Karuni kayo raghavendra

Composer : Shri Gurugopala dasaru

Smt.Sridevi

ಕರುಣಿ ಕಾಯೋ ರಾಘವೇಂದ್ರ ಗುರುವೆ
ನೆರೆನಂಬಿದವರ ಕಾಮಿತ ಕಲ್ಪತರುವೆ || ಪ ||

ತೀರ್ಥ ಪಾದನ ಪಾದಪಂಕಜ ಭೃಂಗ
ಧೂರ್ತವಾದಿ ಅಂಧ ತಿಮಿರ ಪತಂಗ
ಕಾರ್ತ ಸ್ವರ ಲೋಷ್ಟ ಸಮಚಿತ್ತ ಸಂಗ
ಆರ್ತಜನರ ಪಾಲ ಅತಿದಯಾಪಾಂಗ || ೧ ||

ಚಪಲಚಿತ್ತರು ತಮ್ಮ ಜಪತಪದಿಂದ
ವಿಪರೀತ ಕರ್ಮ ಪೋಗುವುದು ಹೀಗೆಂದು
ಅಪಹಾಸವಲ್ಲವೆ ಇದು ಏನು ಚೆಂದ
ಕೃಪಣವತ್ಸಲ ಕಾಯೋ ಅತಿ ದಯಾದಿಂದ || ೨ ||

ಮರುದಂಶ ಮಧ್ವ ಮತಾಬ್ಧಿ ಚಂದಿರನೆ
ಪರಮ ಕಲ್ಯಾಣ ಗುಣ ರತ್ನ ರತ್ನಾಕರನೆ
ದುರಿತ ಜೀಮೂತಕೆ ಚಂಡ ಮಾರುತನೆ
ಸಿರಿ ಗುರುಗೋಪಾಲವಿಠಲನ್ನ ಶರಣನೆ || ೩ ||


karuNi kAyO rAGavEMdra guruve
nerenaMbidavara kAmita kalpataruve || pa ||

tIrtha pAdana pAdapaMkaja BRuMga
dhUrtavAdi aMdha timira pataMga
kArta svara lOShTa samacitta saMga
Artajanara pAla atidayApAMga || 1 ||

capalacittaru tamma japatapadiMda
viparIta karma pOguvudu hIgeMdu
apahAsavallave idu Enu ceMda
kRupaNavatsala kAyO ati dayAdiMda || 2 ||

marudaMSa madhva matAbdhi caMdirane
parama kalyANa guNa ratna ratnAkarane
durita jImUtake caMDa mArutane
siri gurugOpAlaviThalanna SaraNane || 3 ||

Leave a Reply

Your email address will not be published. Required fields are marked *

You might also like

error: Content is protected !!