾ | ಹರಿಯೆ ಅನಾದಿ |
ಮೂಲಸುಸ್ವಭಾವ | ಪವನಂಗೆ ಜೀವಾ || ಪ ||
ಶ್ರೀಲಕುಮಿಪತಿ ಅಜಜನಕ ಅ –
ನಾದಿನಿತ್ಯ ಮುಕುತಾಮುಕುತರ
ಕಾಲಕಾಲಕೆ ಪೊರೆವದಾತ ವಿ –
ಶಾಲ ಮಹಿಮನೆ ಮೇಲುಕರುಣದಿ || ಅ.ಪ ||

ವಿಜಯಸಾರಥಿವೀರ | ವಿಶ್ವೇಶ ವಿಭುವರ |
ಸುಜನಮನ ಸಂಚಾರ | ಶುಭಗುಣ ಗಣಾಂಬುಧಿ |
ರಜ ತಮೋ ಗುಣದೂರ | ಪರತತ್ವಸಾರ ||
ಕುಜನಮರ್ದನ ಕುಮುದಸಖಮುಖ
ಕುಬ್ಜಮೂರುತಿಯೆ ಕುಮುದಭಂಜನ
ಕುಜಪ್ರದಾಯಕ ಕುಟಿಲವರ್ಜಿತ
ಸುಜನಮನ ಅಂಬುಜ ದಿವಾಕರ ||
ಭುಜಗಶಯನನೆ ಭೂರಮಣ ಹರೇ
ದ್ವಿಜಧ್ವಜನೆ ಅಂಬುಜದಳೇಕ್ಷಣ
ಭಜಕಜನ ಚಕೋರಚಂದ್ರ
ವ್ರಜಜನಂಗಳ ಕಾಯಿದ ಕೃಷ್ಣ ||
ಅಜರಾಮರಣ ಅಪ್ರಮೇಯ
ನಿಜಪೂರ್ಣಸುಖ ನಿತ್ಯನಿರ್ಮಲ
ಗಜವರದ ಗಂಭೀರನಿಜವರ
ಅಜನಿರಂಜನ ಅಘನಿವಾರಣ ||
ನಿಜಜನರ ಪೊರೆವಂತೆ ದೇವನೆ
ತ್ರಿಜಗದಲಿ ನಿನ್ಹೊರತು ಕಾಣೆನೊ
ದ್ವಿಜರ ರಕ್ಷಿಸಿ ನಿಜರ ಈ ಮನ
ತ್ಯಜಿಸದಂದದಿ ಮಾಡು ಸರ್ವದಾ || ೧ ||

ಪಟುತರಾಂಗನೆ ದೇವಾ | ಜೀವೇಶ ಭಕುತರ |
ಕಟಕಸರ್ವದ ಕಾವಾ | ಧೇನಿಪರ ಮನದಲಿ |
ತಟಿತನಂದದಿ ಪೊಳೆವಾ | ಮಹಾನುಭಾವಾ ||
ಹಾಟಕ ಕಶಿಪು ಸುತನ ಪಿಡಿದು ಧೂ –
ರ್ಜಟಿಯು ಪರನೆಂದೆನುತಲಿ ಒಂ –
ತ್ರುಟಿಯು ಬಿಡದಲೆ ಬಾಧಿಸಲು ಬಲು
ಹಟದಿ ನಿನ್ನನು ತುತಿಸಿಕೊಳುತಿರೆ ||
ಚಿಟಚಿಟನೆ ಚೀರುತ್ತಜಾಂಡದ
ಕಟಕಟನೆ ಪಲ್ಗಡಿದು ಕಂಭದಿ
ಪಟಹ ಪಟ ಪಟ ಬಿಚ್ಚುವಂದದಿ
ಚಟ ಚಟಾ ಚಟ ಚಟನೆ ಪೊಟಿಯುತ ||
ಕಠಿಣ ಖಳನ ಕೆಡಹಿ ಅವನ
ಜಠರವನೆ ನಖದಿಂದ ಛೇದಿಸಿ
ದಿಟದಿ ತರಳನ ಕಾಯಿದೆ ಎನ್ನಯ
ಕುಟಿಲ ಕಟುಮತಿ ಅಟದವಾನಲ ||
ವಟದೆಲೆಯ ಸಂಪುಟದಲೊರಗಿ ಪೊಂ –
ಗುಟವ ನುಂಬುವ ಮೂಲಕಾರಣ
ಚಟುಲವಿಕ್ರಮ ಧೀರ ಭವ ಸಂ –
ಕಟಹರಣ ವೇಂಕಟರಮಣ ಹರೇ || ೨ ||

