Vidhi nishedhavu

Composer : Shri Purandara dasaru

By Smt.Shubhalakshmi Rao

ವಿಧಿನಿಷೇಧವು ನಿನ್ನವರಿಗೆಂತೋ ಹರಿಯೆ ||
ವಿಧಿ ನಿನ್ನ ಸ್ಮರಣೆಯು ನಿಷೇಧ ವಿಸ್ಮೃತಿಯೆಂಬ
ವಿಧಿಯನೊಂದನು ಬಲ್ಲವಗಲ್ಲದೆ ||ಪ||

ಮಿಂದದ್ದೆ ಗಂಗಾದಿ ಪುಣ್ಯ ತೀರ್ಥಂಗಳು
ಬಂದದ್ದೆ ಪುಣ್ಯಕಾಲ ಸಾಧುಜನರು
ನಿಂದದ್ದೆ ಗಯೆ ವಾರಾಣಾಸಿ ಕುರುಕ್ಷೇತ್ರ
ಸಂದೇಹವೇಕೆ ಮದದಾನೆ ಪೋದುದೆ ಬೀದಿ |೧|

ಕಂಡಕಂಡಲ್ಲಿ ವಿಶ್ವಾದಿ ಮೂರುತಿಯು ಭೂ-
ಮಂಡಲದಿ ಶಯನವೇ ನಮಸ್ಕಾರವು
ತಂಡತಂಡದ ಕ್ರಿಯೆಗಳೆಲ್ಲ ನಿನ್ನಯ ಪೂಜೆ
ಮಂಡೆ ಬಾಗಿಸಿ ನಮಿಪ ಭಾಗವತ ಜನಕೆ |೨|

ನಡೆದ ನಡಿಗೆಯು ಎಲ್ಲ ಲಕ್ಷ ಪ್ರದಕ್ಷಿಣೆಯು
ನುಡಿವ ನುಡಿಗಳು ಎಲ್ಲ ಗಾಯತ್ರಿ ಮಂತ್ರ
ಕೊಡುವುದೆಲ್ಲ ಭೂವಗ್ನಿ ಮುಖದಲ್ಲಿ ಆಹುತಿ
ದೃಢ ಭಕ್ತರೇನ ಮಾಡಿದರದೆ ಮರಿಯಾದೆ |೩|

ನಷ್ಟವಾದುದು ಎಲ್ಲ ಸಂಚಿತದ ಕರ್ಮವು
ಮುಟ್ಟಲಂಜುವುವೆಲ್ಲ ಆಗಾಮಿ ಕರ್ಮ
ಸ್ಪಷ್ಟವಾಗಿರುವ ಪ್ರಾರಬ್ಧ ಕರ್ಮವ ಮೀರಿ
ಮೆಟ್ಟಿ ಮೆಟ್ಟಿದ್ದೆ ಪಟ್ಟಣವೆಂಬುದೆ ನಿಜವು |೪|

ಎಲ್ಲಿ ಕುಳ್ಳಿರಲಲ್ಲಿ ಪ್ರಾಯೋಪವೇಶ ಮ-
ತ್ತೆಲ್ಲಿ ನೋಡಲು ಮನವು ಅಲ್ಲಿಗೆ ಸಮಾಧಿ
ಎಲ್ಲೆಲ್ಲಿಯು ಪುರಂದರವಿಠಲ ರಾಯನ
ಬಲ್ಲವರಿಗೆಲ್ಲಿಹುದು ಪಾಪ ಪುಣ್ಯದ ಲೇಪ |೫|


vidhiniShEdhavu ninnavarigeMtO hariye ||
vidhi ninna smaraNeyu niShEdha vismRutiyeMba
vidhiyanoMdanu ballavagallade ||pa||

miMdadde gaMgAdi puNya tIrthaMgaLu
baMdadde puNyakAla sAdhujanaru
niMdadde gaye vArANAsi kurukShEtra
saMdEhavEke madadAne pOdude bIdi |1|

kaMDakaMDalli viSvAdi mUrutiyu BU-
maMDaladi SayanavE namaskAravu
taMDataMDada kriyegaLella ninnaya pUje
maMDe bAgisi namipa BAgavata janake |2|

naDeda naDigeyu ella lakSha pradakShiNeyu
nuDiva nuDigaLu ella gAyatri maMtra
koDuvudella bhUvagni mukhadalli Ahuti
dRuDha BaktarEna mADidarade mariyAde |3|

naShTavAdudu ella saMcitada karmavu
muTTalaMjuvuvella AgAmi karma
spaShTavAgiruva prArabdha karmava mIri
meTTi meTTidde paTTaNaveMbude nijavu |4|

elli kuLLiralalli prAyOpavESa ma-
ttelli nODalu manavu allige samAdhi
ellelliyu puraMdaraviThala rAyana
ballavarigellihudu pApa puNyada lEpa |5|

Leave a Reply

Your email address will not be published. Required fields are marked *

You might also like

error: Content is protected !!