Composer : Shri Shyamasundara dasaru
ಅಂಬಿಕಾ ಪತಿ ರಕ್ಷಿಸೆನ್ನ
ಶಂಬರಾರಿ ಹರನೆ ನಂಬಿದೆನೊ ನಿನ್ನ ||
ಭವಕಮಲ ಭವ ಭ್ರಕುಟ ಭವಹರನೆ ನೀ
ಎನ್ನ, ಅವಗುಣಗಳೆಣಿಸದಿರು ಕವಿಗೇಯನೆ |
ಅವನಿಯೊಳು ಎನಗೀಗ ಸುವಿವೇಕಿಗಳ ಸಂಗ
ಜವದಿ ಪಾಲಿಸು ಮುದದಿ ಜವನಾರಿ ಶಿವನೆ [೧]
ಬಲವಿರೋಧಿ ವಿನುತ ಇಳೆವರೂಥನೆ ನಿರುತ
ತಲೆಬಾಗಿ ಬೇಡುವೆನು ಸಲಹೆಂದು ನಾ |
ಎಲರುಣಿ ಭೂಷಣನೆ ಒಲಿದು ಪಾಲಿಸು ದಯದಿ
ಛಳಿ ಗಿರೀಶನ ಅಳಿಯ ನಳಿನಾರಿ ಧರನೆ [೨]
ಸಿರಿ ರಮಣ ಶಾಮಸುಂದರ ವಿಠಲ ಸಖನೆ
ಮೊರೆ ಹೊಕ್ಕೆ ಮರೆಯದಿರು ಗರ ಗೊರಳನೆ
ಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತು
ಕರ ಪಿಡಿದು ಕಾಪಾಡೊ ಕರಿಚರ್ಮ ಧರನೆ [೩]
aMbikA pati rakShisenna
shaMbarAri harane naMbideno ninna ||
bhavakamala bhava bhrakuTa bhavaharane nI
enna, avaguNagaLeNisadiru kavigEyane |
avaniyoLu enagIga suvivEkigaLa saMga
javadi pAlisu mudadi javanAri shivane [1]
balavirOdhi vinuta iLevarUthane niruta
talebAgi bEDuvenu salaheMdu nA |
elaruNi bhUShaNane olidu pAlisu dayadi
ChaLi girIshana aLiya naLinAri dharane [2]
siri ramaNa shAmasuMdara viThala sakhane
more hokke mareyadiru gara goraLane
karuNadiMdali ninna charaNa sEveyanittu
kara piDidu kApADo karicharma dharane [3]
Leave a Reply