Composer : Shri Vijayadasaru
ಟೀಕಾರಾಯರ ಪಾದ ಸೋಕಿದ ಕೊನೆ ಧೂಳಿ
ತಾಕಿದ ಮನುಜರಿಗೆ ||ಪ||
ಕಾಕುಗೊಳಿಸುವ ಅನೇಕ ಪಪಂಗಳ
ಬೀಕಿ ಬಿಸಾಡೋದು ತಾಕುವ ಮನುಜಗೆ || ಅ.ಪ ||
ಮಧ್ವಮತವೆಂಬೊ ದುಗ್ದಾಬ್ಧಿಯೊಳು
ಉದ್ಭವಿಸಿದ ಚಂದ್ರನೋ ||
ಅದ್ವೈತ ಮತ ವಿಪಿನ ಭೇದನ ಕುಠಾರ |
ವಿದ್ಯಾರಣ್ಯನ ಗರುವಕ್ಕೆ ಪರಿಹಾರ ||೧||
ತತ್ವ ನುಡಿಸಲು ತತ್ವ ಸುಧಾ ಭಾಷ್ಯ |
ವಿಸ್ತರಿಸಿದ ಚಂದ್ರನೋ ||
ಚಿತ್ತವಿಟ್ಟು ಮಾಡಿ ಟೀಕಾವನ್ನೆ ಬರೆದು ||
ಸುತ್ತೇಳು ಜಗಕೆಲ್ಲ ಪ್ರಕಟಿಸಿ ಮೆರೆದಂಥ ||೨||
ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ |
ಬಿಂದು ಮಾತ್ರದಿ ನೆನೆಯೆ ||
ಮಂದ ಮತಿಗಾದರೂ ಅಜ್ಞಾನ ನಾಶನ |
ಸಂದೇಹವಿಲ್ಲವಯ್ಯ ಸ್ಮರಣೆ ಮಾಡಿದ ಮೇಲೆ ||೩||
ಜ ಎಂದು ನುಡಿಯಲು ಜಯಶೀಲನಾಗುವ |
ಯ ಎಂದು ನುಡಿಯಲು ಯಮನಂಜುವ ||
ತಿ ಎಂದು ನುಡಿಯಲು ತಿಮಿರ ಪಾತಕ ಹಾನಿ |
ರ್ಥ ಎಂದು ನುಡಿಯಲು ತಾಪತ್ರಯ ಪರಿಹಾರಾ ||೪||
ಯೋಗಿ ಅಕ್ಷೋಭ್ಯರ ಕರಕಮಲ ಸಂಜಾತ |
ಭಾಗವತರ ಪ್ರೀಯನೆ ||
ಯೋಗಿಗಳರಸನೆ ಮಳಖೇಡ ನಿವಾಸಾ |
ಕಗಿಣಿ ತಟ ವಾಸ ವಿಜಯವಿಠ್ಠಲದಾಸಾ ||೫ ||
TIkArAyara pAda sOkida kone dhULi
tAkida manujarige ||pa||
kAkugoLisuva anEka papaMgaLa
bIki bisADOdu tAkuva manujage || a.pa ||
madhvamataveMbo dugdAbdhiyoLu
udbhavisida caMdranO ||
advaita mata vipina bhEdana kuThAra |
vidyAraNyana garuvakke parihAra ||1||
tatva nuDisalu tatva sudhA BAShya |
vistarisida chaMdranO ||
cittaviTTu mADi TIkAvanne baredu ||
suttELu jagakella prakaTisi meredaMtha ||2||
eMdigAdaru omme kone nAligeyiMda |
biMdu mAtradi neneye ||
maMda matigAdarU aj~jAna nASana |
saMdEhavillavayya smaraNe mADida mEle ||3||
ja eMdu nuDiyalu jayaSIlanAguva |
ya eMdu nuDiyalu yamanaMjuva ||
ti eMdu nuDiyalu timira pAtaka hAni |
rtha eMdu nuDiyalu tApatraya parihArA ||4||
yOgi akShObhyara karakamala saMjAta |
bhAgavatara prIyane ||
yOgigaLarasane maLaKEDa nivAsA |
kagiNi taTa vAsa vijayaviThThaladAsA ||5 ||
Leave a Reply