Composer : Shri Vittalesha
ದಯ ತೋರೋ ದೇವ ಗುರು ರಾಜನೇ
ಭಯವಾಗಿದೆನಗೆ ಭವಸಾಗವಾಗಿ |ಪ|
ಮೋಹಜಾಲದಲ್ಲಿ ಮಂದ ಬುದ್ಧಿಯಾಗಿ
ದೇಹ ಕೊರಗಿತಯ್ಯ ರಾಘವೇಂದ್ರ ರಾಯ |೧|
ಅನ್ನ ವಸನಕ್ಕಾಗಿ ಅನ್ಯ ದಾಸನಾಗಿ
ಬನ್ನಬಟ್ಟೇನಯ್ಯ ಘನ್ನ ವ್ಯಾಸರಾಯ |೨|
ಹಠವ್ಯಾಕೊ ಜೀಯ ದಿಠಯೋಗಿ ಕಾಯ ….
ವಿಠಲೇಶ ಪ್ರಿಯ ಪ್ರಹ್ಲಾದ ರಾಯ |೩|
daya tOrO dEva guru rAjanE
BayavAgidenage BavasAgavAgi |pa|
mOhajAladalli maMda buddhiyAgi
dEha koragitayya rAGavEMdra rAya |1|
anna vasanakkAgi anya dAsanAgi
bannabaTTEnayya ghanna vyAsarAya |2|
haThavyAko jIya diThayOgi kAya ….
viThalESa priya prahlAda rAya |3|
Leave a Reply