ಪನ್ನಗಾಚಲ ನಿಲಯ | ಶ್ರೀ ಶ್ರೀನಿವಾಸ |
ಪನ್ನಗಾಶನಪ್ರೀಯ | ದುರಿತಾದ್ರಿಕುಲಿಶ ಮೋ – |
ಹನ್ನ ವರ್ಜಿತಮಾಯಾ | ಕಾಯಯ್ಯ ಜೀಯಾ ||
ನಿನ್ನ ಹೊರತು ಅನ್ಯ ದೇವರ
ಮನ್ನಿಸೆನು ಮನ್ನೋವಾಚಕಾಯದಿ
ಇನ್ನು ಮುನ್ನಿದು ಸಿದ್ಧವಯ್ಯ ಸಂ –
ಪನ್ನಜನ ಕಾರುಣ್ಯಮೂರುತಿ ||
ಜನ್ನುಮಾ ಜನುಮಾಂತರದಿ
ಎನ್ನ ಅಘಾವಳಿಗಳನೆ ಕಳೆದು
ಭಿನ್ನರಹಿತ ಜ್ಞಾನದಿಂದಲ –
ಚ್ಛಿನ್ನ ಭಕ್ತರ ಸಂಗ ಪಾಲಿಸೋ ||
ನಿನ್ನ ಬೇಡುವೆ ಇದನೆ ಗುಣಗಣ
ಬನ್ನ ಬಡಿಸುವದ್ಯಾಕೆ ಶರಣರ
ಹೊನ್ನು ಹಣ ಕೊಡುಯೆಂದು ಬೇಡುವ –
ದಿನ್ನು ಯಾಚಿಸೂವದಿಲ್ಲವೋ ||
ನಿನ್ನ ಬಿಂಬಕ್ರಿಯೆಗಳನ್ನೇ
ಚನ್ನವಾಗಿ ತಿಳಿಸೊ ಜೀವರ –
ಭಿನ್ನ ಗುರುಗೋಪಾಲವಿಟ್ಠಲ ಸಂ –
ಪನ್ನ ಭಾಗ್ಯ ದಯಾನಿಧೇ ಹರೇ || ೩ ||


rAga: madhyamAvati , KaMDaCAputALa

pAlisennanu dEvA | BuvanatrayaMgaLa |
lIleyiMdali kAvA | hariye anAdi |
mUlasusvaBAva | pavanaMge jIvA || pa ||
SrIlakumipati ajajanaka a –
nAdinitya mukutAmukutara
kAlakAlake porevadAta vi –
SAla mahimane mElukaruNadi || a.pa ||

vijayasArathivIra | viSvESa viBuvara |
sujanamana saMcAra | SuBaguNa gaNAMbudhi |
raja tamO guNadUra | paratatvasAra ||
kujanamardana kumudasaKamuKa
kubjamUrutiye kumudaBaMjana
kujapradAyaka kuTilavarjita
sujanamana aMbuja divAkara ||
BujagaSayanane BUramaNa harE
dvijadhvajane aMbujadaLEkShaNa
Bajakajana cakOracaMdra
vrajajanaMgaLa kAyida kRuShNa ||
ajarAmaraNa apramEya
nijapUrNasuKa nityanirmala
gajavarada gaMBIranijavara
ajaniraMjana aGanivAraNa ||
nijajanara porevaMte dEvane
trijagadali ninhoratu kANeno
dvijara rakShisi nijara I mana
tyajisadaMdadi mADu sarvadA || 1 ||

paTutarAMgane dEvA | jIvESa Bakutara |
kaTakasarvada kAvA | dhEnipara manadali |
taTitanaMdadi poLevA | mahAnuBAvA ||
hATaka kaSipu sutana piDidu dhU –
rjaTiyu paraneMdenutali oM –
truTiyu biDadale bAdhisalu balu
haTadi ninnanu tutisikoLutire ||
ciTaciTane cIruttajAMDada
kaTakaTane palgaDidu kaMBadi
paTaha paTa paTa biccuvaMdadi
caTa caTA caTa caTane poTiyuta ||
kaThiNa KaLana keDahi avana
jaTharavane naKadiMda CEdisi
diTadi taraLana kAyide ennaya
kuTila kaTumati aTadavAnala ||
vaTadeleya saMpuTadaloragi poM –
guTava nuMbuva mUlakAraNa
caTulavikrama dhIra Bava saM –
kaTaharaNa vEMkaTaramaNa harE || 2 ||

pannagAcala nilaya | SrI SrInivAsa |
pannagASanaprIya | duritAdrikuliSa mO – |
hanna varjitamAyA | kAyayya jIyA ||
ninna horatu anya dEvara
mannisenu mannOvAcakAyadi
innu munnidu siddhavayya saM –
pannajana kAruNyamUruti ||
jannumA janumAMtaradi
enna aGAvaLigaLane kaLedu
Binnarahita j~jAnadiMdala –
cCinna Baktara saMga pAlisO ||
ninna bEDuve idane guNagaNa
banna baDisuvadyAke SaraNara
honnu haNa koDuyeMdu bEDuva –
dinnu yAcisUvadillavO ||
ninna biMbakriyegaLannE
cannavAgi tiLiso jIvara –
Binna gurugOpAlaviTThala saM –
panna BAgya dayAnidhE harE || 3 ||

Leave a Reply

Your email address will not be published. Required fields are marked *

You might also like

error: Content is protected !!